Site icon Vistara News

Jain diksha | ಸನ್ಯಾಸತ್ವ ಸ್ವೀಕರಿಸಿದ 19 ವರ್ಷದ ಯುವತಿ; ಹೊಸಪೇಟೆಯಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ಜೈನ ದೀಕ್ಷೆ

Jain diksha

ವಿಜಯನಗರ: ಹೊಸಪೇಟೆಯಲ್ಲಿ 19 ವರ್ಷದ ಯುವತಿಯೊಬ್ಬರು ಸನ್ಯಾಸತ್ವ ಸ್ವೀಕರಿಸಿದ್ದಾರೆ. ಉದ್ಯಮಿಯೊಬ್ಬರ ಪುತ್ರಿ, ಸಾವಿರಾರು ಜನರ ಸಮ್ಮುಖದಲ್ಲಿ ಜೈನ ದೀಕ್ಷೆ (Jain diksha) ಪಡೆದು ಅಧ್ಯಾತ್ಮದೆಡೆಗೆ ತೆರಳಿದ್ದಾರೆ.

ರೇಖಾ ದೇವಿ, ದಿ.ಕಾಂತಿಲಾಲ್ ದಂಪತಿ ತೃತೀಯ ಪುತ್ರಿ ಮುಮುಕ್ಷು ವಿಧಿ ಕುಮಾರಿ ಜೈನ ದೀಕ್ಷೆ ಪಡೆದ ಯುವತಿ. ಹೊಸಪೇಟೆಯ ಮಲ್ಲಿಗೆ ಹೋಟೆಲ್‌ನಲ್ಲಿ ಬುಧವಾರ ಆಯೋಜಿಸಿದ್ದ ಸಮಾರಂಭದಲ್ಲಿ ಆದಿನಾಥ ಜೈನ ಶ್ವೇತಾಂಬರ ಮುನಿಗಳು, ನರರತ್ನ ಸೂರಿಶ್ವರಜೀ ಸಾನ್ನಿಧ್ಯದಲ್ಲಿ ಯುವತಿ ಸನ್ಯಾಸತ್ವ ಸ್ವೀಕರಿಸಿದರು. ಯುವತಿ ಪಿಯುಸಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದಾರೆ. ಎಸ್ಸೆಸ್ಸೆಲ್ಸಿಯಲ್ಲಿ ಶೇ.94, ಪಿಯುಸಿಯಲ್ಲಿ ಶೇ.95 ಅಂಕವನ್ನು ಪಡೆದಿದ್ದಾರೆ.

ದೀಕ್ಷೆ ಅಂಗವಾಗಿ ನಗರದಲ್ಲಿ ಅದ್ಧೂರಿ ಶೋಭಾಯಾತ್ರೆ ನಡೆಯಿತು. ಈ ವೇಳೆ ಮುಮುಕ್ಷು ವಿಧಿ ಕುಮಾರಿ ಕುಣಿದು ಕುಪ್ಪಳಿಸಿದ್ದು ಕಂಡುಬಂತು. ಜೈನದೀಕ್ಷಾ ಸ್ವೀಕಾರ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಮಾಜಿ ಶಾಸಕ ಎಚ್. ಆರ್. ಗವಿಯಪ್ಪ, ಕಾಂಗ್ರೆಸ್ ಮುಖಂಡ ಇಮಾಜ್ ನಿಯಾಜಿ, ಬಿಜೆಪಿಯ ಸಿದ್ದಾರ್ಥ್ ಸಿಂಗ್ ಹಾಗೂ ಜೈನ ಸಮುದಾಯದ ಹಲವು ಗಣ್ಯರು ಭಾಗಿಯಾಗಿದ್ದರು.

ಇದನ್ನೂ ಓದಿ | Prerane | ಅಧ್ಯಾತ್ಮದ ದಾರಿ ಕಠಿಣವಲ್ಲ, ನೀವದನ್ನು ಕಠಿಣವಾಗಿಸುತ್ತಿದ್ದೀರಿ…

Exit mobile version