ಶಿವಮೊಗ್ಗ: ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ, ಸಾಯೋತನಕಾ ಸಂಸಾರ್‌ದೊಳಗೆ ಗಂಡಾಗುಂಡಿ… ಹೇರಿಕೊಂಡು ಹೋಗೋದಿಲ್ಲ ಸತ್ತಾಗ್ ಬಂಡಿ, ಇರೋದರೊಳಗೆ ಒಮ್ಮೆ ನೋಡು ಜೋಗದ ಗುಂಡಿ (Jog Falls Hanuman) ಎಂದು ಡಾ. ರಾಜ್‌ಕುಮಾರ್ ತಮ್ಮ ಸಿನಿಮಾದಲ್ಲಿ ಹಾಡಿನ ಮೂಲಕ ಹೇಳಿದ್ದರು.
ಜೋಗ ಜಲಪಾತದ ವೈಭವವನ್ನು ನೀವೆಲ್ಲರೂ ನೋಡಿಯೇ ಇರುತ್ತೀರಿ. ಆದರೆ ಅಲ್ಲೊಂದು ವಿಸ್ಮಯವನ್ನು ಯಾರೂ ಗಮನವಿಟ್ಟು ನೋಡಿರಲಾರರು. ಆ ವಿಸ್ಮಯವನ್ನು ಕಣ್ತುಂಬಿಕೊಳ್ಳಬೇಕು ಎಂದರೆ ನಿಮ್ಮ ಬಳಿ ಟೆಲಿಸ್ಕೋಪ್ ಇರಬೇಕು. ಯಾಕೆಂದರೆ ಜೋಗ ಜಲಪಾತದಲ್ಲಿ ರಾಮನ ಬಂಟ ಹನುಮನ ದರ್ಶನವಾಗುತ್ತದೆ!
ಮಾಜಿ ಪಟ್ಟಣ ಪಂಚಾಯಿತಿಯ ಉಪಾಧ್ಯಕ್ಷರಾಗಿದ್ದ ಸಿದ್ದರಾಜುರವರು ಟೆಲಿಸ್ಕೋಪ್ ಇಟ್ಟು ಬರುವ ಪ್ರವಾಸಿಗರಿಗೆ ಜಲಪಾತದ ದೃಶ್ಯವನ್ನು ತೋರಿಸುತ್ತಾರೆ. ಹಾಗೆಯೇ ಟೆಲಿಸ್ಕೋಪ್‌ನಿಂದ ನೋಡಿದಾಗ ರಾಕೆಟ್ ಫಾಲ್ಸ್‌ನಲ್ಲಿ ಇರುವ ಬಂಡೆಯೊಂದು ಹನುಮಂತನ ಮುಖವನ್ನು ಹೋಲುತ್ತದೆ. ಅದನ್ನು ಈ ಫೋಟೊದಲ್ಲಿ ಸ್ಪಷ್ಟವಾಗಿ ಕಾಣಬಹುದು.
ಪುರಾಣ ಕಥೆಗಳ ಪ್ರಕಾರ ಜಲಪಾತ ಸೃಷ್ಟಿಯಾಗಿದ್ದು ರಾಮನ ಬಾಣದಿಂದ ಅಂದರೆ ಶರಾವತಿಯ ಉಗಮ ರಾಮಾಯಣ ಕಾಲದಲ್ಲಿ ಆಗಿದೆ. ಆದ್ದರಿಂದ ಅಲ್ಲಿ ಹನುಮಂತ ಇರಲೇಬೇಕಲ್ಲವೇ ಎಂಬ ಮಾತೂ ಇಲ್ಲಿ ಕೇಳಿ ಬರುತ್ತಿದೆ.
ಇದನ್ನೂ ಓದಿ | Hori Habba 2022 | ಶಿವಮೊಗ್ಗದಲ್ಲಿ ಹೋರಿ ಬೆದರಿಸುವ ಸ್ಪರ್ಧೆಯ ಅವಘಡ: ಇಬ್ಬರು ಯುವಕರ ಸಾವು