ಕಡೂರು: “ಮಡಿವಾಳ ಸಮಾಜದ (Madiwala Samaj) ಮಾಚಿದೇವ ಸಮುದಾಯ ಭವನದ ನಿರ್ಮಾಣಕ್ಕೆ ಸಂಪೂರ್ಣ ಸಹಕಾರ ನೀಡುತ್ತೇನೆ” ಎಂದು ಶಾಸಕ ಬೆಳ್ಳಿಪ್ರಕಾಶ್ ತಿಳಿಸಿದರು.
ಪಟ್ಟಣದ ದೊಡ್ಡಪೇಟೆಯ ಬೆಂಕಿ ಕಾಲೊನಿಯಲ್ಲಿ ಮಡಿವಾಳ ಮಾಚಿದೇವ ಸಮುದಾಯ ಭವನ ನಿರ್ಮಾಣದ ಕಾರ್ಯಕ್ಕೆ ಭಾನುವಾರ (ಮಾ.26) ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿ, “ಮಡಿವಾಳ ಸಮುದಾಯದ ಆಶಯದಂತೆ ಸಮುದಾಯ ಭವನಕ್ಕೆ ತಮ್ಮ ಅನುದಾನವನ್ನು ನೀಡುವುದರೊಂದಿಗೆ ತಮ್ಮ ಇತಿಮಿತಿಯಲ್ಲಿ ಎಲ್ಲ ಸಹಕಾರವನ್ನು ನೀಡುತ್ತೇನೆ. ಸಮಾಜದ ಮುಖಂಡರು ಈ ಮಹತ್ಕಾರ್ಯಕ್ಕೆ ಕೈಜೋಡಿಸಬೇಕು” ಎಂದು ಮನವಿ ಮಾಡಿದರು.
ಇದನ್ನೂ ಓದಿ: ವೈದ್ಯ ದರ್ಪಣ ಅಂಕಣ: ನೆತ್ತಿಯೊಳಗಿನ ವಿದ್ಯುತ್ ಮತ್ತು ಮಾನಸಿಕ ಸಂತೃಪ್ತಿ
ಈ ಸಂದರ್ಭದಲ್ಲಿ ಯಳನಾಡು ಮಠದ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ, ಬೀರೂರು ರಂಭಾಪುರ ಶಾಖಾ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್, ಮಡಿವಾಳ ಸಮಾಜದ ತಾಲೂಕು ಅಧ್ಯಕ್ಷ ಕೃಷ್ಣಮೂರ್ತಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಆರ್.ಮಹೇಶ್ ಒಡೆಯರ್, ಷಡಾಕ್ಷರಿ, ಕೆ.ಎನ್. ಬೊಮ್ಮಣ್ಣ, ರಾಜು, ಚೇತನ್ ಕೆಂಪರಾಜ್, ಗುಬ್ಬಿಹಳ್ಳಿ ಪ್ರಸನ್ನ, ಯಗಟಿರಂಗಪ್ಪ, ಮಂಜುನಾಥ್ ನಿರ್ವಾಣಪ್ಪ, ಬೀರೂರು ರಾಜಶೇಖರ್ ಇದ್ದರು.
ಇದನ್ನೂ ಓದಿ: Viral News : ಬೆಳಗ್ಗೆ ಜಡ್ಜ್, ರಾತ್ರಿ ಪೋರ್ನ್ ಸ್ಟಾರ್, ಅಮೆರಿಕ ವ್ಯಕ್ತಿಯ ಮೂನ್‌ಲೈಟ್ ವರ್ಕ್!