Site icon Vistara News

Internship Allowance: ಇಂಟರ್ನ್‌ಶಿಪ್ ಭತ್ಯೆ ಹೆಚ್ಚಿಸಲು ಆಗ್ರಹ: ಪಶು ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಂದ ಪ್ರತಿಭಟನೆ

Intership Allowance Veterinary college students shivamogga

#image_title

ಶಿವಮೊಗ್ಗ: ಕಿರಿಯ ಪಶು ವೈದ್ಯಕೀಯ ವಿದ್ಯಾರ್ಥಿಗಳ ಇಂಟರ್ನ್‌ಶಿಪ್ ಭತ್ಯೆಯನ್ನು (Internship Allowance) ಹೆಚ್ಚಿಸಬೇಕೆಂದು ಆಗ್ರಹಿಸಿ ಶಿವಮೊಗ್ಗ ಪಶು ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ಕಳೆದೆರೆಡು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಗುರುವಾರ (ಮಾ.2) ಕೂಡ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ಕರ್ನಾಟಕ ಕ.ಸ.ಪ.ಮಿ.ವಿ. ವಿಶ್ವವಿದ್ಯಾಲಯ ಬೀದರ್‌ನ ವಿದ್ಯಾರ್ಥಿಗಳು ಬಿವಿಎಸ್ ಮತ್ತು ಎಐಎಸ್ ಪದವಿಯ ಅಂತಿಮ ಶೈಕ್ಷಣಿಕ ಭಾಗವಾದ ಒಂದು ವರ್ಷದ ಇಂಟರ್ನ್‌ಶಿಪ್ ಅನ್ನು ರಾಜ್ಯದ ಹಾಗೂ ಹೊರ ರಾಜ್ಯದ ಹಲವಾರು ಜಿಲ್ಲಾ ಆಸ್ಪತ್ರೆಗಳಲ್ಲಿ, ಸಂಶೋಧನಾ ಕೇಂದ್ರಗಳಲ್ಲಿ ಒಂದು ವರ್ಷ ಕಡ್ಡಾಯವಾಗಿ ಮಾಡಬೇಕಾಗಿದೆ. ಇಂಟರ್ ವಿದ್ಯಾರ್ಥಿಗಳಿಗೆ ಕಳೆದ 8 ವರ್ಷಗಳಿಂದ 14 ಸಾವಿರ ರೂ. ನೀಡುತ್ತಾ ಬರಲಾಗಿದೆ. ಈ ವೇತನದಲ್ಲೇ ಆಯಾ ತಿಂಗಳುಗಳ ಖರ್ಚುಗಳು, ಊಟ, ವಸತಿ, ಸಾರಿಗೆ, ಓಡಾಟದ ವೆಚ್ಚ ಹಾಗೂ ವ್ಯಾಸಂಗಕ್ಕೆ ಸಂಬಂಧಿಸಿದ ಖರ್ಚುಗಳನ್ನು ಭರಿಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಅಲವತ್ತುಕೊಂಡಿದ್ದಾರೆ.

ಇದನ್ನೂ ಓದಿ: Giorgia Meloni On Modi: ವಿಶ್ವ ನಾಯಕರಲ್ಲೇ ಮೋದಿ ಹೆಚ್ಚು ಪ್ರೀತಿಪಾತ್ರರು, ಇಟಲಿ ಪ್ರಧಾನಿ ಮೆಲೋನಿ ಮೆಚ್ಚುಗೆ

ಇತ್ತೀಚಿನ ದಿನಗಳಲ್ಲಿ ನಿತ್ಯ ಬಳಕೆಯ ವಸ್ತುಗಳು ಹಾಗೂ ಸೌಲಭ್ಯಗಳ ದರಗಳು ಹೆಚ್ಚಿದ್ದು, ಮಾಸಿಕ 20 ಸಾವಿರ ರೂಪಾಯಿಗೂ ಅಧಿಕ ಖರ್ಚು ಬರುತ್ತದೆ. ಇದಲ್ಲದೆ ವಿವಿಗೆ ಕೂಡ ವಾರ್ಷಿಕ ಸುಮಾರು 45 ಸಾವಿರ ರೂಪಾಯಿಗಳ ಶುಲ್ಕವನ್ನು ಪಾವತಿಸಬೇಕಾಗಿದೆ. ಇಂಟರ್ ಅವಧಿಯಲ್ಲಿ ಮಾಸಿಕ ಭತ್ಯೆ ನೀಡುವುದರಿಂದ ಯಾವುದೇ ವಿದ್ಯಾರ್ಥಿ ವೇತನ ಸಿಗುವುದಿಲ್ಲ. ನಮ್ಮ ವಿಶ್ವವಿದ್ಯಾಲಯದಲ್ಲಿ ಶೇಕಡಾ ಎ.ಪಿ.ಕೆ ಅವಕಾಶವನ್ನು ಬಡ ಹಾಗೂ ರೈತಾಪಿ ಕುಟುಂಬಗಳಿಗೆ ನೀಡಬೇಕಾದ ನಿಯಮವಿರುವುದರಿಂದ ಪ್ರಸ್ತುತ ತಗುಲುತ್ತಿರುವ ಅಧಿಕ ವೆಚ್ಚವನ್ನು ಭರಿಸುವುದು ವಿದ್ಯಾರ್ಥಿಗಳಿಗೆ ಅಸಾಧ್ಯವಾಗಿದೆ ಎಂದು ಪ್ರತಿಭಟನಾನಿರತರು ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Land Surveyor Recruitment : 2000 ಭೂಮಾಪಕರ ನೇಮಕಕ್ಕೆ ಅರ್ಜಿ ಆಹ್ವಾನ; ಅರ್ಜಿ ಸಲ್ಲಿಸಲು ಮಾ.10 ಕೊನೆಯ ದಿನ

ಈ ಕಾರಣಕ್ಕಾಗಿ ಇಂಟರ್ನ್‌ಶಿಪ್ ಭತ್ಯೆಯನ್ನು ಹೆಚ್ಚಿಸುವಂತೆ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಇತ್ತೀಚೆಗೆ ಕಿರಿಯ ಮಾನವ ವೈದ್ಯಕೀಯ, ವಿದ್ಯಾರ್ಥಿಗಳ, ಇಂಟರ್ನ್‌ಶಿಪ್ ಭತ್ಯೆಯನ್ನು 30 ಸಾವಿರ ರೂಪಾಯಿಗಳಿಗೆ ಏರಿಸಿರುವ ಹಿನ್ನೆಲೆಯಲ್ಲಿ ಮೂಕ ಪ್ರಾಣಿಗಳ ಸೇವೆಯಲ್ಲಿ ನಿರತರಾದ ಹಿರಿಯ ಪಶು ವೈದ್ಯಕೀಯ ವಿದ್ಯಾರ್ಥಿಗಳ ಇಂಟರ್ನ್‌ಶಿಪ್ ಭತ್ಯೆಯನ್ನು ಕಿರಿಯ ಮಾನವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಮಾನವಾಗಿ ನೀಡುವಂತೆ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಇದನ್ನೂ ಓದಿ: Lionel Messi : ವಿಶ್ವ ಕಪ್​ ವಿಜೇತ ಅರ್ಜೆಂಟೀನಾ ತಂಡದ ಸಹ ಸದಸ್ಯರಿಗೆ ಚಿನ್ನದ ಐಪೋನ್ ಕೊಡಿಸಿದ ನಾಯಕ ಮೆಸ್ಸಿ!

Exit mobile version