ಚಿಕ್ಕಬಳ್ಳಾಪುರ: ಕರ್ನಾಟಕದ ಜಲಿಯನ್ ವಾಲಾ ಬಾಗ್ ಎಂದೇ ಹೆಸರಾದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥಕ್ಕೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಭೇಟಿ ನೀಡಿದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಇಲ್ಲಿನ ಹುತಾತ್ಮರ ಸ್ಥೂಪಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಅರ್ಪಿಸಿದರು. ಬಿ.ಎಲ್ ಸಂತೋಷ್ ಅವರಿಗೆ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಸೇರಿದಂತೆ ಹಲವು ಬಿಜೆಪಿ ಮುಖಂಡರು ಸಾಥ್ ನೀಡಿದರು. ಬಳಿಕ ಸಂತೋಷ್ ಅವರು ವಿಧುರಾಶ್ವತ್ಥದಲ್ಲಿನ ಪುರಾಣ ಪ್ರಸಿದ್ಧ ಅಶ್ವಥನಾರಾಯಣಸ್ವಾಮಿಗೆ ಪೂಜೆ ಸಲ್ಲಿಸಿದರು. ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಇಲ್ಲಿನ ಸ್ಥೂಪಗಳಿಗೆ ಅಲಂಕಾರ ಮಾಡಲಾಗಿತ್ತು.
ವಿದುರಾಶ್ವತ್ಥದ ಭಯಾನಕ ಘಟನೆ
ವಿದುರಾಶ್ವತ್ಥದಲ್ಲಿ ೧೯೩೮ರ ಏಪ್ರಿಲ್ ೨೫ರಂದು ಭಾರತದ ಸ್ವಾತಂತ್ರ್ಯಸತ್ಯಾಗ್ರಹಿ ಹೋರಾಟಗಾರ ಮೇಲೆ ಗೋಲಿಬಾರ್ ನಡೆಸಲಾಗಿತ್ತು. ಅದರಲ್ಲಿ ೯ ಮಂದಿ ಮೃತಪಟ್ಟಿದ್ದರು. ವಿದುರ ನಾರಾಯಣ ದೇವಾಲಯದ ಹಿಂಬದಿಯ ಮರದ ತೋಪಿನಲ್ಲಿ ಈ ಸಭೆ ನಡೆದಿತ್ತು. ಅಲ್ಲಿಗೆ ನುಗ್ಗಿದ ಬ್ರಿಟಿಷರ ಪಡೆಗಳು ಜಲಿಯನ್ ವಾಲಾ ಬಾಗ್ ಮಾದರಿಯಲ್ಲೇ ಯಾರನ್ನೂ ಹೊರಹೋಗಲು ಬಿಡದೆ ಕೊಂದು ಹಾಕಿದ್ದರು.
ಇದನ್ನೂ ಓದಿ| Independence Day | ಅರುಂಧತಿ ನಕ್ಷತ್ರ ನೋಡಿ ರಾಷ್ಟ್ರ ಧ್ವಜ ಹಾರಿಸಿದ ಮದುಮಕ್ಕಳು