Site icon Vistara News

BJP Conference: ಮತ್ತೊಮ್ಮೆ ಮೋದೀಜಿ ಪ್ರಧಾನಿ ಆಗೋದು ಜನರ ಸಂಕಲ್ಪ: ಬಿ.ವೈ. ವಿಜಯೇಂದ್ರ

BY Vijayendra 1

ಕಲಬುರಗಿ: ಮತ್ತೊಮ್ಮೆ ನರೇಂದ್ರ ಮೋದೀಜಿ ಅವರು ಪ್ರಧಾನಿ ಎಂಬುವುದು ಜನಸಾಮಾನ್ಯರ ಸಂಕಲ್ಪ. ಭಾರತ ಇಂದು ಬಲಿಷ್ಠವಾಗಿ ಬೆಳೆದು ನಿಲ್ಲಲು ಕಾರಣರಾಗಿರುವ ನಮ್ಮ ನೆಚ್ಚಿನ ಶ್ರಮಿಕ ಪ್ರಧಾನಿ ನರೇಂದ್ರ ಮೋದೀಜಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ದೇಶದ ಜನತೆ ಸಂಕಲ್ಪ ತೊಟ್ಟಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ತಿಳಿಸಿದರು.

ನಗರದಲ್ಲಿ ಸೋಮವಾರ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶ ಹಾಗೂ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, 2024 ರಾಮರಾಜ್ಯ ನಿರ್ಮಾಣದ ಚುನಾವಣೆಯಾಗಿದ್ದು, ಮೋದೀಜಿ ಅವರ ಜನಪರ ಕಾರ್ಯಕ್ರಮಗಳನ್ನು ಮನೆ ಮನೆಗೆ ತಲುಪಿಸಿ ಬಿಜೆಪಿ ಗೆಲ್ಲಿಸಲು ಕಾರ್ಯಕರ್ತರು ಹಗಲಿರುಳೆನ್ನದೇ ಶ್ರಮಿಸಬೇಕೆಂಬ ಕರೆ ನೀಡಿದರು.

ಕೆರಗೂಡಿನಲ್ಲಿ ಹನುಮ ಧ್ವಜ ಹಾರಿಸಿದ್ದಕ್ಕೆ ಧ್ವಜ ಕೆಳಗಿಳಿಸಿ ದರ್ಪ ತೋರುತ್ತಿದ್ದಾರೆ. ಇದು ಬಹಳ ದಿನ‌ ಉಳಿಯೋದಿಲ್ಲ, ಜನ ಪಾಠ ಕಲಿಸುತ್ತಾರೆ. ರಾಜ್ಯಾಧ್ಯಕ್ಷನಾಗಿ ಯಾರನ್ನೂ ತಲೆ ತಗ್ಗಿಸುವಂತೆ ಮಾಡೋದಿಲ್ಲ ಎಂದು ಕಾರ್ಯಕರ್ತರಿಗೆ ಭರವಸೆ ನೀಡುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ | Hanuman Flag : ಮಂಡ್ಯದಲ್ಲಿ ಹಿಂಸಾತಾಂಡವ; ಜನಾಕ್ರೋಶಕ್ಕೆ ಗುರಿಯಾದ ಕಾಂಗ್ರೆಸ್‌ ಶಾಸಕ ರವಿ ಗಣಿಗ

ಈ ಸಂದರ್ಭದಲ್ಲಿ ಕೇಂದ್ರದ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ್ ಖೂಬಾ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ರಾಜ್ಯ ಕಾರ್ಯದರ್ಶಿ ಹಾಗೂ ಶಾಸಕ ಶೈಲೇಂದ್ರ ಬೆಲ್ದಾಳೆ, ಶಾಸಕರಾದ ಪ್ರಭು ಚೌಹಾಣ್, ಶರಣು ಸಲಗಾರ್, ವಿಧಾನ ಪರಿಷತ್ ಸದಸ್ಯ ರಘುನಾಥ ಮಲ್ಕಾಪುರೆ, ನೂತನ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್, ನಿಕಟಪೂರ್ವ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳ್ಕರ್ ಅವರು ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ವಿಜಯೇಂದ್ರಗೆ ಕಾರ್ಯಕರ್ತರಿಂದ ಅದ್ಧೂರಿ ಸ್ವಾಗತ

ಕಾರ್ಯಕ್ರಮಕ್ಕೂ ಮುನ್ನಾ ಬೀದರ್‌ ನಗರಕ್ಕೆ ಆಗಮಿಸಿದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಅದ್ಧೂರಿ ಸ್ವಾಗತ ಕೋರಿದರು. ನಗರದ ಬೊಮ್ಮಗೊಂಡೇಶ್ವರ ವೃತ್ತದಿಂದ ಕಾರ್ಯಕರ್ತರು ಬೈಕ್ ರ‍್ಯಾಲಿಯೊಂದಿಗೆ, ತೆರೆದ ವಾಹದನಲ್ಲಿ ವಿಜಯೇಂದ್ರ ಅವರನ್ನು ಗಣೇಶ್ ಮೈದಾನದವರೆಗ ಕರೆದೊಯ್ದರು. ವಿಜಯೇಂದ್ರ ಅವರಿಗೆ ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ್ ಮತ್ತಿಮುಡ್, ಹುಮನಾಬಾದ್ ಶಾಸಕ ಡಾ.ಸಿದ್ದು ಪಾಟೀಲ್ ಮತ್ತಿತರರು ಸಾಥ್‌ ನೀಡಿದರು.

ಕಾಂಗ್ರೆಸ್‌ಗೆ ಅಂಬೇಡ್ಕರ್, ದಲಿತರ ಹೆಸರು ಹೆಳಲು ನೈತಿಕತೆ ಇಲ್ಲ

ಕಲಬುರಗಿ:ಕಾಂಗ್ರೆಸ್‌ಗೆ ಅಂಬೇಡ್ಕರ್, ದಲಿತರ ಹೆಸರು ಹೆಳಲು ನೈತಿಕತೆ ಇಲ್ಲ. ಕಲಬುರಗಿಯಲ್ಲಿ ಇವತ್ತು ಬಿಜೆಪಿಯ ಬಾವುಟಗಳನ್ನು ತೆಗೆದು ಬಿಸಾಕಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಹೊಟ್ಟೆ ಉರಿಯುತ್ತಿದೆ. ಕೇಸರಿ ಬಣ್ಣ ದ್ವಜ ನೋಡಿದರೆ ಅವರಿಗೆ ಊಟ ಸೇರುತ್ತಿಲ್ಲ, ನಿದ್ದೆ ಬರುತ್ತಿಲ್ಲ. ಕಾರಣ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದರು.

ಕಲಬುರಗಿಯ ಎನ್‌ವಿ ಮೈದಾನದಲ್ಲಿ ನಡೆದ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಅವರಿಗೆ ಒಂದು ಪ್ರಶ್ನೆ ಕೇಳುತ್ತೇನೆ, ಇದಕ್ಕೆ ಉತ್ತರ ಸೋನಿಯಾ ಗಾಂಧಿ ಅವರನ್ನು ಕೇಳಿ ಉತ್ತರ ಕೊಡಬೇಕು. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಮಾತನಾಡುವ ಕಾಂಗ್ರೆಸ್, ಚುನಾವಣೆಯಲ್ಲಿ ಅವರನ್ನು ಸೋಲಿಸುವ ಕೆಲಸ ಮಾಡಿದರು. ಪ್ರಿಯಾಂಕ್ ದೆಹಲಿಗೆ ಹೋಗಿ ಈ ಬಗ್ಗೆ ಕೇಳಿಕೊಂಡು ಬರಲಿ ಎಂದು ಹೇಳಿದರು.

ಇದನ್ನೂ ಓದಿ | BJP Karnataka : ಬಿಜೆಪಿ 28 ಸ್ಥಾನ ಗೆದ್ದರೆ ಕಾಂಗ್ರೆಸ್ಸನ್ನು ಮನೆಗೆ ಕಳಿಸೋದು ಗ್ಯಾರಂಟಿ ಎಂದ ಬೊಮ್ಮಾಯಿ

ಮಂಡ್ಯದ ಕೆರೆಗೋಡಿನಲ್ಲಿ 108 ಅಡಿ ಧ್ವಜಸ್ತಂಭ ನಿರ್ಮಾಣ ಮಾಡಿ ಹುನುಮಾನ್ ಧ್ವಜ ಹಾರಿಸಿದ್ದಾರೆ. ಆದರೆ ಕಾಂಗ್ರೆಸ್‌ನವರು ಪೊಲೀಸರ ಮುಖಾಂತರ ಧ್ವಜ ಕೆಳಗಿಳಿಸಿದ್ದಾರೆ. ಕೇಸರಿ ನೋಡಿದರೆ ಕಾಂಗ್ರೆಸ್‌ನವರಿಗೆ ಆಗುತ್ತಿಲ್ಲ, ಹಾಗಾಗಿ ಧ್ವಜ ಇಳಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Exit mobile version