Site icon Vistara News

ಬೆಂಗಳೂರಿನ ವಿವಿ ಪುರಂ ಫುಡ್‌ ಸ್ಟ್ರೀಟ್‌ನಲ್ಲಿ ತಿಂಡಿ ಸವಿದ ಕೇಂದ್ರ ಸಚಿವ ಜೈಶಂಕರ್‌

ಜೈಶಂಕರ್‌

ಬೆಂಗಳೂರು: ರಾಜ್ಯ ಪ್ರವಾಸದಲ್ಲಿರುವ ವಿದೇಶಾಂಗ ಸಚಿವ ಎಸ್.ಜೈಶಂಕರ್ ನಗರದ ವಿವಿ ಪುರಂನ ಸಜ್ಜನ್ ರಾವ್ ಸರ್ಕಲ್ ಬಳಿಯ ಫುಡ್ ಸ್ಟ್ರೀಟ್‌ನಲ್ಲಿ ಶುಕ್ರವಾರ ರಾತ್ರಿ ವಿವಿಧ ಬಗೆಯ ತಿಂಡಿ ಸವಿದರು. ಈ ವೇಳೆ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್ ಅಶ್ವತ್ಥನಾರಾಯಣ ಮತ್ತಿತರರು ಅವರ ಜತೆಗಿದ್ದರು.

ಬೆಂಗಳೂರಿಗೆ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು ಬಿಜೆಪಿ ಕಾರ್ಯಕರ್ತ ಹುಲ್ಲಹಳ್ಳಿ ಶ್ರೀನಿವಾಸ್‌ ಅವರ ಆಹ್ವಾನದ ಮೇರೆಗೆ ಆನೇಕಲ್‌ನ ಹುಲ್ಲಹಳ್ಳಿಗೆ ಭೇಟಿ ನೀಡಿ, ಕಾರ್ಯಕರ್ತನ ಮನೆಯಲ್ಲಿ ನೆಲದ ಮೇಲೆ ಕುಳಿತು ಬಾಳೆ ಎಲೆಯಲ್ಲಿ ಊಟ ಮಾಡಿದ ಬಳಿಕ ಬೆಂಗಳೂರಿಗೆ ಹಿಂತಿರುಗುವಾಗ ವಿವಿ ಪುರಂಗೆ ಭೇಟಿ ನೀಡಿ ತಿಂಡಿ ಸವಿದರು.

ಇದನ್ನೂ ಓದಿ | JAI Shankar | ಬಿಜೆಪಿ ಕಾರ್ಯಕರ್ತನ ಕರೆ ಮನ್ನಿಸಿ ಮನೆಗೆ ಬಂದು ಖುಷಿಪಟ್ಟ ಸಿಂಪಲ್‌ ವಿದೇಶಾಂಗ ಮಂತ್ರಿ

ವಿವಿ ಪುರಂ ಫುಡ್ ಸ್ಟ್ರೀಟ್‌ನಲ್ಲಿ ವಿವಿಧ ತಿಂಡಿಗಳನ್ನು ಸವಿದು ಗ್ರಾಹಕರು ಹಾಗೂ ಅಂಗಡಿ ಮಾಲೀಕರೊಂದಿಗೆ ಜೈಶಂಕರ್ ಮಾತುಕತೆಯನ್ನೂ ನಡೆಸಿದರು. ಇದು ನನಗೆ ಒಳ್ಳೆಯ ಅನುಭವ ನೀಡಿದೆ. ಈ ಭಾಗದ ಆಹಾರ ತುಂಬಾ ಚೆನ್ನಾಗಿತ್ತು. ನಾನು ಮತ್ತೊಮ್ಮೆ ಈ ಭಾಗಕ್ಕೆ ಬರಲು ಇಷ್ಟಪಡುತ್ತೇನೆ. “ಇಲ್ಲಿನ ಆಹಾರ ತುಂಬಾ ಚೆನ್ನಾಗಿತ್ತು” ಎಂದು ಕನ್ನಡದಲ್ಲಿಯೇ ಹೇಳಿದರು.

ಪ್ರತಿ ಮನೆಯಲ್ಲಿ ತ್ರಿವರ್ಣ ಧ್ವಜ ಹಾರಬೇಕೆಂದು ಹರ್‌ ಘರ್‌ ತಿರಂಗಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಶನಿವಾರದಿಂದ 3 ದಿನಗಳ ಕಾಲ ದೇಶದ ಎಲ್ಲಾ ಭಾಗಗಳಲ್ಲೂ ತ್ರಿವರ್ಣ ಧ್ವಜ ಹಾರಬೇಕು. ಪ್ರತಿ ಮನೆ ಮೇಲೂ, ಪ್ರತಿಯೊಬ್ಬರ ಮನದಲ್ಲೂ ತ್ರಿವರ್ಣ ಧ್ವಜ ಹಾರಬೇಕು ಎಂದು ಕರೆ ನೀಡಿದರು.

ಇದನ್ನೂ ಓದಿ | ಭಾರತಕ್ಕೆ ಸಮಸ್ಯೆ ಆದಾಗ ನೀವೆಲ್ಲಿದ್ದಿರಿ? ಯುರೋಪ್‌ಗೆ ಪಾಠ ಮಾಡಿದ ಜೈಶಂಕರ್‌

Exit mobile version