ತುಮಕೂರು: ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್ ಅವರು ಮಂಗಳವಾರ ನಡೆದ ತಿರಂಗಾ ಯಾತ್ರೆಯಲ್ಲಿ ಮಾಡಿದ ಭರ್ಜರಿ ಡ್ಯಾನ್ಸ್ ಭಾರಿ ಸದ್ದು ಮಾಡಿದೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ನಡೆದ ತಿರಂಗಾ ಯಾತ್ರೆಯಲ್ಲಿ ಅವರು ತಮಟೆ ಸದ್ದಿಗೆ ಭರ್ಜರಿ ಡಾನ್ಸ್ ಮಾಡಿದ್ದಾರೆ. ಅಭಿಮಾನಿಗಳ ಜತೆ ಸಖತ್ ಸ್ಟೆಪ್ ಹಾಕಿರುವ ಅವರು ತಾವೊಬ್ಬ ಒಳ್ಳೆಯ ಎಂಟರ್‌ಟೇನರ್ ಎಂಬುದನ್ನೂ ಸಾಬೀತು ಮಾಡಿದರು.
ಶಾಸಕ ಜ್ಯೋತಿ ಗಣೇಶ್ ಅವರು ಕಳೆದ ಮೂರು ದಿನಗಳಿಂದ ಅಮೃತ ಮಹೋತ್ಸವ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ತುಮಕೂರು ನಗರದಲ್ಲೆಲ್ಲ ಸಾಕಷ್ಟು ಬ್ಯಾನರ್ ಫ್ಲೆಕ್ಸ್‌ಗಳನ್ನು ಹಾಕಿ ಸೌಂಡ್ ಮಾಡಿದ್ದರು.
ಸೋಮವಾರ ಆಯೋಜಿಸಿದ್ದ ತಿರಂಗಾ ಯಾತ್ರೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು. ಆಗ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಕುಣಿಯಲು ಶುರು ಮಾಡಿದ ಜ್ಯೋತಿ ಗಣೇಶ್ ಬಳಿ ಮೈ ಬಿಚ್ಚಿ, ಮನ ಬಿಚ್ಚಿ ಕುಣಿದಾಡಿದರು. ಶಾಸಕರ ಜೊತೆ ಮಾಜಿ ಟೂಡಾ ಅಧ್ಯಕ್ಷ ಬಾವಿಕಟ್ಟೆ ನಾಗಣ್ಣ ಅವರೂ ಕುಣಿದರು. ಶಾಸಕರ ಡ್ಯಾನ್ಸ್‌ಗೆ ಅಭಿಮಾನಿಗಳಿಂದ ಶಿಳ್ಳೆ, ಚಪ್ಪಾಳೆ ದೊಡ್ಡ ಮಟ್ಟದಲ್ಲಿ ಕೇಳಿಬಂತು.