ಸೊರಬ: ತಾಲೂಕಿನ ಯಲವಳ್ಳಿ ಗ್ರಾಮದಲ್ಲಿ ಶ್ರೀ ಚನ್ನಬಸವೇಶ್ವರ ಕಬಡ್ಡಿ ಸಮಿತಿ ಹಾಗೂ ಊರ ಗ್ರಾಮಸ್ಥರು ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿಯನ್ನು (Kabaddi Tournament) ಆಯೋಜಿಸಿದ್ದರು.
ವರ್ಷದಲ್ಲಿ ದ್ವಿತೀಯ ಭಾರಿ ಹಮ್ಮಿಕೊಳ್ಳಲಾಗಿದ್ದ ಕಬಡ್ಡಿ ಪಂದ್ಯಾವಳಿಯಲ್ಲಿ ಮೂವತ್ತಕ್ಕೂ ಹೆಚ್ಚು ಗ್ರಾಮೀಣ ಕಬಡ್ಡಿ ತಂಡಗಳು ಭಾಗಿಯಾಗಿದ್ದವು. ವಿವಿಧ ಧಾರ್ಮಿಕ ಕಾರ್ಯದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಯಲವಳ್ಳಿ ಗ್ರಾಮಸ್ಥರು ಕಬಡ್ಡಿ ಪಂದ್ಯಾವಳಿಯನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಪಂದ್ಯಾವಳಿಯಲ್ಲಿ ಮೊದಲನೇ ಬಹುಮಾನ ಮುಂಡಗೋಡಿನ ಪಾಳ ತಂಡದವರು ತೆಗೆದುಕೊಂಡರೆ, ದ್ವಿತೀಯ ಬಹುಮಾನ ಯಲವಳ್ಳಿ ಕಬಡ್ಡಿ ಪಟುಗಳು ಪಡೆದುಕೊಂಡರು. ತೃತೀಯ ಬಹುಮಾನವನ್ನು ಶಿಕಾರಿಪುರ ತಾಲೂಕಿನ ಸಾಗದ್ದೆ ತಂಡದವರು ಪಡೆದುಕೊಂಡರು.
ಇದನ್ನೂ ಓದಿ: BS Yediyurappa : ಯಡಿಯೂರಪ್ಪರನ್ನು ಹಸುವಿನ ಥರ ಹಾಲು ಹಿಂಡಿ ಮನೆಗೆ ಕಳುಹಿಸುತ್ತಾರೆ ಎಂದ ಬಿ.ಕೆ. ಹರಿಪ್ರಸಾದ್
ಹೋರಿ ಹಬ್ಬಕ್ಕೆ ಮಾದರಿಯಾದ ಗ್ರಾಮ
ದೀಪಾವಳಿಯಲ್ಲಿ ಸಹ ಯಲವಳ್ಳಿ ಗ್ರಾಮದಲ್ಲಿ ಸಡಗರ ಹೆಚ್ಚಿಗಿಯೇ ಇರುತ್ತದೆ. ಅದರಲ್ಲೂ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿ ನಡೆಯುವ ದನ ಬೆದರಿಸೋ ಕಾರ್ಯಕ್ರಮ ಪ್ರಾರಂಭ ಆಗುವುದೇ ಈ ಗ್ರಾಮದಿಂದ. ಇಡೀ ರೈತ ಬಾಂಧವರು ಸೇರಿ ಮಾಡುವ ದನ ಬೆದರಿಸುವ ಕಾರ್ಯಕ್ರಮಕ್ಕೆ ಇಲ್ಲಿಂದಲೇ ಚಾಲನೆ ನೀಡತ್ತಾರೆ.
ಇದನ್ನೂ ಓದಿ: Pakistan Cricket Team : ಭಾರತದ ಔದಾರ್ಯ ನೆನೆದ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ