Site icon Vistara News

Bengaluru News: ಬಾಲಕಾರ್ಮಿಕ ಪದ್ಧತಿ ತಡೆಗೆ ಕಾರ್ಮಿಕ ಇಲಾಖೆಯಿಂದ ಜಾಗೃತಿ

innovative awareness campaign by the Labor Department against child labor in Bangalore

ಬೆಂಗಳೂರು: ಬಾಲಕಾರ್ಮಿಕ ಪದ್ಧತಿಯು (Child labour) ಎಳೆಯ ಮಕ್ಕಳ ಉಜ್ವಲ ಭವಿಷ್ಯಕ್ಕೆ ಕುತ್ತು, ಹೀಗಾಗಿ ಬಾಲಕಾರ್ಮಿಕ ಪದ್ಧತಿಯನ್ನು ವಿರೋಧಿಸುವ ಕುರಿತು ಕಾರ್ಮಿಕ ಇಲಾಖೆಯ (Labor Department) ಮೂಲಕ ಭಿತ್ತಿಚಿತ್ರವನ್ನು ಪ್ರದರ್ಶಿಸಿ, ಜಾಗೃತಿಯನ್ನು (Awareness) ಮೂಡಿಸುವ ವಿಶಿಷ್ಟ ಪ್ರಯತ್ನ ನಡೆಸಲಾಗಿದೆ ಎಂದು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಜಂಟಿ ಕಾರ್ಯದರ್ಶಿ ಡಾ.ಜಿ ಮಂಜುನಾಥ್ ತಿಳಿಸಿದರು.

ಬೆಂಗಳೂರಿನ ವಿಠ್ಠಲ್ ಮಲ್ಯ ವೃತ್ತದಲ್ಲಿ ಕಾರ್ಮಿಕ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ಧತಿ ವಿರುದ್ಧ ಭಿತ್ತಿಚಿತ್ರ ಪ್ರದರ್ಶನ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇದನ್ನೂ ಓದಿ: Aditya-L1: ಈ ದಿನಾಂಕದಂದು ಮಿಷನ್ ಆದಿತ್ಯ ಎಲ್ 1 ಆರಂಭಿಸಲು ಇಸ್ರೊ ಸಿದ್ಧತೆ

ಬಾಲ ಕಾರ್ಮಿಕರು ಕಂಡು ಬಂದಲ್ಲಿ ಕೂಡಲೇ ಸಹಾಯವಾಣಿ ಸಂಖ್ಯೆ 1092 ಹಾಗೂ 112 ಗೆ ಕರೆ ಮಾಡಿ ತಿಳಿಸಿ ಈ ಮೂಲಕ ನಾವು ಅಗತ್ಯ ಕ್ರಮವನ್ನು ತೆಗೆದುಕೊಳ್ಳುತ್ತೇವೆ ಎಂದು ಅವರು ಇದೇ ವೇಳೆ ಹೇಳಿದರು.

ಮಕ್ಕಳಿಗೆ ಶಾಲೆಗೆ ಕಳುಹಿಸಿ ಕೆಲಸಕ್ಕಲ್ಲ, ಬಾಲ್ಯ ಅರಳಲಿ ಬಾಳು ಬೆಳಗಲಿ, ಮಕ್ಕಳಿಗೆ ಬೇಕು ಓದು- ಬರಹ, ಮಕ್ಕಳಿಗೆ ಶಿಕ್ಷಣ ದೇಶಕ್ಕೆ ಭವಿಷ್ಯ, ಅರಳುವ ದಿನಗಳಲ್ಲಿ ಅಳಿಸಬೇಡಿ, ಮಕ್ಕಳನ್ನು ಶಾಲೆಯಲ್ಲಿ ನೋಡೋಣ ಬೀದಿಯಲ್ಲಿ, ಸರ್ಕಲ್‌ಗಳಲ್ಲಿ ವ್ಯಾಪಾರ ಮಾಡುವುದನ್ನು ಅಲ್ಲ ಎಂಬುವುದು ಸೇರಿದಂತೆ ಅನೇಕ ಘೋಷ ವಾಕ್ಯಗಳುಳ್ಳ ಭಿತ್ತಿಚಿತ್ರಗಳನ್ನು ಪ್ರದರ್ಶಿಸಿ, ಜಾಗೃತಿಯನ್ನು ಮೂಡಿಸಲಾಯಿತು.

ಇದನ್ನೂ ಓದಿ: Haveri News: ಗೃಹ ಪ್ರವೇಶದ ಊಟ ಸೇವಿಸಿ 35ಕ್ಕೂ ಹೆಚ್ಚು ಜನ ಅಸ್ವಸ್ಥ

ಈ ಸಂದರ್ಭದಲ್ಲಿ ಖ್ಯಾತ ಕನ್ನಡ ಚಿತ್ರರಂಗದ ನಿರ್ದೇಶಕ ಹಾಗೂ ನಟ ಹೇಮಂತ್ ಹೆಗಡೆ ಹಾಗೂ ಇಲಾಖೆಯ ಅಧಿಕಾರಿಗಳು ಮತ್ತು ಇತರರು ಪಾಲ್ಗೊಂಡಿದ್ದರು.

Exit mobile version