Site icon Vistara News

Independence day | ಸೌದಿಯಲ್ಲೂ ತಿರಂಗಾ ಹಾರಿಸಿ ಖುಷಿಪಟ್ಟ ಮೂಡಿಗೆರೆ ಕುಟುಂಬ

saudi swatanthrya

ಚಿಕ್ಕಮಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸಿ ಎಂದು ದೇಶವಾಸಿಗಳಿಗೆ ಹೇಳಿದ್ದರೂ ಅದರು ಜಗತ್ತಿನಾದ್ಯಂತ ಇರುವ ಭಾರತೀಯರಿಗೆ ಕೇಳಿಸಿದೆ. ಅದೇ ಕಾರಣಕ್ಕೆ ಸೌದಿ ಅರೇಬಿಯಾದಲ್ಲಿರುವ ಮೂಡಿಗೆರೆಯ ಕುಟುಂಬ ಕೂಡಾ ಮನೆಯಲ್ಲಿ ರಾಷ್ಟ್ರ ಧ್ವಜ ಹಾರಿಸಿ ಸಂಭ್ರಮಿಸಿದೆ.

ಹೌದು, ಸೌದಿ ಅರೇಬಿಯಾದಲ್ಲಿ ಕುಟುಂಬ ಸಮೇತ ಇರುವ ಮೂಡಿಗೆರೆಯ ಪರ್ವೀಜ್‌ ಖಾನ್‌ ತಮ್ಮ ಮನೆಯಲ್ಲೂ ತಿರಂಗಾ ಹಬ್ಬ ಮಾಡಿದ್ದಾರೆ. ಅವರು ತಮ್ಮ ಮಕ್ಕಳೊಂದಿಗೆ ಧ್ವಜ ಹಿಡಿದು ಸಂಭ್ರಮಿಸಿದ್ದಾರೆ.

ಪರ್ವೀಜ್‌ ಖಾನ್‌ ಕುಟುಂಬ ಕೆಲವು ವರ್ಷಗಳಿಂದ ಸೌದಿಯಲ್ಲಿ ನೆಲೆಸಿದೆ. ಭಾರತಕ್ಕೆ ಬಂದು ಹೋಗುತ್ತಾರೆ. ಮೂಡಿಗೆರೆ ಪಟ್ಟಣದವರಾದ ಇವರು ʻʻಎಲ್ಲೇ ಇದ್ದರೂ ನಾವು ಭಾರತೀಯರುʼʼ ಎನ್ನುವ ಪ್ರೀತಿಯನ್ನು ಹೊಂದಿದ್ದಾರೆ. ಇಡೀ ದೇಶವೇ ಧ್ವಜ ಹಾರಿಸಿ ಸಂಭ್ರಮಿಸುವಾಗ ನಾನು, ನನ್ನ ಕುಟುಂಬ ಇದನ್ನು ಮಿಸ್‌ ಮಾಡಿಕೊಳ್ಳಬಾರದು ಎಂಬ ಕಾರಣಕ್ಕೆ ಧ್ವಜ ತಂದು ಹಾರಿಸಿ ಖುಷಿಪಟ್ಟೆವು. ಮಕ್ಕಳಿಗಂತೂ ತುಂಬಾ ಖುಷಿ ಆಯಿತು ಎಂದಿದ್ದಾರೆ ಪರ್ವೀಜ್‌.
ಇದನ್ನೂ ಓದಿ| Independence day | ಸೊಂಡಿಲಲ್ಲಿ ತಿರಂಗಾ ಹಿಡಿದು ಪ್ರಾರ್ಥನೆ ಮಾಡಿದ ಲಕ್ಷ್ಮಿ, ಮೈಗೂ ತ್ರಿವರ್ಣ!

Exit mobile version