ದೇವನಹಳ್ಳಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ (International Womens Day 2023) ಅಂಗವಾಗಿ ಯಲಹಂಕದ ನವಚೇತನ ಆಸ್ಪತ್ರೆ ವತಿಯಿಂದ ಬೃಹತ್ ವಾಕಥಾನ್ ಆಯೋಜನೆ ಮಾಡಲಾಗಿತ್ತು. ನಟಿ ಅನು ಪ್ರಭಾಕರ್ ಹಾಗೂ ಶಾಸಕ ಎಸ್.ಆರ್. ವಿಶ್ವನಾಥ್ ಹಾಗೂ ಪದ್ಮಶ್ರೀ ಪುರಸ್ಕೃತೆ ತುಳಸಿ ಚಾಲನೆ ನೀಡಿದರು.
ಈ ವಾಕಥಾನ್‌ನಲ್ಲಿ 1000ಕ್ಕೂ ಹೆಚ್ಚು ಮಹಿಳೆಯರು ಹಾಗೂ ಶಾಲಾ ಮಕ್ಕಳು ಭಾಗಿಯಾಗಿದ್ದರು. ನವಚೇತನ ಆಸ್ಪತ್ರೆಯಿಂದ ಯಲಹಂಕ ನಗರದಲ್ಲಿ 3 ಕಿಲೋ ಮೀಟರ್‌ವರೆಗೂ ನಡಿಗೆ ಮೂಲಕ ಮಹಿಳಾಮಣಿಗಳು ಜನ ಜಾಗೃತಿ ಮೂಡಿಸಿದರು.
ಎಲ್ಲೆಡೆ ಸಮಾನತೆ ಸಾರುವ ಹಾಗೂ ಆರೋಗ್ಯದ ಕಾಳಜಿ ವಹಿಸುವ ದೃಷ್ಟಿಯಿಂದ ಈ ಬೃಹತ್ ವಾಕಥಾನ್ ಆಯೋಜನೆ ಮಾಡಲಾಗಿದೆ ಎಂದು ನವಚೇತನ ಮ್ಯಾನೇಜಿಂಗ್ ಡೈರೆಕ್ಟರ್ ತಿಳಿಸಿದರು. ವಾಕಥಾನ್ ಜತೆಗೆ ನವಚೇತನ ಆಸ್ಪತ್ರೆಯಿಂದ ಮಹಿಳೆಯರಿಗಾಗಿ ಉಚಿತ ಆರೋಗ್ಯ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು.
ಮಹಿಳೆಯರಿಗಾಗಿ ಸೈಕ್ಲೋಥಾನ್‌ಗೆ ಚಾಲನೆ
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಭಾನುವಾರ ಮುಂಜಾನೆ 8:30ಕ್ಕೆ ವಿಧಾನಸೌಧದಿಂದ- ಆರೋಗ್ಯ ಸೌಧದವರೆಗೆ ಸೈಕ್ಲೋಥಾನ್ ಆಯೋಜನೆ ಮಾಡಲಾಗಿತ್ತು. ಆರೋಗ್ಯವಂತ ಮಹಿಳೆಯಿಂದ ಆರೋಗ್ಯಕರ ಭಾರತ ಎಂಬ ಅಡಿಬರಹದೊಂದಿಗೆ ಸೈಕ್ಲೋಥಾನ್‌ಗೆ ಸಚಿವ ಸುಧಾಕರ್ ಚಾಲನೆ ನೀಡಿದರು.
ಈ ಸಂಬಂಧ ಮಾತನಾಡಿದ ಆರೋಗ್ಯ ಇಲಾಖೆಯ ಆಯುಕ್ತ ರಣದೀಪ್, ವಿಶ್ವ ಮಹಿಳಾ ದಿನದ ಅಂಗವಾಗಿ ಸೈಕ್ಲೋಥಾನ್ ಅನ್ನು ಆಯೋಜನೆ ಮಾಡಲಾಗಿದೆ. ಕೌಟುಂಬಿಕ ಜವಾಬ್ದಾರಿಗಳಲ್ಲಿ ಮಹಿಳೆಯರು ಅವರ ಆರೋಗ್ಯದ ಕಡೆ ಗಮನ ಹರಿಸುತ್ತಿಲ್ಲ. ಒಳ್ಳೆಯ ಊಟ ಸೇವನೆ, ವ್ಯಾಯಾಮ ಮಾಡುವುದು ಬಹಳ ಮುಖ್ಯವಾಗಿದೆ ಎಂದು ಹೇಳಿದರು.
ಇದನ್ನೂ ಓದಿ: H3N2 Influenza: ಕೋವಿಡ್ ಬಳಿಕ H3N2 ವೈರಸ್ ಭೀತಿ; ICMRನಿಂದ ಹೈ ಅಲರ್ಟ್ ಘೋಷಣೆ
ಹೀಗಾಗಿ ಆರೋಗ್ಯ ಇಲಾಖೆ ಸೈಕ್ಲೋಥಾನ್ ಮೂಲಕ ಅರಿವು ಕಾರ್ಯಕ್ರಮ ಮೂಡಿಸಿದೆ. ಮಹಿಳೆಯರು ಸ್ವಂತ ಆರೋಗ್ಯ ಕಾಪಾಡಿಕೊಳ್ಳಬೇಕು. ಕ್ಯಾನ್ಸರ್, NCDಗೆ ಸ್ಕ್ರೀನಿಂಗ್ ಮಾಡಿಸಿಕೊಳ್ಳಬೇಕು. ಇದನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯದ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ