ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ 50ಕ್ಕೂ ಹೆಚ್ಚು ಕಡೆಗಳಲ್ಲಿ ಐಟಿ (ಆದಾಯ ತೆರಿಗೆ ಇಲಾಖೆ) ದಾಳಿ (IT Raid)ಯಾಗಿದೆ. 600ಕ್ಕೂ ಹೆಚ್ಚು ಅಧಿಕಾರಿಗಳ ತಂಡದಿಂದ ವಿವಿಧ ಉದ್ಯಮಿಗಳ ಮನೆ ಮೇಲೆ ದಾಳಿಯಾಗಿದೆ. ಐಟಿ ರಿಟರ್ನ್ಸ್ ಸಲ್ಲಿಕೆ ವೇಳೆ ತಮ್ಮ ನೈಜ ಆದಾಯವನ್ನು ಮರೆಮಾಚಿದವರಿಗೆ ಇಂದು ಮುಂಜಾನೆಯೇ ಐಟಿ ಬಿಸಿ ಮುಟ್ಟಿಸಿದೆ.
ಆದಾಯ ತೆರಿಗೆ ಸಲ್ಲಿಕೆಗಿಂತಲೂ ಹೆಚ್ಚಿನ ಆದಾಯ ಹೊಂದಿರುವವರನ್ನು ಪತ್ತೆ ಮಾಡಿರುವ ಐಟಿ ಅಧಿಕಾರಿಗಳು ಸರ್ಚ್ ವಾರೆಂಟ್ ತಂದು ರೇಡ್ ನಡೆಸುತ್ತಿದ್ದಾರೆ. ಕರ್ನಾಟಕ ಮತ್ತು ಗೋವಾ ಅಧಿಕಾರಿಗಳು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸುತ್ತಿದ್ದು, ಹಲವು ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.
ಅದರಲ್ಲಿ ಒಂದು ಸದಾಶಿವ ನಗರದ ಎಂಬೆಸ್ಸಿ ಆರ್ಕೆಡ್ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್ ನಂಬರ್ 602 ರ ಮೇಲೆ ಕೂಡ ಐಟಿ ದಾಳಿಯಾಗಿದೆ. ಈ ಫ್ಲ್ಯಾಟ್ ನರಪತ್ ಸಿಂಗ್ ಚರೋಡಿಯವರಿಗೆ ಸೇರಿದ್ದಾಗಿದ್ದು, ನಾಲ್ವರು ಅಧಿಕಾರಿಗಳ ತಂಡ ಮನೆಯಲ್ಲಿರುವ ಲೆಕ್ಕ ಪತ್ರಗಳನ್ನು ಶೋಧಿಸಿ, ಪರಿಶೀಲನೆ ನಡೆಸುತ್ತಿದೆ.
ಇದನ್ನೂ ಓದಿ: ನಮ್ಮದು ಡಿ.ಕೆ. ಶಿವಕುಮಾರ್ ಕುಟುಂಬ ಕೆಟ್ಟೋಯ್ತ?: ಆರೋಪಕ್ಕೆ ಅಶ್ವತ್ಥನಾರಾಯಣ ಆಕ್ರೋಶ
ಕೆಲವು ದಿನಗಳ ಹಿಂದೆ ಬೆಂಗಳೂರಿನ ಖ್ಯಾತ ಉದ್ಯಮಿ ಕೆಜಿಎಫ್ ಬಾಬು (ಯೂಸುಫ್ ಶರೀಫ್ ಬಾಬು) ನಿವಾಸದ ಮೇಲೆ ಉದ್ಯಮಿಗಳು ದಾಳಿ ಮಾಡಿದ್ದರು. ಕಾಂಗ್ರೆಸ್‌ನಿಂದ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿದ್ದ ಕೆಜಿಎಫ್ ಬಾಬು ಸೋತಿದ್ದರು. ಚುನಾವಣೆ ಸ್ಪರ್ಧೆ ವೇಳೆ ತಮ್ಮ ಆಸ್ತಿ 1741 ಕೋಟಿ ರೂ. ಎಂದು ಘೋಷಿಸಿಕೊಂಡಿದ್ದರು. ಬೆಂಗಳೂರಿನ ವಸಂತ ನಗರದಲ್ಲಿರುವ ಬಾಬು ಮನೆಯ ಮೇಲಷ್ಟೇ ಅಲ್ಲದೆ, ಮೈಸೂರಿನಲ್ಲಿರುವ ಇವರಿಗೆ ಸೇರಿದ ಸ್ಥಳಗಳ ಮೇಲೆ ರೇಡ್ ಮಾಡಿದ್ದರು.
ಇದನ್ನೂ ಓದಿ: ವಸಂತ ನಗರದಲ್ಲಿರುವ ಕೆಜಿಎಫ್ ಬಾಬು ಮನೆ, ಕಚೇರಿ ಮೇಲೆ ಐಟಿ ದಾಳಿ, ಪರಿಶೀಲನೆ