ಕಡೂರು: ತಾಲೂಕಿನಲ್ಲಿ ನೂತನವಾಗಿ ರಚಿಸಲಾದ 22 ಕಂದಾಯ ಗ್ರಾಮಗಳ 1426 ಫಲಾನುಭವಿಗಳಿಗೆ 94D ಹಕ್ಕು ಪತ್ರವನ್ನು (title deeds) ಶಾಸಕ ಬೆಳ್ಳಿಪ್ರಕಾಶ್ ಸೋಮವಾರ (ಮಾ.27) ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ನಮ್ಮದೇ ಸ್ವಂತ ಮನೆಯಿದ್ದರೂ ಅದರ ಹಕ್ಕು ಪತ್ರ ಇರದೆ ಯಾವುದೇ ಸೌಲಭ್ಯ ಪಡೆಯಲು ಆಗುತ್ತಿರಲಿಲ್ಲ. ಈ ತೊಂದರೆಯನ್ನು ಗಮನಿಸಿದ ಸರ್ಕಾರವು ಕಡೂರು ಕ್ಷೇತ್ರದ 22 ಗ್ರಾಮಗಳನ್ನು ನೂತನವಾಗಿ ಕಂದಾಯ ಗ್ರಾಮವೆಂದು ಪರಿಗಣಿಸಿದೆ. ಅಲ್ಲಿನ ನಿವಾಸಿಗಳಿಗೆ ಇಂದು ಹಕ್ಕುಪತ್ರ ವಿತರಿಸಲಾಗಿದೆ. ಕ್ಷೇತ್ರದ ಶಾಸಕನಾಗಿ ನೀರು, ಸೂರು, ಟಾರು ಎಂಬ ಕಲ್ಪನೆಯಲ್ಲಿ ಕೆಲಸ ಮಾಡಿದ್ದು, ಕ್ಷೇತ್ರಕ್ಕೆ ಶಾಶ್ವತ ನೀರಾವರಿ, ಗ್ರಾಮಾಂತರ ರಸ್ತೆಗಳ ಸುಧಾರಣೆ ಮತ್ತು ಸೂರು ಕಲ್ಪಿಸುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸಿದ ಆತ್ಮತೃಪ್ತಿಯಿದೆ” ಎಂದರು.
ಇದನ್ನೂ ಓದಿ: Facebook: ಫೇಸ್‌ಬುಕ್‌ನಲ್ಲಿ ಇಂಟರ್ನೆಟ್ ಸ್ಪೀಡ್ ಚೆಕ್ ಮಾಡಿ ! ಈ ಸ್ಟೆಪ್ಸ್ ಫಾಲೋ ಮಾಡಿ ನೋಡಿ…
ತಹಸೀಲ್ದಾರ್ ಜೆ.ಉಮೇಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಚ್.ಎಂ.ರೇವಣ್ಣಯ್ಯ, ತಾಲೂಕು ಪಂಚಾಯಿತಿ ಇಒ ಪ್ರವೀಣ್, ಪಶು ವೈದ್ಯಾಧಿಕಾರಿ ಡಾ.ಉಮೇಶ್, ಟಿಎಂಒ ಡಾ.ರವಿಕುಮಾರ್, ಬಿಇಒ ಸಿದ್ದರಾಜ ನಾಯ್ಕ, ಸರ್ವೆ ಸೂಪರ್ ವೈಸರ್ ಉಮೇಶ್, ಗ್ರೇಡ್ 2 ತಹಸೀಲ್ದಾರ್ ಕಲ್ಮರುಡಪ್ಪ, ಸಿಡಿಪೊ ಶಿವಪ್ರಕಾಶ್ ಇದ್ದರು.
ಇದನ್ನೂ ಓದಿ: Karnataka Congress: ಗುಬ್ಬಿ ಜೆಡಿಎಸ್ ಶಾಸಕ ಎಸ್.ಆರ್. ಶ್ರೀನಿವಾಸ್ ರಾಜೀನಾಮೆ: ಸಿದ್ದರಾಮಯ್ಯ ಜತೆಗೆ ಮಾತುಕತೆ