Site icon Vistara News

Independence Day 2023: ವಿಶ್ವಕ್ಕೆ ಪ್ರಕಾಶ ನೀಡುವುದಕ್ಕಾಗಿಯೇ ಭಾರತ ಸ್ವತಂತ್ರವಾಗಿದೆ: ಡಾ. ಮೋಹನ್ ಭಾಗವತ್

RSS Sarasanghachalak Dr Mohan Bhagwat

ಬೆಂಗಳೂರು: ಬಸವನಗುಡಿಯ ವಾಸವಿ ಕನ್ವೆನ್ಷನ್ ಹಾಲ್‌ನಲ್ಲಿ ಸಮರ್ಥ ಭಾರತ ವತಿಯಿಂದ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಆರ್‌ಎಸ್‌ಎಸ್‌ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಬಳಿಕ ಎಲ್ಲರಿಗೂ ಅವರು ಸ್ವಾತಂತ್ರ್ಯೋತ್ಸವದ (Independence Day 2023) ಶುಭಾಶಯ ಕೋರಿದರು.

ನಂತರ ಮಾತನಾಡಿದ ಡಾ. ಮೋಹನ್ ಭಾಗವತ್ ಅವರು, ಸ್ವಾತಂತ್ರ್ಯ ದಿವಸದ ಆನಂದದ ದಿನದಲ್ಲಿ ಎಲ್ಲರಿಗೂ ಶುಭಕಾಮನೆಗಳು. ಧ್ವಜಾರೋಹಣ, ಭಾರತ‌ಮಾತೆಗೆ ಪೂಜೆ ಹಾಗೂ ಸೂರ್ಯ ನಮಸ್ಕಾರ ಮಾಡಿದ್ದೇವೆ. ಪ್ರಕಾಶದ ಪೂಜೆ ಮಾಡುತ್ತೇವೆ, ಇದೇ ಭಾರತ. ಸ್ವಾತಂತ್ರ್ಯ ದಿನದಂದು ಸೂರ್ಯನ ನಮಸ್ಕಾರ ಅತ್ಯಂತ ಸೂಕ್ತವಾಗಿದೆ. ವಿಶ್ವಕ್ಕೆ ಪ್ರಕಾಶ ನೀಡುವುದಕ್ಕಾಗಿಯೇ ಭಾರತ ಸ್ವತಂತ್ರವಾಗಿದೆ. ಇಡೀ‌ ವಿಶ್ವಕ್ಕೆ ಇಂದು ಭಾರತದ ಅವಶ್ಯಕತೆ ಇದೆ ಎಂದು ಹೇಳಿದರು.

ಆರ್‌ಎಸ್‌ಎಸ್‌ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.

ಧ್ವಜದ ಸ್ವರೂಪದ ಬಗ್ಗೆ ನಾವು ಯೋಚಿಸಬೇಕು. ನಿರಂತರವಾಗಿ ಕ್ರಿಯಾಶೀಲರಾಗಿರಬೇಕು ಎಂಬುವುದನ್ನು ಕೇಸರಿ ಬಣ್ಣ ಸೂಚಿಸುತ್ತದೆ. ತ್ಯಾಗವನ್ನು ಮಾಡುವುದು ಸ್ವಾರ್ಥಕ್ಕಾಗಿ ಅಲ್ಲ, ಮನದ ವಿಕಾರಗಳನ್ನು ನಿರ್ಮೂಲನೆಗೊಳಿಸಲು ಬಿಳಿ ಬಣ್ಣವಿದೆ. ಲಕ್ಷ್ಮಿಯ ಪ್ರೀತಿಗೆ ಹಸಿರು ಬಣ್ಣವಿದ್ದು, ನಮ್ಮ ಸಮೃದ್ಧಿ ಸೂಚಿಸುತ್ತದೆ. ಈ‌ ಸಂದೇಶವನ್ನು ತ್ರಿವರ್ಣ ಧ್ವಜ ನೀಡುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ | Independence Day 2023: ಆಂತರ್ಯದ ಸ್ವಾತಂತ್ರ್ಯದೆಡೆಗೆ ನಾವು ಸಾಗುವುದು ಹೇಗೆ?

ಬೆಂಗಳೂರಿನಲ್ಲಿ ಸ್ವಾತಂತ್ರ್ಯೋತ್ಸವ ಶುಭಾಶಯ ಕೋರಿದ RSS ಮುಖ್ಯಸ್ಥ | 77th Independence Day Celebration

ನಾವು ಸಬಲರಾಗದಿದ್ದರೆ ನಮ್ಮನ್ನು ಒಡೆಯುವ ಶಕ್ತಿಗಳು ಬಲಶಾಲಿಯಾಗುತ್ತವೆ. ನಮ್ಮ ಅಸ್ಮಿತೆಯ ಆಧಾರದಲ್ಲಿ ದೇಶವನ್ನು ಕಟ್ಟಬೇಕು. ನಮಗೆ ಸ್ವಾಧೀನತೆ ಸಿಕ್ಕಿದೆ, ಆದರೆ ಸ್ವಾತಂತ್ರ್ಯ ಸಿಕ್ಕಿಲ್ಲ. ಜ್ಞಾನ, ಕರ್ಮದ ಆಧಾರದಲ್ಲಿ ಕೆಲಸ ಮಾಡಿದರೆ ಸ್ವಾತಂತ್ರ್ಯ ಸಿಗುತ್ತದೆ. ನಮ್ಮ ಜಲ, ಅರಣ್ಯ, ಜಾನುವಾರುಗಳನ್ನು ಸುಖಿಯಾಗಿಡಬೇಕು. ಈ ಎಲ್ಲ ವಿಚಾರಗಳನ್ನೂ ಮನಸ್ಸಿನಲ್ಲಿ ಇರಿಸಿಕೊಂಡು ಕೆಲಸ ಮಾಡಬೇಕು ಎಂದು ಹೇಳಿದರು.

Exit mobile version