Site icon Vistara News

Independence day| ಮೋದಿ ಹುಟ್ಟಿರೋದೇ ಭಾರತವನ್ನು ಹಿಂದು ರಾಷ್ಟ್ರ ಮಾಡಲಿಕ್ಕೆ ಎಂದ ಶಾಸಕ ಯತ್ನಾಳ್‌

Basanagowda pateel yatnal on Shivamogga violence

ವಿಜಯಪುರ: ಪ್ರಧಾನಿ ನರೇಂದ್ರ ಮೋದಿಯವರು ಹುಟ್ಟಿರುವುದೇ ಭಾರತವನ್ನು ಹಿಂದು ರಾಷ್ಟ್ರ ಮಾಡಲಿಕ್ಕೆ ಎಂದು ಹೇಳಿದ್ದಾರೆ ಬಿಜೆಪಿ ಶಾಸಕ ಬಸನ ಗೌಡ ಪಾಟೀಲ್‌ ಯತ್ನಾಳ್‌.

ವಿಜಯಪುರದ ಸಿದ್ದೇಶ್ವರ ದೇವಸ್ಥಾನ ಮುಂಭಾಗ ನಡೆದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಚೇತನರಿಗೆ ತ್ರಿಚಕ್ರ ವಾಹನ ವಿತರಣೆ ಮಾಡಿ ಅವರು ಮಾತನಾಡಿದರು.

ʻʻಹಿಂದುಗಳು ಹೆಚ್ಚಿರೋದು ಹಿಂದು ರಾಷ್ಟ್ರ, ಮುಸ್ಲಿಮರು ಹೆಚ್ಚಿರೋದು ಪಾಕಿಸ್ತಾನ. ಮಹಾತ್ಮ ಗಾಂಧಿ ಇದೇ ರೀತಿ ದೇಶ ಒಡೆದುಕೊಟ್ಟಿದ್ದಾರೆ. ಪಾಕಿಸ್ತಾನ ಯಾಕೆ ಒಡೆದುಕೊಟ್ರೋ ಗೊತ್ತಿಲ್ಲ. ಆ ಪುಣ್ಯಾತ್ಮ (ಗಾಂಧೀಜಿ) ಮಾಡಿದ ತಪ್ಪಿನಿಂದ ಕೋಟ್ಯಂತರ ಹಿಂದುಗಳು ಸತ್ತರು. ಆದರೆ, ಗಾಂಧೀಜಿ ಮಾತ್ರ ಪಾಕಿಸ್ತಾನಕ್ಕೆ 50 ಕೋಟಿ ರೂ. ನೀಡುವಂತೆ ಒತ್ತಾಯಿಸಿ ಉಪವಾಸ ಕುಳಿತರು. ಇವರು ದೊಡ್ಡವರಾಗೋಕೆ ಹೋಗಿ ಹಿಂದೂಗಳ ರಕ್ತಪಾತವಾಯಿತುʼʼ ಎಂದು ಯತ್ನಾಳ್‌ ಹೇಳಿದರು.

ʻʻಮಂದೆ ಕೆಲವೇ ವರ್ಷಗಳಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾರತದ ವಶವಾಗಲಿದೆ. ಪ್ರಧಾನಿ ಮೋದಿ ಅಂತಹ ನಾಯಕರು ಇರುವಾಗ ಇದು ಸಾಧ್ಯವಿದೆʼʼ ಎಂದರು ಬಸನ ಗೌಡ ಪಾಟೀಲ್‌ ಯತ್ನಾಳ್‌.

ಇದನ್ನೂ ಓದಿ |ಹಿಂದುಗಳನ್ನು ಅಲ್ಪಸಂಖ್ಯಾತ ಎಂದು ಘೋಷಿಸುವುದು ನಮ್ಮ ಕೆಲಸವಲ್ಲ: ಸುಪ್ರೀಂ ಕೋರ್ಟ್‌

Exit mobile version