Site icon Vistara News

Farmer Suicide: ಸಾಲಬಾಧೆಯಿಂದ ಹುಲಿಕಟ್ಟಿ ಗ್ರಾಮದಲ್ಲಿ ರೈತ ಆತ್ಮಹತ್ಯೆ

Farmer suicide

ಹರಪನಹಳ್ಳಿ: ಕೃಷಿಗಾಗಿ ಮಾಡಿದ ಸಾಲ ತೀರಿಸಲು ಆಗದೆ ರೈತನೊಬ್ಬ (Farmer) ನೇಣು ಹಾಕಿಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡ ಘಟನೆ ಹರಪನಹಳ್ಳಿ ತಾಲ್ಲೂಕಿನ ಹುಲಿಕಟ್ಟಿ ಗ್ರಾಮದಲ್ಲಿ ಶುಕ್ರವಾರ ಜರುಗಿದೆ.

ಕುದುರೆ ಹನುಮಂತಪ್ಪ (53) ಆತ್ಮಹತ್ಯೆಗೆ ಶರಣಾದ ರೈತ. ಮೃತ ಹನುಮಂತಪ್ಪ ಹಾರಕನಾಳು ವಿ.ಎಸ್.ಎಸ್ ಎನ್ ಹಾಗೂ ಇತರೆ ಬ್ಯಾಂಕುಗಳಲ್ಲಿ 2 ಲಕ್ಷ ರೂ ಹಾಗೂ ಕೈಗಡ 2 ಲಕ್ಷ ಹೀಗೆ ಒಟ್ಟು 4 ಲಕ್ಷ ರೂ. ಸಾಲ ಮಾಡಿದ್ದು, ಜಮೀನಿನಲ್ಲಿ ಬೆಳೆ ಬರದೆ ಸಾಲ ತೀರಿಸುವ ಕುರಿತು ಚಿಂತೆಗೀಡಾಗಿದ್ದ ಎಂದು ಹೇಳಲಾಗಿದೆ.

ಸಾಲ ತೀರಿಸಲು ಆಗದೆ ಮನನೊಂದು ನೇಣು ಬಿಗಿದುಕೊಂಡು ಸಾವಿಗೀಡಾಗಿದ್ದಾನೆ. ಮೃತ ಹನುಮಂತಪ್ಪಗೆ ಮೃತನಿಗೆ 4 ಪುತ್ರಿಯರು, ಓರ್ವ ಪುತ್ರನಿದ್ದಾನೆಂದು ತಿಳಿದುಬಂದಿದೆ. ಮೃತ ರೈತನ ಮನೆಗೆ ಬಿಜೆಪಿ ಮುಖಂಡ ಎಚ್.ಎಂ.ಮಲ್ಲಿಕಾರ್ಜುನ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎಚ್.ಚಂದ್ರಪ್ಪ, ಮುಖಂಡರಾದ ವೈ.ಕೆ.ಬಿ.ದುರುಗಪ್ಪ, ಎಚ್.ವಸಂತಪ್ಪ. ಎಸ್.ಆರ್ ತಿಮ್ಮಣ್ಣ ಕೆ.ಅಶೋಕ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.

ಇದನ್ನೂ ಓದಿ: Weather Report: ಉತ್ತರ ಒಳನಾಡಿನಲ್ಲಿ ವರುಣನಿಗೆ ವಿರಾಮ; ಕರಾವಳಿ, ದಕ್ಷಿಣ ಒಳನಾಡಲ್ಲಿ ಮುಂದುವರಿದ ಮಳೆ

ಈ ಕುರಿತು ಹರಪನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version