Site icon Vistara News

Rastrotthana Parishat: ರಾಷ್ಟ್ರೋತ್ಥಾನದಲ್ಲಿ ಇಂದು ಸಂಜೆ 6.30ಕ್ಕೆ ಹಿಂದು ಪರ ಚಿಂತಕ ಕಾನ್ರಾಡ್‌ ಎಲ್ಸ್ಟ್‌ ಜತೆ ಸಂವಾದ

Koenraad Elst

ಬೆಂಗಳೂರು: ಖ್ಯಾತ ಲೇಖಕ, ಹಿಂದು ಪರ ಚಿಂತಕ (Pro Hindu thinker) ಕಾನ್ರಾಡ್‌ ಎಲ್ಸ್ಟ್‌ (Koenraad Elst) ಅವರೊಂದಿಗೆ ಸಂವಾದ ಕಾರ್ಯಕ್ರಮವನ್ನು ಮಂಗಳವಾರ (ಡಿಸೆಂಬರ್ 19) ಸಂಜೆ 6.30ಕ್ಕೆ ಚಾಮರಾಜಪೇಟೆಯ ರಾಷ್ಟ್ರೋತ್ಥಾನ ಪರಿಷತ್‌ನಲ್ಲಿ (Rastrotthana Parishat) ಏರ್ಪಡಿಸಲಾಗಿದೆ.

ಕಾನ್ರಾಡ್‌ ಎಲ್ಸ್ಟ್‌ ಅವರು ಮೂಲತಃ ಬೆಲ್ಜಿಯಂನವರಾಗಿದ್ದಾರೆ. 1998 ರಲ್ಲಿ ಕ್ಯಾಥೊಲಿಕ್ ಯೂನಿವರ್ಸಿಟಿ ಆಫ್ ಲ್ಯೂವೆನ್ (ಬೆಲ್ಜಿಯಂ) ನಿಂದ ಓರಿಯಂಟಲ್ ಫಿಲಾಲಜಿ & ಹಿಸ್ಟರಿಯಲ್ಲಿ ಡಾಕ್ಟರೇಟ್ ಪಡೆದಿದ್ದಾರೆ. ಸೈನಾಲಜಿ, ಇಂಡೋ-ಇರಾನಿಯನ್ ಸ್ಟಡೀಸ್ ಮತ್ತು ಫಿಲಾಸಫಿಯಲ್ಲಿ ಎಂಎ ಪದವಿಗಳನ್ನು ಪಡೆದಿದ್ದಾರೆ. ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಸಂಶೋಧಕರಾಗಿ ಅಭ್ಯಾಸ ಮಾಡಿದ್ದಾರೆ.

ಕಾನ್ರಾಡ್‌ ಎಲ್ಸ್ಟ್‌ ಅವರು ಪ್ರಸ್ತುತ ಸಾಂಚಿ ಬೌದ್ಧ ಮತ್ತು ಭಾರತೀಯ ಅಧ್ಯಯನಗಳ ವಿಶ್ವವಿದ್ಯಾಲಯಕ್ಕೆ (ಸುಬಿಐಎಸ್) ಸಂಯೋಜಿತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಅಹಮದಾಬಾದ್‌ನ ಸಿಂಧೂ ವಿಶ್ವವಿದ್ಯಾಲಯ ಮತ್ತು ಹೂಸ್ಟನ್‌ನ ಖಾಸಗಿ ಇಂಡಾಲಜಿ ಅಕಾಡೆಮಿಯಲ್ಲಿ ಸಹ ಬೋಧನೆಯನ್ನು ಮಾಡುತ್ತಾರೆ.

Koenraad Elst

ಇದನ್ನೂ ಓದಿ: Yettinahole Project: ಅಕ್ರಮದ ಹೊಳೆಯಾದ ಎತ್ತಿನಹೊಳೆ ಪ್ರಾಜೆಕ್ಟ್; ಭ್ರಷ್ಟಾಚಾರದ ಹಿಂದಿದೆಯಾ ಮಾಫಿಯಾ?

ರಾಷ್ಟ್ರೋತ್ಥಾನ ಪರಿಷತ್‌ನಲ್ಲಿ ಮಂಗಳವಾರ ಸಂಜೆ ನಡೆಯುವ ಈ ಸಂವಾದವನ್ನು ಫೇಸ್‌ಬುಕ್‌ನ ಥಿಂಕರ್ಸ್‌ ಫೋರಂನಲ್ಲಿ ಲೈವ್‌ ವೀಕ್ಷಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ 8722552497 ಗೆ ಸಂಪರ್ಕಿಸಬಹುದು.

Exit mobile version