Site icon Vistara News

Kachcha Raste: ಕಚ್ಚಾ ರಸ್ತೆಯಲ್ಲೇ ಬದುಕು ಸಾಗಿಸುವ ವಾನಳ್ಳಿ ಗ್ರಾಮಸ್ಥರು; ರಸ್ತೆ ಅಭಿವೃದ್ಧಿಗೆ ಸಹಕಾರ ನೀಡಿದ ಜನಪ್ರತಿನಿಧಿಗಳು

Vanalli Grama Panchayat sirsi

#image_title

ಶಿರಸಿ: ಕಳೆದ 30 ವರ್ಷಗಳಿಂದ ರಸ್ತೆ ಸಮಸ್ಯೆಗೆ ಮುಕ್ತಿ (Kachcha Raste) ಪಡೆಯಲು ಕಾಯುತ್ತಿರುವ ಕಕ್ಕಳ್ಳಿ ಮುಶ್ಕಿ ಶಿರಗುಣಿ ಭಾಗದ ಜನರಿಗೆ ಈ ಬಾರಿಯೂ ನಿರಾಸೆಯಾಗಿದ್ದು, ಚುನಾವಣೆ ಸಮೀಪಿಸಿದರೂ ರಸ್ತೆ ಆಗದ ಪರಿಣಾಮ ಬೇಸರ ವ್ಯಕ್ತಪಡಿಸಿದ್ದಾರೆ.

ಶಿರಸಿಯಿಂದ ಅಂದಾಜು 30 ಕಿಮೀ ದೂರದಲ್ಲಿರುವ ವಾನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕಕ್ಕಳ್ಳಿಯಿಂದ ಶಿರಿಗಿಣಿ ಹೋಗುವ ರಸ್ತೆಯ ಅಭಿವೃದ್ಧಿ ಮರೀಚಿಕೆಯಾಗಿದ್ದು, ಕಚ್ಚಾ ರಸ್ತೆಯಲ್ಲೇ ಇಂದೂ ಬದುಕು ಸಾಗಿಸುವ ಸ್ಥಿತಿಯಿದೆ.

ಕಳೆದ 30 ವರ್ಷಗಳಿಂದ ಈ ಭಾಗದಲ್ಲಿ ರಸ್ತೆ ಅಭಿವೃದ್ಧಿ ಆಗಿಲ್ಲ. ಕಕ್ಕಳ್ಳಿಯಿಂದ ಶಿರಗುಣಿಗೆ ಸುಮಾರು 10 ಕಿಮೀ ದೂರವಿದ್ದು, ಇದಷ್ಟೂ ದೂರ ಕಚ್ಚಾ ರಸ್ತೆಯಲ್ಲೇ ಸಾಗಬೇಕಿದೆ. ಅಲ್ಲದೇ ಈ ಭಾಗದಲ್ಲಿ ಅಂದಾಜು 300 ಕ್ಕೂ ಅಧಿಕ ಮನೆಗಳಿದ್ದು, ಅಲ್ಲಿಗೆ ಮತ ಕೇಳಲು ಬರುವವರು ರಸ್ತೆ ಅಭಿವೃದ್ಧಿಗೆ ಸಹಕಾರ ನೀಡುವುದಿಲ್ಲ ಎಂಬ ಆಕ್ರೋಶ ಗ್ರಾಮಸ್ಥರಿಂದ ವ್ಯಕ್ತವಾಗಿದೆ.

ಇದನ್ನೂ ಓದಿ: ChatGPT v/s Humans: ಚಾಟ್‌ಜಿಪಿಟಿ ಮಾನವರ ಸ್ಥಾನ ಪಡೆಯಲಿದೆಯಾ? ಇನ್ಫಿ ನಾರಾಯಣಮೂರ್ತಿ ಹೇಳುವುದೇನು?

“ಮಳೆಗಾಲದಲ್ಲಂತೂ ಇಲ್ಲಿ ಓಡಾಡುವುದೂ ಕಷ್ಟ ಎನ್ನುವ ಸ್ಥಿತಿ ಇರುತ್ತದೆ‌. ವಾಹನಗಳ ಸಂಚಾರ ಬಲು ಕಷ್ಟ. ಇಂದಿನ ದಿನದಲ್ಲೂ ಕುಗ್ರಾಮದಲ್ಲಿ ಇದ್ದೇವೆ ಎನ್ನುವ ಬೇಸರ ನಮ್ಮದಾಗಿದೆ” ಎನ್ನುತ್ತಾರೆ ಸ್ಥಳೀಯ ಸಂದೇಶ ಭಟ್. “ಅಲ್ಲದೇ ಧೋರಣಗಿರಿಯವರೆಗೆ ರಸ್ತೆ ಆಗಿದ್ದು, ಮುಂದೆ ಶಿರಿಗಿಣಿವರೆಗೆ ರಸ್ತೆ ಆಗಬೇಕಿದೆ. ಈ ಬಗ್ಗೆ ಜನಪ್ರತಿನಿಧಿಗಳು ಗಮನಹರಿಸಬೇಕಿದೆ” ಎಂದು ಅವರು ವಿನಂತಿಸಿದ್ದಾರೆ.

ಇದನ್ನೂ ಓದಿ: IND VS AUS: 10 ವರ್ಷಗಳಲ್ಲಿ ಮೂರನೇ ಸೋಲು ಕಂಡ ಭಾರತ

“ಈ ಗ್ರಾಮಗಳಿಗೆ ಬಸ್ಸಿನ ವ್ಯವಸ್ಥೆಯೂ ಬಂದ್ ಅಗಿದೆ. ಬಸ್ಸು ಹತ್ತಬೇಕು ಎಂದಾದಲ್ಲಿ 10 ಕಿಮೀ ನಡೆದು ಬಂದು ಕಕ್ಕಳ್ಳಿಯಿಂದ ಬರಬೇಕಿದೆ. ಹೀಗಾಗಿ ಇಲ್ಲಿಗೆ ಮೂಲಭೂತ ಸೌಕರ್ಯ ಒದಗಿಸಲು ಜನಪ್ರತಿನಿಧಿಗಳು, ಅಧಿಕಾರಿಗಳು ಮುಂದಾಗಬೇಕು” ಎಂದು ಅವರು ಆಗ್ರಹಿಸಿದ್ದಾರೆ.‌

“ಶಿರಗುಣಿ ಭಾಗದಲ್ಲಿ ಹವ್ಯಕ, ಸಿದ್ಧಿ, ಕರೆ ಒಕ್ಕಲಿಗರು ಇದ್ದಾರೆ. ಈ ಭಾಗದಲ್ಲಿ ಸತತವಾಗಿ ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿದ್ದು, ಆದರೂ ಶಾಸಕರಿಂದ ಭರವಸೆ ಮಾತ್ರ ವ್ಯಕ್ತವಾಗುತ್ತಿದೆ. ಮೂಲಭೂತ ಸೌಕರ್ಯ ಇಲ್ಲದೇ ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ತೀರಾ ಹಿಂದುಳಿದಿದ್ದು, ಗ್ರಾಮದ ಸರ್ವತೋಮುಖ ಅಭಿವೃದ್ಧಿ ಆಗಬೇಕಿದೆ” ಎಂದು ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: Lokayukta Raid: ಮಾಡಾಳ್‌ ವಿರೂಪಾಕ್ಷಪ್ಪ, ಬಿ.ಎಸ್‌. ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿರುವವರು: ಮಾಜಿ ಸಿಎಂ ಸಿದ್ದರಾಮಯ್ಯ

Exit mobile version