Site icon Vistara News

Koppala News: ಜನಾರ್ದನ ರೆಡ್ಡಿ ನಾಮಪತ್ರ ವಿವಾದ: ಪರಿಶೀಲನೆಗೆ ಮುಖ್ಯ ಚುನಾವಣಾಧಿಕಾರಿ ಸೂಚನೆ

Copy of the letter sent by Chief Electoral Officer to Koppal DC

ಗಂಗಾವತಿ: 2023ರ ಮೇ ತಿಂಗಳಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Karnataka Assembly election) ಗಂಗಾವತಿ (Gangavathi) ವಿಧಾನಸಭಾ ಕ್ಷೇತ್ರದಿಂದ ಕೆಆರ್‌ಪಿ ಪಕ್ಷದಿಂದ (KRP Party) ಸ್ಪರ್ಧಿಸಿದ್ದ ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ (Janardhana Reddy) ಅವರಿಗೆ ಸಂಕಷ್ಟ ಎದುರಾಗಿದೆ. ಅವರು ಸಲ್ಲಿಸಿದ್ದ ನಾಮಪತ್ರದ ಬಗ್ಗೆ ನೀಡಿದ್ದ ದೂರು ಈಗ ಮತ್ತೆ ಮುನ್ನೆಲೆಗೆ ಬಂದಿದೆ.

ರೆಡ್ಡಿ ಸಲ್ಲಿಸಿದ ನಾಮಪತ್ರದಲ್ಲಿ ಸಾಕಷ್ಟು ಲೋಪದೋಷಗಳಿವೆ. ಆಸ್ತಿ, ವಾಹನಗಳನ್ನು ಉಲ್ಲೇಖಿಸಿಲ್ಲ ಎಂದು ಆರೋಪಿಸಿ ಆಂಧ್ರಪ್ರದೇಶ ಅನಂತಪುರದ ಗಣಿ ಉದ್ಯಮಿ ಶ್ಯಾಂ ಪ್ರಸಾದ್ ಎಂಬುವವರು ದೂರು ಸಲ್ಲಿಸಿದ್ದರು.

ಇದನ್ನೂ ಓದಿ: Road Accident: ಹೆದ್ದಾರಿಯಲ್ಲಿ ಬೈಕ್​, ಕಾರ್​ಗಳಿಗೆ ಡಿಕ್ಕಿ ಹೊಡೆದ ಕಸದ ಲಾರಿ​; 15 ಮಂದಿ ದುರ್ಮರಣ

ಗಂಗಾವತಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಯಾಗಿದ್ದ ಸಹಾಯಕ ಆಯುಕ್ತ ಬಸವಣ್ಣೆಪ್ಪ, ಚುನಾವಣಾಧಿಕಾರಿಯಾಗಿದ್ದ ಜಿಲ್ಲಾಧಿಕಾರಿ ಸುಂದರೇಶ ಬಾಬು ಅವರಿಗೆ ದೂರು ಸಲ್ಲಿಸಿದ್ದರು. ಅಲ್ಲದೇ ನಗರ ಠಾಣೆಯಲ್ಲಿ ಖಾಸಗಿ ದೂರು ನೀಡಿದ್ದರು.

ಆದರೆ, ಇದುವರೆಗೂ ಯಾವುದೇ ಕ್ರಮಕ್ಕೆ ಸ್ಥಳೀಯ ಅಧಿಕಾರಿಗಳು ಮುಂದಾಗಿಲ್ಲ ಎಂದು ಆರೋಪಿಸಿರುವ ಉದ್ಯಮಿ ಶ್ಯಾಂಪ್ರಸಾದ್, ಸೂಕ್ತ ತನಿಖೆ ಮತ್ತು ಕ್ರಮಕ್ಕೆ ಆಗ್ರಹಿಸಿ ಮುಖ್ಯ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.

ಇದನ್ನೂ ಓದಿ: Anil Ambani: ಅಂಬಾನಿ ದಂಪತಿಗೆ ಇ ಡಿ ಸಂಕಷ್ಟ; ಇಂದು ಟೀನಾ ಅಂಬಾನಿ ವಿಚಾರಣೆ

ಶ್ಯಾಂ ಪ್ರಸಾದ್ ಸಲ್ಲಿಸಿರುವ ದೂರಿನ ಉಲ್ಲೇಖದೊಂದಿಗೆ ಇದೀಗ ಮುಖ್ಯ ಚುನಾವಣಾಧಿಕಾರಿ ಕಚೇರಿಯ ಜಂಟಿ ಚುನಾವಣಾಧಿಕಾರಿ (ಸಿಬ್ಬಂದಿ ಆಡಳಿತ ಸುಧಾರಣಾ ಇಲಾಖೆ) ಯೋಗೇಶ್ವರ ಎಸ್, ಈ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿದ ಅಂಶಗಳನ್ನು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದಾರೆ.

Exit mobile version