ಬೆಳಗಾವಿ: ಪ್ರಯಾಣಿಕರನ್ನು ಹೊತ್ತೊಯ್ದ ಇಂಡಿಗೋ ವಿಮಾನ (Indigo Airlines) ಅವರ ಲಗೇಜ್ ಬ್ಯಾಗ್‌ಗಳನ್ನು ಬೆಂಗಳೂರಲ್ಲೇ ಬಿಟ್ಟು ಬಂದ ವಿಚಿತ್ರ ಘಟನೆ ಭಾನುವಾರ ನಡೆದಿದೆ. ನಗರಕ್ಕೆ ತಲುಪಿದ ನಂತರ ತಮ್ಮ ಬ್ಯಾಗ್ ಹುಡುಕಿ ಹುಡುಕಿ ಪ್ರಯಾಣಿಕರು ಕಂಗಾಲಾಗಿದ್ದಾರೆ.
ಸಂಜೆ 5.55ಕ್ಕೆ ಬೆಂಗಳೂರಿನಿಂದ ಹೊರಟಿದ್ದ ವಿಮಾನ ಬೆಳಗಾವಿಗೆ ರಾತ್ರಿ 7.30ಕ್ಕೆ ತಲುಪಿತು. ಸುಮಾರು 22 ಪ್ರಯಾಣಿಕರ ಬ್ಯಾಗ್‌ಗಳನ್ನು ಸಿಬ್ಬಂದಿ ಬೆಂಗಳೂರಿನಲ್ಲಿಯೇ ಬಿಟ್ಟುಬಂದಿದ್ದಾರೆ. ಅದರಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಕೂಡ ಆಗಿಮಿಸಿದ್ದು, ಅವರ ಬ್ಯಾಗ್ ಸಹ ಮಿಸ್ಸಿಂಗ್ ಆಗಿದೆ. ಮಲೇಷಿಯಾ ವಿದ್ಯಾರ್ಥಿಗಳ ಬ್ಯಾಗ್ ದೊಡ್ಡದಿದ್ದವು, ಹೀಗಾಗಿ ಕೆಲ ಪ್ರಯಾಣಿಕರ ಬ್ಯಾಗ್ ಅಲ್ಲೇ ಇದೆ ಎಂದು ಸಿಬ್ಬಂದಿ ಹೇಳಿದ್ದಾರೆ.
ನಾಳೆ ಉಳಿದ ಪ್ರಯಾಣಿಕರ ಬ್ಯಾಗ್ ತರಿಸಿಕೊಡಲಾಗುವುದು ಎಂದು ಸಿಬ್ಬಂದಿ ಹೇಳಿದ್ದು, ಇದಕ್ಕೆ ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ. ಬ್ಯಾಗ್ ಇಲ್ಲದೆ ಕಂಗೆಟ್ಟ ಹಲವು ಪ್ರಯಾಣಿಕರು ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿ, ಕಾಯುತ್ತಾ ಇದ್ದದ್ದು ಕಂಡುಬಂತು.
ಇದನ್ನೂ ಓದಿ | Viral News: ಬಿಸಿಗಾಳಿಯ ಸುದ್ದಿ ಓದುತ್ತಿದ್ದಾಗಲೇ ಲೈವ್‌ನಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಟಿವಿ ನಿರೂಪಕಿ
ಈ ಕುರಿತು ಮಾತನಾಡಿದ ಬೆಳಗಾವಿ ವಿಮಾನ ನಿಲ್ದಾಣದ ನಿರ್ದೇಶಕ ತ್ಯಾಗರಾಜನ್ ಮಾತನಾಡಿ, ವಿಮಾನದಲ್ಲಿ ಭಾರ ಹೆಚ್ಚಾಗಿರುವುದು ವಿಮಾನ ಟೇಕ್‍ಆಫ್ ಆಗುವ ಕೆಲವೇ ಕ್ಷಣಗಳ ಮೊದಲು ಗೊತ್ತಾಗುತ್ತದೆ. ಆ ಸಂದರ್ಭದಲ್ಲಿ ಹೆಚ್ಚುವರಿ ಲಗೇಜ್‍ಗಳನ್ನು ಇಳಿಸಲಾಗುತ್ತದೆ. ಪ್ರಯಾಣಿಕರು ಆಗಲೇ ಹೊರಡುವ ಕ್ಷಣವಾಗಿರುವ ಕಾರಣ ಸಿಬ್ಬಂದಿಗೆ ಮುಂಚಿತವಾಗಿ ಮಾಹಿತಿ ನೀಡಲು ಸಾಧ್ಯವಾಗಿಲ್ಲ. ಬೆಂಗಳೂರಿನಲ್ಲಿಯೇ ಉಳಿದಿರುವ ಲಗೇಜ್‍ಗಳನ್ನು ಆಯಾ ಪ್ರಯಾಣಿಕರ ಮನೆಗೆ ಇಂಡಿಗೋ ಸಂಸ್ಥೆ ಸೋಮವಾರ ತಲುಪಿಸಲಿದೆ ಎಂದು ತಿಳಿಸಿದ್ದಾರೆ.
ಚಲಿಸುತ್ತಿರುವ ಕಾರಿನ ಬಾಗಿಲಿನಲ್ಲಿ ನೇತಾಡುವ ಯುವಕ; ಶಾಕಿಂಗ್ ವಿಡಿಯೊ ನೋಡಿ
ನವದೆಹಲಿ: ಇತ್ತೀಚಿನ ದಿನಗಳಲ್ಲಿ ಜನಪ್ರಿಯತೆ ಗಳಿಸಲು ಯುವ ಜನತೆ ಯಾವ ಮಟ್ಟಕ್ಕೆ ಬೇಕಾದರೂ ಇಳಿಯಲು ತಯಾರಿರುತ್ತಾರೆ. ತಮ್ಮ ಜೀವವನ್ನೇ ಅಪಾಯಕ್ಕೆ ತಳ್ಳಿ ಸಾಹಸ ನಡೆಸಿ ಅದನ್ನು ಚಿತ್ರೀಕರಿಸಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುವ ಪ್ರವೃತ್ತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದಕ್ಕೆ ಮತ್ತೊಂದು ಉದಾಹರಣೆ ಇದು. ಚಲಿಸುತ್ತಿರುವ ಕಾರಿನ ಬಾಗಿಲಿನಲ್ಲಿ ಯುವಕನೊಬ್ಬ ನೇತಾಡುತ್ತಿರುವುದನ್ನು ತೋರಿಸುವ ವಿಡಿಯೊ ವೈರಲ್ (Viral News) ಆಗಿದ್ದು, ನೆಟ್ಟಿಗರು ಒಂದು ಕ್ಷಣ ದಂಗಾಗಿದ್ದಾರೆ. ಜೀವವನ್ನೇ ಅಪಾಯಕ್ಕೆ ತಳ್ಳಬಹುದಾದ ಈ ಹುಚ್ಚು ಸಾಹಸ ನೋಡಿ ಅನೇಕರು ಆ ಯುವಕನಿಗೆ ಛೀಮಾರಿ ಹಾಕುತ್ತಿದ್ದಾರೆ.
ಚಲಿಸುತ್ತಿರುವ ಕಾರಿನ ಬಾಗಿಲಿಗೆ ತೊಟ್ಟಿಲಂತೆ ಕಟ್ಟಿರುವ ಪ್ಲಾಸ್ಟಿಕ್‌ನಲ್ಲಿ ಯುವಕನೊಬ್ಬ ಮಗುವಿನಂತೆ ಮಲಗಿರುತ್ತಾನೆ. ಕಾರು ಚಲಿಸುತ್ತಿರುವಾಗ ಆತ ಅದರಲ್ಲಿ ನೇತಾಡಿಕೊಂಡು ಆನಂದಿಸುತ್ತಾನೆ. ಚಾಲಕ ನಗುತ್ತ ಆ ಯುವಕನೊಂದಿಗೆ ತಮಾಷೆ ಮಾಡುತ್ತಾನೆ. ಹಿಂದಿನ ಸೀಟಿನಲ್ಲಿರುವ ಇನ್ನೋರ್ವ ಯುವಕನೂ ಈ ಹುಚ್ಚು ಸಾಹಸಕ್ಕೆ ಸಾಕ್ಷಿಯಾಗುತ್ತಾನೆ. ಈ ಕಾರು ಹೈವೆಯಲ್ಲಿ ಸಾಗುತ್ತಿರುತ್ತದೆ. ಇದು ವೈರಲ್ ವಿಡಿಯೊದಲ್ಲಿ ಕಂಡು ಬರುವ ದೃಶ್ಯ. ಇದನ್ನು ಎಲ್ಲಿ ಚಿತ್ರೀಕರಣಿಸಲಾಗಿದೆ ಎನ್ನುವುದು ತಿಳಿದು ಬಂದಿಲ್ಲ.
ಈ ಪೋಸ್ಟ್ ಅನ್ನು ವಾರದ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ. ಪೋಸ್ಟ್ ಮಾಡಿದಾಗಿನಿಂದ ಇದನ್ನು 90 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ. ಎರಡು ದಶಲಕ್ಷಕ್ಕೂ ಹೆಚ್ಚು ಲೈಕ್ ದೊರೆತಿದೆ. ಸದ್ಯ ವಿಡಿಯೊ ನೋಡಿದ ನೆಟ್ಟಿಗರು ಈ ಯುವಕರ ಗುಂಪನ್ನು ತರಾಟೆಗೆ ತೆಗೆದುಕೊಂಡಿದೆ. ಸಾವರ್ಜನಿಕ ಸ್ಥಳಗಳಲ್ಲಿ ಇಂತಹ ಅಪಾಯಕಾರಿ ಸಾಹಸ ಪ್ರದರ್ಶಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹಲವರು ಆಗ್ರಹಿಸಿದ್ದಾರೆ. ಇಂತಹವರು ತಾವು ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವುದ ಜತೆಗೆ ಇತರರನ್ನೂ ಅಪಾಯಕ್ಕೆ ಸಿಲುಕಿಸುತ್ತಾರೆ. ಅಂತಹ ಪ್ರವೃತ್ತಿಗೆ ಕಡಿವಾಣ ಹಾಕಲೇಬೇಕು. ಇಂತಹವರ ಚಾಲನಾ ಪರವಾನಗಿ ರದ್ದು ಪಡಿಸಬೇಕು ಎಂದು ನೆಟ್ಟಿಗರು ಅಧಿಕೃತರ ಗಮನ ಸೆಳೆದಿದ್ದಾರೆ.