ಬೆಂಗಳೂರು: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ (Independence Day) ಅಂಗವಾಗಿ ಅದಮ್ಯ ಚೇತನದಲ್ಲಿ ಫುಡ್ ಮೆನು ಎಂದಿನಂತೆ ಇರಲಿಲ್ಲ. ಮಕ್ಕಳಿಗೂ ಖುಷಿ ನೀಡುವ ರೀತಿಯಲ್ಲಿ ತ್ರಿವರ್ಣ ಭೋಜನವನ್ನು ಸಿದ್ಧಪಡಿಸಲಾಗಿತ್ತು.
19 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅದಮ್ಯ ಚೇತನವು ಎಲ್ಲ ವಿದ್ಯಾರ್ಥಿಗಳಿಗೆ ಕೇಸರಿ ಬಾತ್ ಸಹಿತ ಭೋಜನವನ್ನು ಉಣಬಡಿಸಲಾಗಿದೆ. ಅದ್ಯಮ ಚೇತನ ಅಡಿಯಲ್ಲಿ ಬರುವ ಎಲ್ಲ 255 ಶಾಲೆಗಳಿಗೆ ಕೇಸರಿ ಬಾತ್, ಜೀರಾ ರೈಸ್ ಮತ್ತು ಪಲಾವ್ ತಿನಿಸನ್ನು ನೀಡಲಾಯಿತು. ಈ ಮೂರು ತಿನಿಸುಗಳು ತ್ರಿವರ್ಣ ಧ್ವಜದ ಬಣ್ಣವಾದ ಕೇಸರಿ, ಬಿಳಿ, ಹಸಿರಿನಲ್ಲಿ ಇದ್ದಿದ್ದು ವಿಶೇಷವಾಗಿತ್ತು.
ಸಂಸ್ಥೆಯು ವಿಶೇಷ ಆಹಾರದ ಮೂಲಕ ವಿಶೇಷ ರೀತಿಯ ಗೌರವವನ್ನು ಸಲ್ಲಿಸಿದರೆ, ಮಕ್ಕಳ ಮೊಗದಲ್ಲಿ ಸಂತಸ ಎದ್ದು ಕಾಣುತ್ತಿತ್ತು.
ಇದನ್ನೂ ಓದಿ | Independence Day | ಹಿಟ್ಟುವಳ್ಳಿಯ ಸರ್ಕಾರಿ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮ