Site icon Vistara News

Insulting National Flag: ರಾಷ್ಟ್ರಧ್ವಜಕ್ಕೆ ಅಪಮಾನ; ಕಸದ ಬುಟ್ಟಿಗೆ ಎಸೆದು ಖಾಸಗಿ ಶಾಲೆ ಎಡವಟ್ಟು

Insulting National Flag

#image_title

ಚಿತ್ರದುರ್ಗ: ಖಾಸಗಿ ಶಾಲೆಯಿಂದ ರಾಷ್ಟ್ರ ಧ್ವಜಕ್ಕೆ (Insulting National Flag) ಅಪಮಾನ ಮಾಡಿರುವ ಘಟನೆ ಜಿಲ್ಲೆಯ ಚಳ್ಳಕೆರೆಯಲ್ಲಿ ನಡೆದಿದೆ. ಚಳ್ಳಕೆರೆಯ ವಿಠಲ್ ನಗರದಲ್ಲಿರುವ ಚಿನ್ಮಯ್ ಸ್ಕೂಲ್‌ನಲ್ಲಿ ರಾಷ್ಟ್ರಧ್ವಜವನ್ನು ಕಸದ ಬುಟ್ಟಿಗೆ ಎಸೆದು ಬಾರಿ ಎಡವಟ್ಟು ಮಾಡಲಾಗಿದೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಶಾಲೆಯ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ಶಾಲೆಯ ಮುಂಭಾಗದಲ್ಲಿರುವ ಖಾಲಿ ನಿವೇಶನದ ಕಸದಲ್ಲಿ ರಾಷ್ಟ್ರಧ್ವಜ ಕಂಡುಬಂದಿದೆ. ಶಾಲೆಯ ಸಿಬ್ಬಂದಿ ಧ್ವಜವನ್ನು ಕಸದ ತೊಟ್ಟಿಗೆ ಎಸೆದಿದ್ದಾರೆ ಎನ್ನಲಾಗಿದೆ. ಮಕ್ಕಳನ್ನು ಶಾಲೆಗೆ ಬಿಡಲು ಹೋದ ಸಮಯದಲ್ಲಿ ಪೋಷಕರು ಈ ಎಡವಟ್ಟನ್ನು ಗಮನಿಸಿ ಮೊಬೈಲ್‌ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ಹೀಗಾಗಿ ಶಾಲಾ ಸಿಬ್ಬಂದಿ ನಡೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಇದನ್ನೂ ಓದಿ | Moral policing: ನೈತಿಕ ಪೊಲೀಸ್‌ಗಿರಿ ತಡೆಗೆ ಆ್ಯಂಟಿ ಕಮ್ಯುನಲ್ ವಿಂಗ್: ಡಾ. ಜಿ. ಪರಮೇಶ್ವರ್

ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದ್ದರೂ ಪೊಲೀಸರು ಯಾವುದೇ ಕೇಸ್‌ ದಾಖಲಿಸಿಲ್ಲ. ಕೂಡಲೇ ಶಾಲಾ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ.

Exit mobile version