ಬೆಂಗಳೂರು: ಅಗಸ್ತ್ಯ ಸಂಸ್ಥೆ ಮತ್ತು ಅಡೋಬ್ ಇನ್ನೋವೇಶನ್ ಹಬ್ (Innovation Hub) ವತಿಯಿಂದ ಡಿ.ಜೆ. ಹಳ್ಳಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಇನ್ನೊವೇಶನ್ ಹಬ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದನ್ನು ಕರ್ನಾಟಕ ಪಬ್ಲಿಕ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪಾಲಾಕ್ಷ ಉದ್ಘಾಟಿಸಿದರು.
ಕರ್ನಾಟಕ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕಿ ಸಮೀನಾ ಬೇಗಂ ಮಾತನಾಡಿ, ಎಲ್ಲಾ ಶಾಲೆಯ ವಿದ್ಯಾರ್ಥಿಗಳು ನಮ್ಮ ಪರಿಸರ ಸುತ್ತಮುತ್ತ ಇರುವ ಒಂದೊಂದು ಸಮಸ್ಯೆಯನ್ನು ಆಯ್ಕೆ ಮಾಡಿಕೊಂಡು ಆ ಸಮಸ್ಯೆಗೆ ಎಲ್ಲರೂ ಐಡಿಯಾ ಮಾಡಿ ಒಂದೊಂದು ಮಾದರಿ ಮುಖಾಂತರ ಪರಿಹಾರವನ್ನು ನೀಡಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳು ಕೂಡ ಹೊಸ ಹೊಸ ಇನ್ನೊವೇಶನ್‌ಗಳನ್ನು ಮಾಡುತ್ತಾರೆ ಎಂಬುವುದು ಇದರಿಂದ ತಿಳಿದುಬರುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಸೇರಿ ಒಟ್ಟು ಆರು ಶಾಲೆಗಳಿಂದ ಹಲವಾರು ವಿದ್ಯಾರ್ಥಿಗಳು ಒಂದೊಂದು ಇನ್ನೊವೇಟಿವ್ ಮಾಡೆಲ್‌ಗಳನ್ನು ಮಾಡಿದರು. ಈ ಮೇಳದಲ್ಲಿ ಒಟ್ಟು 30 ಮಾಡೆಲ್‌ಗಳ ಪ್ರದರ್ಶಿಸಿ ಮತ್ತು ಅದರ ಬಗ್ಗೆ ವಿವರಣೆಯನ್ನು ನೀಡಿದರು. ಒಟ್ಟಾರೆಯಾಗಿ ಈ ವಿಜ್ಞಾನ ಇನ್ನೊವೇಶನ್ ಮೇಳದಲ್ಲಿ 15 ಶಿಕ್ಷಕರು 470 ವಿದ್ಯಾರ್ಥಿಗಳು ಮತ್ತು ಅವರ ಪೋಷಕರು, ಅಗಸ್ತ್ಯ ಸಂಸ್ಥೆಯ ಮಾರ್ಗದರ್ಶಕರು ಭಾಗವಹಿಸಿದ್ದರು.
ಇದನ್ನೂ ಓದಿ | Theft Case | ಕನ್ನ ಹಾಕುತ್ತಿದ್ದ ಅಳಿಯ, ಚಿನ್ನ ಮಾರುತ್ತಿದ್ದ ಅತ್ತೆ ಪೊಲೀಸರ ಬಲೆಗೆ