ಹಾಸನ: ರಾಜ್ಯ ಸರ್ಕಾರದ ಪ್ರತಿಷ್ಠಿತ ಕಾರ್ಯಕ್ರಮ ಜನತಾ ದರ್ಶನ (Janata Darshana) ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳ ಗಲಾಟೆ ಬೀದಿಗೆ ಬಂದಿದೆ. ಜನರ ಸಮಸ್ಯೆಗಳನ್ನು ಆಲಿಸಬೇಕಿದ್ದ ಜನಪ್ರತಿನಿಧಿಗಳೇ ವೇದಿಕೆಯ ಮೇಲೆ ಅನಾಗರೀಕವಾಗಿ ವರ್ತಿಸಿದ್ದಾರೆ.
ಹಾಸನ ಜಿಲ್ಲೆಯ ಅರಸೀಕೆರೆ ಕಸ್ತೂರಿ ಬಾ ಆಶ್ರಮದ ಆವರಣದಲ್ಲಿ ಆಯೋಜಿಸಿದ್ದ ಜನತಾ ದರ್ಶನದಲ್ಲಿ ಶಾಸಕರು ಕಿತ್ತಾಡಿಕೊಂಡಿದ್ದಾರೆ. ಅರಸೀಕೆರೆ ಶಾಸಕ ಶಿವಲಿಂಗೇಗೌಡ ಹಾಗೂ ಬೇಲೂರು ಶಾಸಕ ಹುಲ್ಲಳ್ಳಿ ಸುರೇಶ್ ಕೈನಲ್ಲಿ ಮೈಕ್ ಹಿಡಿದು ಬೈಯ್ದಾಡಿಕೊಂಡಿದ್ದಾರೆ. ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಎದುರೇ ಬಿಜೆಪಿ ಹಾಗೂ ಕಾಂಗ್ರೆಸ್ ಶಾಸಕರ ನಡುವಿನ ವಾಕ್ ಸಮರ ಜೋರಾಗಿತ್ತು. ಇಷ್ಟಕ್ಕೂ ಇವರಿಬ್ಬರ ಗಲಾಟೆಗೆ ವೇದಿಕೆ ಭಾಷಣ ಕಾರಣವಾಯಿತು.
ಇದನ್ನೂ ಓದಿ: DK Shivakumar : ನಕಲಿ ಸ್ವಾಮಿ, ಲೂಟಿ ರವಿ, ಮಾಜಿ ಸಿಎಂ, ಬ್ಲಾಕ್ ಮೇಲರ್ ಎಲ್ಲರಿಗೂ ಉತ್ತರ ಕೊಡ್ತೇನೆ ಎಂದ ಡಿಕೆಶಿ
ಮೊದಲು ಭಾಷಣ ಮಾಡಿದ ಶಿವಲಿಂಗೇಗೌಡ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಅವರ ಮಾತು ಮುಗಿದ ಮೇಲೆ ಶಾಸಕ ಹುಲ್ಲಳ್ಳಿ ಸುರೇಶ್ ಅವರು ಶಿವಲಿಂಗೇಗೌಡ್ರ ಎಲ್ಲಾ ಆರೋಪಗಳಿಗೂ ಡಾಂಗ್ ಕೊಟ್ಟರು. ಬಳಿಕ ಭಾಷಣ ಮುಗಿತ್ತಿದ್ದಂತೆ ಎದುರಾಳಿಗೆ ಉತ್ತರ ಕೊಡಬೇಕೆಂದು ಶಿವಲಿಂಗೇಗೌಡ್ರು ಭಾಷಣ ಮಾಡಲು ಮುಂದಾದರೂ. ಇತ್ತ ಮತ್ತೊಂದು ಮೈಕ್ ತೆಗೆದುಕೊಂಡ ಸುರೇಶ್ ಜನರು ಎದುರೇ ಕೆಸರೆರಚಾಟವನ್ನು ಶುರು ಮಾಡಿದರು.
ವೇದಿಕೆ ಮೇಲೆ ಶಾಸಕರ ವಾಕ್ಸಮರ ಇದ್ದರೆ ಅತ್ತ ಇಬ್ಬರು ಶಾಸಕರ ಬೆಂಬಲಿಗರ ನಡುವೆ ಗಲಾಟೆ ನಡೆದಿದೆ. ಇತ್ತ ಎಲ್ಲರ ಗಲಾಟೆಯನ್ನು ನೋಡುತ್ತಾ ಉಸ್ತುವಾರಿ ಕೆ.ಎನ್.ರಾಜಣ್ಣ ಸುಮ್ಮನೆ ಕುಳಿತಿದ್ದರು. ಶಿವಲಿಂಗೇಗೌಡರು ಒಬ್ಬರೇ ಅಲ್ಲ, ನಾನು ಈ ತಾಲೂಕಿನ ಶಾಸಕ. ಜಾವಗಲ್ ನನಗೂ ಬರುತ್ತೆ ಎಂದಿದ್ದಕ್ಕೆ ಸುರೇಶ್ ವಿರುದ್ದ ಏಕವಚನದಲ್ಲಿ ಶಿವಲಿಂಗೇಡೌಡ್ರು ವಾಗ್ದಾಳಿ ನಡೆಸಿದರು. ಸರ್ಕಾರ ಮಹಿಳೆಯರ ತಾಳಿ ಕಿತ್ತುಕೊಳ್ಳುತ್ತಿದೆ ಎಂದು ಶಾಸಕ ಸುರೇಶ್ ಕಿಡಿಕಾರಿದರು. ಇತ್ತ ಇವರಿಬ್ಬರನ್ನು ಸಮಾಧಾನಪಡಿಸಿಲು ಡಿಸಿ ಸತ್ಯಭಾಮಾ, ಎಸ್‌ಪಿ ಮೊಹಮ್ಮದ್ ಸುಜೀತಾ ಯತ್ನಿಸಿದರು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ