Site icon Vistara News

Jeep Accident | ಸಿಎಂ ಬೆಂಗಾವಲು ವಾಹನ ಪಲ್ಟಿ, ದಾರಿಯಲ್ಲಿ ಹೋಗುತ್ತಿದ್ದ ತಾಯಿ-ಮಗನಿಗೆ ಗಾಯ; ಕಾಂಗ್ರೆಸ್‌ ಪ್ರತಿಭಟನೆ

hiriyuru Accident mother and sun injured cm basavaraja bommai

ಚಿತ್ರದುರ್ಗ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಿರಿಯೂರು ಪಟ್ಟಣದಲ್ಲಿ ಕಾರ್ಯಕ್ರಮ ಮುಗಿಸಿ ಚಳ್ಳಕೆರೆಯತ್ತ ಸಾಗುವಾಗ ಮಾರ್ಗಮಧ್ಯೆ ಅಡ್ಡಲಾಗಿ ಬಂದ ಬೈಕ್‌ ಅನ್ನು ತಪ್ಪಿಸಲು ಹೋಗಿ ಬೆಂಗಾವಲುಪಡೆ ವಾಹನವು ಪಲ್ಟಿಯಾಗಿದ್ದು (Jeep Accident), ಈ ವೇಳೆ ರಸ್ತೆ ಪಕ್ಕದಲ್ಲಿ ಸಾಗುತ್ತಿದ್ದ ತಾಯಿ-ಮಗನಿಗೆ ತೀವ್ರವಾಗಿ ಪೆಟ್ಟಾಗಿದೆ. ಆದರೆ, ಅವರ ಬಗ್ಗೆ ವಿಚಾರಿಸದೇ ಸಿಎಂ ವಾಹನದಲ್ಲಿ ತೆರಳಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.

ಪಲ್ಟಿಯಾಗಿರುವ ಪೊಲೀಸ್‌ ಬೆಂಗಾವಲು ಜೀಪ್‌

ಹಿರಿಯೂರು ಪಟ್ಟಣದಲ್ಲಿ ಅಪಘಾತ ನಡೆದಿದ್ದು, ಪೊಲೀಸ್ ಬೆಂಗಾವಲು ವಾಹನ ಪಲ್ಟಿಯಾಗಿದೆ. ಈ ವೇಳೆ ರಸ್ತೆಯಲ್ಲಿ ತೆರಳುತ್ತಿದ್ದ ತಾಯಿ-ಮಗನಿಗೆ ಗಾಯಗಳಾಗಿದೆ. ಮಸ್ಕಲ್ ಗ್ರಾಮದ ಮಂಜುಳಾ, ಪುತ್ರ ಮನೋಜ್‌ಗೆ ಗಾಯವಾಗಿದೆ. ಅವರನ್ನು ಹಿರಿಯೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕಾಂಗ್ರೆಸ್‌ ಪ್ರತಿಭಟನೆ
ಮುಖ್ಯಮಂತ್ರಿಯವರ ಬೆಂಗಾವಲು ಪಡೆ ವಾಹನ ಪಲ್ಟಿಯಾಗಿ ತಾಯಿ-ಮಗನಿಗೆ ಗಾಯಗಳಾದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಾಹನವನ್ನು ನಿಲ್ಲಿಸದೇ ಹೋಗಿದ್ದಾರೆ. ಕೊನೇ ಪಕ್ಷ ಗಾಯಾಳುಗಳನ್ನು ಮಾತನಾಡಿಸಿ ಸೂಕ್ತ ವ್ಯವಸ್ಥೆ ಮಾಡಿಸಬಹುದಿತ್ತು. ಇದು ನಿರ್ಲಕ್ಷ್ಯದ ಪರಮಾವಧಿ ಎಂದು ಕಾಂಗ್ರೆಸ್‌ ಮುಖಂಡರು ಹಿರಿಯೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ | ಮಂಗಳೂರು ಸ್ಫೋಟ | ಕುಕ್ಕರ್‌ ಬ್ಲಾಸ್ಟ್‌ ರೂವಾರಿ ಶಾರಿಕ್‌ ನಗದು ವ್ಯವಹಾರ ಮಾಡ್ತಿರಲಿಲ್ಲ, ಬರೀ ಬಿಟ್‌ ಕಾಯಿನ್‌!

ಹಿರಿಯೂರು ಆಸ್ಪತ್ರೆ ಮುಂದೆ ಕೆಪಿಸಿಸಿ ಸದಸ್ಯ ಸುರೇಶ ಬಾಬು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಲಿಂಗೇಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ. ಈ ವೇಳೆ ಸಾಕಷ್ಟು ಮಂದಿ ಕಾಂಗ್ರೆಸ್‌ ಕಾರ್ಯಕರ್ತರು ಸೇರಿದ್ದರು. ಅಪಘಾತದಲ್ಲಿ ಗಾಯಗೊಂಡ ತಾಯಿ-ಮಗನನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ.

ಮುಖ್ಯಮಂತ್ರಿಯವರ ವಾಹನ ಹೋಗುವಾಗ ರಸ್ತೆಗೆ ಬೈಕ್‌ ಒಂದು ಅಡ್ಡ ಬಂದಿದ್ದು, ಅದನ್ನು ತಪ್ಪಿಸಲು ಹೋದಾಗ ಬೆಂಗಾವಲು ಜೀಪ್‌ ನಿಯಂತ್ರಣ ತಪ್ಪಿ ಪಲ್ಟಿಯಾಗಿತ್ತು. ಇದೇ ವೇಳೆ ರಸ್ತೆಯಲ್ಲಿ ತಾಯಿ-ಮಗ ನಡೆದು ಹೋಗುತ್ತಿದ್ದರು. ಅವರಿಗೆ ಮೇಲೆ ಪಲ್ಟಿಯಾಗಿದ್ದ ವಾಹನವು ಗುದ್ದಿದ್ದರಿಂದ ಏಟಾಗಿದೆ.

ಇದನ್ನೂ ಓದಿ | ಮಂಗಳೂರು ಸ್ಫೋಟ | ಕರಾವಳಿಯಲ್ಲಿ ಎನ್‌ಐಎ ಕೇಂದ್ರ ಸ್ಥಾಪನೆಗೆ ಕೇಂದ್ರದ ಜತೆ ಮಾತುಕತೆ ಎಂದ ತೇಜಸ್ವಿಸೂರ್ಯ

Exit mobile version