ಬೆಂಗಳೂರು: ಜಪಾನೀಸ್ ಫಿಲ್ಮ್ ಫೆಸ್ಟಿವಲ್ ಇಂಡಿಯಾ ದೆಹಲಿ, ಚೆನ್ನೈ ಮತ್ತು ಹೈದರಾಬಾದ್‌ನಲ್ಲಿ ಯಶಸ್ವಿ ಪ್ರದರ್ಶನದ ನಂತರ ಇದೀಗ ಮುಂಬೈ ಮತ್ತು ಬೆಂಗಳೂರಿನಲ್ಲಿ ಆರನೇ ಆವೃತ್ತಿಯ ಜಪಾನೀಸ್ ಫಿಲ್ಮ್ ಫೆಸ್ಟಿವಲ್ ಪ್ರದರ್ಶನ (Japanese Film Festival) ನಡೆಸಲು ಸಿದ್ಧವಾಗಿದೆ. 2023 ಅಕ್ಟೋಬರ್‌ನಿಂದ 2024ರ ಜನವರಿ ತಿಂಗಳವರೆಗೆ ನಾಲ್ಕು ತಿಂಗಳ ಅವಧಿಯ ಸಿನಿಮಾ ಉತ್ಸವ ಭಾರತದ 7 ನಗರಗಳಲ್ಲಿ ನಡೆಯುತ್ತಿದ್ದು, ಡಿಸೆಂಬರ್ 7ರಿಂದ 10 ರವರೆಗೆ ಮುಂಬೈ ಮತ್ತು ಬೆಂಗಳೂರಿನಲ್ಲಿ ಜಪಾನೀಸ್ ಚಲನಚಿತ್ರೋತ್ಸವ ಆಯೋಜಿಸಲಾಗಿದೆ.
ಮುಂಬೈನ ಅಂಧೇರಿ ವೆಸ್ಟ್‌ನಲ್ಲಿರುವ ಇನ್ಫಿನಿಟಿ ಮಾಲ್‌ನ ಪಿವಿಆರ್ ಐಕಾನ್ ಮತ್ತು ಬೆಂಗಳೂರಿನ ಮಲ್ಲೇಶ್ವರಂನ ಮಂತ್ರಿ ಸ್ಕ್ವೇರ್ ಮಾಲ್‌ನ INOXನಲ್ಲಿ ಚಿತ್ರ ಪ್ರದರ್ಶನ ನಡೆಯಲಿದೆ. ಜಪಾನೀಸ್ ಫಿಲ್ಮ್ ಫೆಸ್ಟಿವಲ್ ಇಂಡಿಯಾದ ಆರನೇ ಆವೃತ್ತಿಯನ್ನು ಜಪಾನ್ ಫೌಂಡೇಶನ್ ನವದೆಹಲಿಯಲ್ಲಿ PVR INOX ಸಹಯೋಗದೊಂದಿಗೆ ಅಕ್ಟೋಬರ್ 12ರಿಂದ 15ರವರೆಗೆ ಆಯೋಜಿಸಿತ್ತು. ದೆಹಲಿಯ ನಂತರ, ಜಪಾನೀಸ್ ಚಲನಚಿತ್ರೋತ್ಸವವನ್ನು ನವೆಂಬರ್ 2ರಿಂದ 5ರವರೆಗೆ ಚೆನ್ನೈ ಮತ್ತು ಹೈದರಾಬಾದ್ ನಲ್ಲಿ ಆಯೋಜಿಸಲಾಗಿತ್ತು. ಉತ್ತಮ ಯಶಸ್ಸು ಮತ್ತು ಪ್ರತಿಕ್ರಿಯೆ ಗಳಿಸಿತು.
ಇದನ್ನೂ ಓದಿ | Mamata Banerjee: ಸಲ್ಮಾನ್ ಖಾನ್ ಜತೆ ಮಮತಾ ಬ್ಯಾನರ್ಜಿ ಡ್ಯಾನ್ಸ್! ವಿಡಿಯೊ ಇಲ್ಲಿದೆ
ಮೂರು ನಗರಗಳಲ್ಲಿ ಯಶಸ್ವಿ ಪ್ರದರ್ಶನಗಳ ಬಳಿಕ ಜಪಾನ್ ಫೌಂಡೇಶನ್ ಇದೀಗ ಮುಂಬೈ ಮತ್ತು ಬೆಂಗಳೂರಿನಲ್ಲಿ ಜಪಾನೀಸ್ ಚಲನಚಿತ್ರೋತ್ಸವ ಆಯೋಜಿಸಲಾಗುತ್ತಿದೆ. ಈ ವರ್ಷದ ಜಪಾನೀಸ್ ಫಿಲ್ಮ್ ಫೆಸ್ಟಿವಲ್ ಇಂಡಿಯಾದ ಪ್ರಮುಖ ಅಂಶವೆಂದರೆ ಪ್ರಪಂಚದ ಜನಪ್ರಿಯ ಅನಿಮೆ ಚಿತ್ರ ‘ಡಿಟೆಕ್ಟಿವ್ ಕಾನನ್ ’ ಮತ್ತು 1979 ರಲ್ಲಿ ಚಲನಚಿತ್ರ ನಿರ್ಮಾಪಕ ಹಯಾವೊ ಮಿಯಾಜಾಕಿ ನಿರ್ದೇಶಿಸಿದ ಮೊದಲ ಅನಿಮೇಟೆಡ್ ಚಲನಚಿತ್ರ 4K ಮರುನಿರ್ಮಾಣ ಆವೃತ್ತಿಯ ‘ಲುಪಿನ್ ದಿ 3rd: ದಿ ಕ್ಯಾಸ್ಟಲ್ ಆಫ್ ಕ್ಯಾಗ್ಲಿಸ್ಟ್ರೋ’. JFF ನ ಆರನೇ ಆವೃತ್ತಿಯು ‘ಎ ಮ್ಯಾನ್, ಅನಿಮೆ ಸುಪ್ರಿಮೆಸಿ, ಇಂಟಾಲರೆನ್ಸ್, ಮಂಡೇಸ್: ಸೀ ಯು ದಿಸ್ ವೀಕ್, ಫಾದರ್ ಆಫ್ ದಿ ಮಿಲ್ಕಿ ವೇ ರೈಲ್ರೋಡ್, ಡಿಟೆಕ್ಟಿವ್ ಕ್ಯಾನಾನ್: ಎಪಿಸೋಡ್ ಒನ್, ಡಿಟೆಕ್ಟಿವ್ ಕ್ಯಾನಾನ್ ದ ಮೂವಿ: ಕ್ರಾಸ್ ರೋಡ್ ಇನ್ ದ ಏನ್ಶಿಯೆಂಟ್ ಕ್ಯಾಪಿಟಲ್, ವಿ ಮೇಡ್ ಎ ಬ್ಯೂಟಿಫುಲ್ ಬುಕೆಟೆ, ಡಿಟೆಕ್ಟಿವ್ ಕ್ಯಾನನ್ ತಹೆ ಮೂವಿ: ದಿ ಲಾಸ್ಟ್ ವಿಝಾರ್ಡ್ ಆಫ್ ದಿ ಸೆಂಚುರಿ, ಹಿರೊಕಾಜು ಕೊರ್-ಎಡಾ ಅವರ ಇತ್ತೀಚಿನ ಪ್ರಶಸ್ತಿ ವಿಜೇತ ಚಿತ್ರ ‘ಮಾನ್ಸ್ಟರ್’ ಪ್ರದರ್ಶನಗೊಳ್ಳಲಿವೆ.
ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಜಪಾನ್ ಫೌಂಡೇಶನ್ ನವದೆಹಲಿಯ ಡೈರೆಕ್ಟರ್ ಜನರಲ್ ಕೋಜಿ ಸಾಟೊ, ‘2017ರಲ್ಲಿ ಪ್ರಾರಂಭವಾದ JFF ಈಗ ಅದರ ಆರನೇ ಆವೃತ್ತಿಯಲ್ಲಿದ್ದು, ಭಾರತದ ಜನರಿಗೆ ವಾರ್ಷಿಕ ಕಾರ್ಯಕ್ರಮವಾಗಿ ಮಾರ್ಪಟ್ಟಿದೆ, ಜನರ ಮೆಚ್ಚುಗೆ ಪಡೆದಿರುವುದಕ್ಕೆ ಸಂತೋಷವಾಗಿದೆ. ಭಾರತದಲ್ಲಿ ಆನಿಮೇಟೆಡ್ ತರಹದ ಚಿತ್ರಗಳಿಗೆ ಪ್ರೋತ್ಸಾಹ ಸಿಗುತ್ತಿದೆ. ಈ ಚಲನಚಿತ್ರೋತ್ಸವದ ಮೂಲಕ ಜನರು ಇತ್ತೀಚಿನ ಜಪಾನೀಸ್ ಚಲನಚಿತ್ರಗಳ ಮನರಂಜನೆಯನ್ನು ಪಡೆದುಕೊಳ್ಳುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದು ಹೇಳಿದರು.
ಭಾರತದಲ್ಲಿನ ಜಪಾನ್ ರಾಯಭಾರ ಕಚೇರಿಯಲ್ಲಿರುವ ಜಪಾನ್ ಮಾಹಿತಿ ಕೇಂದ್ರದ ನಿರ್ದೇಶಕ ಕೋಜಿ ಯೋಶಿಡಾ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ‘ ಜಪಾನೀಸ್ ಚಲನಚಿತ್ರೋತ್ಸವದ ಆರನೇ ಆವೃತ್ತಿಯನ್ನು ಭಾರತದಲ್ಲಿ ಯಶಸ್ವಿಯಾಗಿ ನಡೆಸಲು ಜಪಾನ್ ಫೌಂಡೇಶನ್ ಅನ್ನು ನಾವು ಅಭಿನಂದಿಸುತ್ತೇವೆ. ಎರಡೂ ದೇಶಗಳ ನಡುವಿನ ಸಂಬಂಧ ಚಲನಚಿತ್ರ ಮಾಧ್ಯಮದ ಮೂಲಕ ಬೆಳೆಯುತ್ತದೆ ಎಂಬ ವಿಶ್ವಾಸ ನಮಗಿದೆ’ ಎಂದು ಹೇಳಿದರು.
ಮುಂಬೈ ಮತ್ತು ಬೆಂಗಳೂರು ಆವೃತ್ತಿಯ ನಂತರ, JFF ಭಾರತದ ಕೊನೆಯ ಹಂತದ ಚಲನಚಿತ್ರೋತ್ಸವ ಕೋಲ್ಕತ್ತಾ ಮತ್ತು ಪುಣೆಯಲ್ಲಿ 2024ರ ಜನವರಿ 18ರಿಂದ 21ರವರೆಗೆ ನಡೆಯಲಿದೆ. ಕೋಲ್ಕತ್ತಾ ಸೌತ್ ಸಿಟಿ INOX ಮತ್ತು ಪುಣೆಯ ಪೆವಿಲಿಯನ್ ಮಾಲ್ ನ PVR ICON ನಲ್ಲಿ ಪ್ರದರ್ಶನ ನಡೆಯಲಿದೆ.
ಇದನ್ನೂ ಓದಿ | Tamannaah Bhatia: ಸ್ತ್ರೀ-2 ಸಿನಿಮಾದ ಸ್ಪೆಷಲ್ ರೋಲ್‌ನಲ್ಲಿ ತಮನ್ನಾ!
PVR INOX ಲಿಮಿಟೆಡ್‌ನ ಸಹ-ಸಿಇಒ ಗೌತಮ್ ದತ್ತಾ, ನಾವು ವಾರ್ಷಿಕ ಜಪಾನೀಸ್ ಚಲನಚಿತ್ರೋತ್ಸವದ 6ನೇ ಆವೃತ್ತಿಯನ್ನು ಮತ್ತೊಮ್ಮೆ ಆಯೋಜಿಸಲು ತುಂಬಾ ಸಂತೋಷಪಡುತ್ತೇವೆ. ಈಗ PVR INOX ನ ವಿಲೀನ ಘಟಕವಾಗಿ ಭಾರತದಲ್ಲಿ ಅತಿದೊಡ್ಡ ಮತ್ತು ಪ್ರೀಮಿಯಂ ಚಲನಚಿತ್ರ ಪ್ರದರ್ಶಕವಾಗಿದೆ. 2017 ರಿಂದ ಜಪಾನ್ ಫೌಂಡೇಶನ್ ಮತ್ತು ಪಿವಿಆರ್ ಸುಧೀರ್ಘ ಸಂಬಂಧ ಹಂಚಿಕೊಂಡಿದೆ. ಜಪಾನ್ ಫೌಂಡೇಶನ್‌ನ ಹೊಸ ಉದಯೋನ್ಮುಖ ಚಲನಚಿತ್ರೋತ್ಸವಗಳಿಂದ ನಾವು ಸ್ಫೂರ್ತಿ ಪಡೆದಿದ್ದೇವೆ ಮತ್ತು ಭಾರತೀಯ ಚಿತ್ರರಂಗದ ದಂತಕಥೆಗಳನ್ನು ಆಧರಿಸಿದ ನಮ್ಮ ಇತ್ತೀಚಿನ ಚಲನಚಿತ್ರೋತ್ಸವಗಳು ದೊಡ್ಡ ಯಶಸ್ಸು ಕಂಡಿವೆ ಎಂದು ತಿಳಿಸಿದರು.