ಉಡುಪಿ: ಕರಾವಳಿಯ ಮೊಗವೀರ ಸಮುದಾಯದ ಮುಖಂಡ, ಉದ್ಯಮಿ ಡಾ. ಜಿ. ಶಂಕರ್ ಅವರ ಮನೆ ಮತ್ತು ಸಮೂಹ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕರಾಗಿರುವ ಶಂಕರ್ ಅವರಿಗೆ ಹಲವು ಕಚೇರಿಗಳಿಗೆ ಮುಂಜಾನೆಯೇ ಐಟಿ ಅಧಿಕಾರಿಗಳು ಲಗ್ಗೆ ಇಟ್ಟಿದ್ದಾರೆ.
ಚುನಾವಣಾ ಸಮಯದಲ್ಲಿ ಮೊಗವೀರ ಸಮುದಾಯದ ಮುಖಂಡ ಜಿ.ಶಂಕರ್ ಸಂಸ್ಥೆ ಮೇಲೆ ಐಟಿ ದಾಳಿ ನಡೆದಿರುವುದು ಸಂಶಯಗಳಿಗೆ ಕಾರಣವಾಗಿದೆ. ಚುನಾವಣಾ ಸಂದರ್ಭದಲ್ಲಿ ಅಕ್ರಮ ಹಣದ ವಹಿವಾಟು ನಡೆಯುತ್ತಿದೆ ಎಂಬ ಮಾಹಿತಿ ಮೇಲೆ ದಾಳಿ ಮಾಡಲಾಗಿದೆ ಎಂದು ಹೇಳಲಾಗಿದೆ.
ಗುರುವಾಋ ಮುಂಜಾನೆ ಬೆಂಗಳೂರು ನೋಂದಣಿ ಸಂಖ್ಯೆ ಹೊಂದಿರುವ ಇನ್ನೊವಾ ಕಾರಿನಲ್ಲಿ ಬಂದಿರುವ ಅಧಿಕಾರಿಗಳ ತಂಡ ಏಕಕಾಲದಲ್ಲಿ ಜಿ.ಶಂಕರ್ ಮನೆ, ಸಂಸ್ಥೆಗಳ ಮೇಲೆ ದಾಳಿ ಮಾಡಿದೆ.
ಸಂಸ್ಥೆಯ ಲೆಕ್ಕ ಪತ್ರ ಮತ್ತು ನಗದು ವಹಿವಾಟಿನ ವಿವರವನ್ನು ಅಧಿಕಾರಿಗಳ ತಂಡ ಪರಿಶೀಲಿಸುತ್ತಿದೆ.
ಜಿ. ಶಂಕರ್ ಅವರು ಮೊಗವೀರ ಮುಖಂಡದ ಪ್ರಭಾವಿ ಮುಖಂಡರಾಗಿರುವ ಜತೆಗೆ ಕ್ಲಾಸ್ ಒನ್ ಗುತ್ತಿಗೆದಾರರೂ ಆಗಿದ್ದಾರೆ. ಅವರು ಉಡುಪಿಯಲ್ಲಿ ಮನೆ ಮತ್ತು ಶಾಮಿಲಿ ಎಂಬ ಬೃಹತ್ ಸಭಾಂಗಣವನ್ನು ಹೊಂದಿದ್ದಾರೆ. ಅವರು ಕೊಡುಗೈ ದಾನಿಯಾಗಿಯೂ ಗುರುತಿಸಿಕೊಂಡಿದ್ದಾರೆ.
ಇದನ್ನೂ ಓದಿ : IT Raid : ಕೆಜಿಎಫ್ ಬಾಬು ಸಹಿತ 50 ಕಾಂಗ್ರೆಸ್ ನಾಯಕರಿಗೆ ಐಟಿ ಶಾಕ್; ರುಕ್ಸಾನಾ ಪ್ಯಾಲೇಸ್‌ಗೆ ಅಧಿಕಾರಿಗಳ ಲಗ್ಗೆ