Site icon Vistara News

Kadur News: ಗ್ರಾಮೀಣ ಸ್ಪರ್ಧೆಗಳು ನಮ್ಮ ಜಾನಪದ ಸಂಸ್ಕೃತಿಯ ಪ್ರತೀಕ: ಜಿಗಣೆಹಳ್ಳಿ ಮಂಜು

Bullock cart race kadur

#image_title

ಕಡೂರು: “ಗ್ರಾಮೀಣ ಸ್ಪರ್ಧೆಗಳು ನಮ್ಮ ಜಾನಪದ ಸಂಸ್ಕೃತಿಯ (folk culture) ಪ್ರತೀಕ” ಎಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಜಿಗಣೆಹಳ್ಳಿ ಮಂಜು ಹೇಳಿದರು.

ತಾಲೂಕಿನ ಜಿಗಣೆಹಳ್ಳಿಯಲ್ಲಿ ಬೆಳ್ಳಿ ಬಳಗದ ವತಿಯಿಂದ ಭಾನುವಾರ (ಮಾ.26) ಆಯೋಜಿಸಲಾಗಿದ್ದ ಜೋಡಿ ಎತ್ತಿನ ಗಾಡಿ ಓಟದ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿ, “ಎತ್ತುಗಳು ರೈತರ ಜೀವನಾಡಿಯಿದ್ದಂತೆ. ಅವುಗಳ ಓಟದ ಸ್ಫರ್ಧೆಯನ್ನು ಏರ್ಪಡಿಸುವುದು ಕೇವಲ ಮನೋರಂಜನೆಗಾಗಿ ಮಾತ್ರವಲ್ಲ. ಗ್ರಾಮೀಣ ಕ್ರೀಡಾ ಪ್ರಾಕಾರಗಳನ್ನು ಉಳಿಸುವ ಆಶಯವೂ ಇದೆ. ಎತ್ತುಗಳನ್ನು ಹಿಂಸಿಸದೆ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ” ಎಂದರು.

ತೆಲುಗು ಗೌಡ ಸಮಾಜದ ಮುಖಂಡ ಎಸ್.ಬಿ.ಹನುಮಂತಪ್ಪ ಮಾತನಾಡಿ, “ಕೃಷಿ ಯಂತ್ರಗಳು ಬಂದ ಮೇಲೆ ರಾಸುಗಳ ಸಂತತಿ ಕಡಿಮೆಯಾಗುತ್ತಿದೆ. ಯುವಕರಲ್ಲಿ ರಾಸುಗಳನ್ನು ಸಾಕುವ ಹವ್ಯಾಸ ಬರಬೇಕು. ಇಲ್ಲವಾದಲ್ಲಿ ಮುಂದಿನ ಪೀಳಿಗೆಗೆ ರಾಸುಗಳನ್ನು ಫೋಟೊದಲ್ಲಿ ತೋರಿಸಬೇಕಾದ ಪರಿಸ್ಥಿತಿ ಬರಬಹುದು” ಎಂದು ಹೇಳಿದರು.

ಇದನ್ನೂ ಓದಿ: BIFFES 2023: ಬೆಂಗಳೂರು ಚಿತ್ರೋತ್ಸವದಲ್ಲಿ ಅಸಮಾಧಾನದ ಹೊಗೆ: ಹಲ್ಲೆಗೆ ಮುಂದಾದ ಅಶೋಕ್ ಕಶ್ಯಪ್, ಏನಿದು ಆರೋಪ?

ಬಿಜೆಪಿ ತಾಲೂಕು ಮಂಡಲ ಕಾರ್ಯದರ್ಶಿ ಕುರುಬಗೆರೆ ಮಹೇಶ್ ಮಾತನಾಡಿ, “ಜನರು ಕ್ರಿಕೆಟ್‌ಗೆ ಮಾರು ಹೋಗುತ್ತಿರುವ ಈ ಸಂದರ್ಭದಲ್ಲಿ ಗ್ರಾಮದ ಯುವಕರು ಗ್ರಾಮೀಣ ಕ್ರೀಡೆಯಾದ ಜೋಡೆತ್ತಿನ ಗಾಡಿ ಓಟದ ಸ್ಪರ್ಧೆಯನ್ನು ಆಯೋಜಿಸಿರುವುದು ಸಂತಸದ ವಿಚಾರ” ಎಂದರು.

ಗ್ರಾಮದ ಮುಖಂಡರಾದ ಮಲ್ಲಪ್ಪ, ಕೆಂಚಪ್ಪ, ತಮ್ಮಯ್ಯ ಡ, ಸಿದ್ದಪ್ಪ, ರವಿಕುಮಾರ್, ಆರ್‌. ಹನುಮಂತಪ್ಪ, ಮರಿಯಪ್ಪ, ಮಲ್ಲೇಶಪ್ಪ, ಸಿದ್ದಪ್ಪ, ಮಲ್ಲಪ್ಪ, ಬೆಳ್ಳಿ ಬಳಗದ ಯುವಕರು ಇದ್ದರು.

ಇದನ್ನೂ ಓದಿ: Actor Ram charan : ಆರ್‌ಆರ್‌ಆರ್‌ ಸಿನಿಮಾ ಯಶಸ್ಸಿನ ಗುಂಗಿನಲ್ಲಿರುವ ನಟ ರಾಮ್‌ಚರಣ್‌ ಭವಿಷ್ಯವೇನು?

Exit mobile version