ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬೆಳ್ಳಂಬೆಳಿಗ್ಗೆಯೇ ಐಟಿ (Income tax) ಅಧಿಕಾರಿಗಳು ಶಾಕ್ ನೀಡಿದ್ದು, ಹಲವು ಕಡೆ ಮೆಗಾ ರೇಡ್ (IT Raid) ನಡೆಸಿದ್ದಾರೆ. ಏಕಕಾಲಕ್ಕೆ ನಗರದ 15ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ಮಾಡಿದ್ದಾರೆ.
ವಿಜಯನಗರ, ಬಿಟಿಎಂ ಲೇಔಟ್, ಹುಳಿಮಾವು, ಸದಾಶಿವನಗರ, ಸ್ಯಾಂಕಿ ಟ್ಯಾಂಕ್ ಸೇರಿದಂತೆ ಹಲವೆಡೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಐಟಿ ಅಧಿಕಾರಿಗಳ 15ಕ್ಕೂ ಹೆಚ್ಚು ತಂಡಗಳು ಮೆಗಾ ರೇಡ್‌ಗಾಗಿ ಚೆನ್ನೈ, ದೆಹಲಿಯಿಂದ ರಾತ್ರೋರಾತ್ರಿ ಬೆಂಗಳೂರಿಗೆ ಬಂದಿವೆ.
ತೆರಿಗೆ ವಂಚನೆ ಮಾಡಿರುವ ಖಾಸಗಿ ಕಂಪನಿಗಳು, ಅದರ ಮಾಲೀಕರು ಹಾಗೂ ಚಿನ್ನದ ವ್ಯಾಪಾರಿಗಳ ಮನೆ ಮೇಲೆ ದಾಳಿ ನಡೆಸಿರುವ ಬಗ್ಗೆ ಮಾಹಿತಿ ದೊರೆತಿದೆ. ಸದ್ಯ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ದಂತವೈದ್ಯರಾದ ಡಾ. ಸಂಧ್ಯಾ ಪಾಟೀಲ್ ಎಂಬವರ ಮನೆ ಮೇಲೆ ಐಟಿ ಅಧಿಕಾರಿಗಳು ರೈಡ್ ಮಾಡಿದ್ದಾರೆ. ಪ್ರಶಾಂತ ನಗರದಲ್ಲಿರುವ ಸಂಧ್ಯಾ ಪಾಟೀಲ್ ಮನೆ ಮೇಲೆ ದಾಳಿ ಮಾಡಿ, ಸಂಧ್ಯಾ ಪಾಟೀಲ್ ಅವರನ್ನು ಹೆಚ್ಚಿನ ತನಿಖೆಗಾಗಿ ಐಟಿ ಟೀಮ್ ಕರೆದುಕೊಂಡು ಹೋಗಿದೆ. ವಿಜಯ ನಗರದಲ್ಲಿ ಕ್ಲಿನಿಕ್ ಹೊಂದಿರುವ ಸಂಧ್ಯಾ ಪಾಟೀಲ್ ಮನೆ ಗೋವಿಂದರಾಜ ನಗರದ ಪ್ರಶಾಂತ ನಗರದಲ್ಲಿದೆ.
ಇದನ್ನೂ ಓದಿ: IT Raid: ಚೀನಾ ಮೂಲದ ಲೆನೋವೋ ಕಂಪನಿಯ ಬೆಂಗಳೂರು ಕಚೇರಿ ಮೇಲೆ ಐಟಿ ದಾಳಿ, ಟ್ಯಾಕ್ಸ್ ವಂಚನೆ?