Site icon Vistara News

ಸಾಗರದಲ್ಲಿ ಮರ ಕೆತ್ತನೆ, ಕಲ್ಲು ಕೆತ್ತನೆ ತರಬೇತಿ ಉದ್ಘಾಟನೆ

ಸಾಗರ: ಇಲ್ಲಿನ ಶಿಲ್ಪ ಗುರುಕುಲದ 2022-23ನೇ ಸಾಲಿನ ಮರ ಕೆತ್ತನೆ, ಕಲ್ಲು ಕೆತ್ತನೆ ತರಬೇತಿಯ ಉದ್ಘಾಟನೆ ಭಾನುವಾರ (ನವೆಂಬರ್‌ ೬) ನಡೆಯಿತು. ಇಬ್ಬರು ವಿಶೇಷಚೇತನರನ್ನು ತರಬೇತಿಗೆ ದಾಖಲು ಮಾಡಿಕೊಂಡಿರುವುದು ಈ ಬಾರಿಯ ವಿಶೇಷ.

ಕರಕುಶಲ ನಿಗಮದ ಒಟ್ಟು 20 ವಿದ್ಯಾರ್ಥಿಗಳ ಈ ಶಾಲೆಗೆ ಆಯ್ಕೆಯಾಗಿದ್ದು, ತರಬೇತಿ, ಊಟ, ವಸತಿ, ಸಲಕರಣೆಗಳು, ಶೈಕ್ಷಣಿಕ ಪ್ರವಾಸ ಎಲ್ಲವೂ ಉಚಿತವಾಗಿ ನೀಡಲಾಗುತ್ತದೆ. ಆಯ್ಕೆ ಪ್ರಕ್ರಿಯೆಯನ್ನೂ ಪಾರದರ್ಶಕವಾಗಿ ನಡೆಸಲಾಗಿದೆ. ಬೀದರ್‌ನಿಂದ ಹಿಡಿದು ಕೊಡಗಿನವರೆಗೆ ಮೂಲೆ ಮೂಲೆಗಳಿಂದ ವಿದ್ಯಾರ್ಥಿಗಳು ನೇಮಕಗೊಂಡಿದ್ದಾರೆ.

ಸ್ಥಳೀಯ ಶಾಸಕ ಹರತಾಳು ಹಾಲಪ್ಪ ಉದ್ಘಾಟನೆ ನೆರವೇರಿಸಿದರು. ಕರ್ನಾಟಕ ಕರಕುಶಲ ನಿಗಮದ ಅಧ್ಯಕ್ಷ ಶ್ರೀ ಮಾರುತಿ ಅಷ್ಟಗಿ, ವ್ಯವಸ್ಥಾಪಕ ನಿರ್ದೇಶಕಿ ಡಿ ರೂಪಾ ಐಪಿಎಸ್, ಕೈಗಾರಿಕಾ ಇಲಾಖೆಯ ಜಂಟಿ ಹಾಗೂ ಉಪ ನಿರ್ದೇಶಕ ಕೌನ್ಸಿಲರ್ ಶಂಕರ್ ಕಾರ್ಯಕ್ರಮದಲ್ಲಿ ಇದ್ದರು.

ಇದನ್ನೂ ಓದಿ | ಕರಕುಶಲ ಮಂಡಳಿ ಅಧ್ಯಕ್ಷರಿಂದ ₹ 5 ಕೋಟಿ ಡೀಲ್‌: ರೂಪಾ ಮೌದ್ಗಿಲ್‌ ಆರೋಪ

Exit mobile version