ಬಳ್ಳಾರಿ: ಸಚಿವ ಶ್ರೀರಾಮುಲು ಹಾಗೂ ಮಾಜಿ ಶಾಸಕ ಸುರೇಶ್ ಬಾಬು ಆಪ್ತ ಕೈಲಾಸ್ ವ್ಯಾಸ್ ಕಚೇರಿ ಮೇಲೆ ಐಟಿ ದಾಳಿ (IT Raid) ನಡೆದಿದ್ದು, ಐಟಿ ಅಧಿಕಾರಿಗಳ ಪರಿಶೀಲನಾ ಕಾರ್ಯ ಮೂರನೇ ದಿನಕ್ಕೆ ಕಾಲಿಟ್ಟಿದೆ.
ಗೋವಾ, ಚೆನ್ನೈ ಸೇರಿದಂತೆ ಇತರ ಕಡೆಯಿಂದ ಆಗಮಿಸಿದ ಅಧಿಕಾರಿಗಳು ಪರಿಶೀಲನೆ ಕೈಗೊಂಡಿದ್ದಾರೆ. ಹಗಲು ರಾತ್ರಿ ಪರಿಶೀಲನೆಯಲ್ಲಿ ತೊಡಗಿದ್ದಾರೆ . ಕಳೆದ ಮೂರು ದಿನಗಳಿಂದ ಖಾಸಗಿ ಹೋಟೆಲ್‌ನಲ್ಲಿ ಅಧಿಕಾರಿಗಳು ತಂಗಿದ್ದಾರೆ.
ಶ್ರೀರಾಮುಲು, ಸುರೇಶ್ ಬಾಬು ಆಪ್ತ ನಡೆಸುತ್ತಿದ್ದ ಫ್ಯಾಕ್ಟರಿಯ ಮನೆ, ಕಚೇರಿ ಮೇಲೆ ಐಟಿ ದಾಳಿ ನಡೆದಿದೆ. ಬಳ್ಳಾರಿಯ ವಿದ್ಯಾನಗರದ ರಾಗಾಸ್ ಪೋರ್ಟ್ ಅಪಾರ್ಟ್ಮೆಂಟ್‌ನಲ್ಲಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಸುಮಾರು 30ಕ್ಕೂ ಹೆಚ್ಚು ಅಧಿಕಾರಿ ಮತ್ತು ಸಿಬ್ಬಂದಿಯು ಈ ಐಟಿ ದಾಳಿಯಲ್ಲಿ ಪಾಲ್ಗೊಂಡಿದ್ದಾರೆ.
ಹರಿ ಇಸ್ಪಾತ್ ಫ್ಯಾಕ್ಟರಿ ಖರೀದಿಯ ಹಣದ ಮೂಲ ಕೆದಕುತ್ತಿರುವ ಅಧಿಕಾರಿಗಳು. ನೂರಾರು ಕೋಟಿ ಬೆಲೆ ಬಾಳುವ ಫ್ಯಾಕ್ಟರಿ ಖರೀದಿಯ ಹಣ, ಇತ್ಯಾದಿ ಮಾಹಿತಿಯನ್ನು ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ.
ಇದನ್ನೂ ಓದಿ | IT raid | ಹಲವು ಉದ್ಯಮಿಗಳ ಮನೆಗೆ ಐಟಿ ದಾಳಿ