ಅಫಜಲಪುರ: ಅಂತಾರಾಜ್ಯ (Interstate) 7 ಜನ ಕಳ್ಳರನ್ನು ಬಂಧಿಸಿ, ಅವರಿಂದ 14 ಬೈಕ್ (Byke)ಗಳನ್ನು ರೇವೂರ(ಬಿ) ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಕಲಬುರಗಿ ಎಸ್ಪಿ ಇಶಾ ಪಂತ್ ತಿಳಿಸಿದರು.
ರೇವೂರ (ಬಿ) ಪೊಲೀಸ್ ಠಾಣೆಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ, ಅಂತರರಾಜ್ಯ ಕಳ್ಳರ ಕಾರ್ಯಾಚರಣೆ ಕುರಿತು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟಲು ನಿರಂತರವಾಗಿ ನಮ್ಮ ಇಲಾಖೆ ಶ್ರಮಿಸುತ್ತಿದೆ. ಅಂತರ್‌ರಾಜ್ಯಗಳಲ್ಲಿ ಕಳ್ಳತನ ನಡೆಸುತ್ತಿದ್ದ 7 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: Viral News: ರಾಜಿ ಮೂಲಕ 138 ದಂಪತಿಗಳ ವಿಚ್ಛೇದನ ತಡೆದಿದ್ದ ವಕೀಲನಿಗೆ ಡಿವೋರ್ಸ್ ನೀಡಿದ ಪತ್ನಿ
ಆರೋಪಿತರು ಕಲಬುರಗಿ, ವಿಜಯಪುರ ಮತ್ತು ಮಹಾರಾಷ್ಟ್ರ ರಾಜ್ಯದ ಸೋಲಾಪುರ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಕಳ್ಳತನ ಮಾಡಿದ ಒಟ್ಟು 14 ಬೈಕ್‌ಗಳನ್ನು ಕಳ್ಳತನ ಮಾಡಿದ ಬಗ್ಗೆ ವಿಚಾರಣೆ ವೇಳೆಯಲ್ಲಿ ತಿಳಿದು ಬಂದಿದೆ ಎಂದು ಹೇಳಿದರು.
ಆರೋಪಿತರಾದ ಮಹಾಂತೇಶ ಗಂಡೊಳ ಸಾ. ಚೌಡಾಪುರ, ದಾವುದ ಮುಜಾವರ ಸಾ.ಚಿಣಮಗೇರಾ, ಸುಲೇಮಾನ್ ಹೊಸಮನಿ ಸಾ.ಚಿಣಮಗೇರಾ, ಶಿವಾ ದೊಡ್ಮನಿ ಸಾ.ಇಟಗಾ, ಸುಬಾನ ಖುರೇಷಿ ಸಾ.ಚವಡಾಪುರ, ಸುನೀಲ್ ಮ್ಯಾಕೇರಿ ಸಾ.ಚಿಣಮಗೇರಾ,ಸದ್ದಾಂ ಖುರೇಷಿ ಸಾ.ಚೌಡಾಪುರ ಅವರನ್ನು ಬಂಧಿಸಿ ಅಂದಾಜು 9 ಲಕ್ಷ 10 ಸಾವಿರ ರೂ ಮೌಲ್ಯದ ಒಟ್ಟು 14 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Abhishek-Aviva: ಅಂಬಿ ಮಗನ ಬೀಗರೂಟ ಇಂದು; 15 ಎಕರೆ ಪ್ರದೇಶದಲ್ಲಿ ಭರ್ಜರಿ ಸಿದ್ಧತೆ!
ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡುವ ಕುರಿತು ಡಿವೈಎಸ್ಪಿ ಗೋಪಿ ಬಿ.ಆರ್ ಅವರು ಸಿಪಿಐ ರಾಜಶೇಖರ್ ಬಡದೇಸಾರ ನೇತೃತ್ವದಲ್ಲಿ ಪಿಎಸ್ಐ ಗಂಗಮ್ಮ ತನಿಖಾ ವಿಭಾಗದ ಪಿಎಸ್ಐ ಶ್ರೀದೇವಿ ಹಾಗೂ ಸಿಬ್ಬಂದಿಗಳಾದ ಮಲ್ಲಣ್ಣ ,ಬೀರಣ್ಣ, ವಿಠ್ಠಲ್,ಮಲ್ಲಪ್ಪ,ಶಿವಯ್ಯಾ,ತುಳಜಪ್ಪ, ಭೀಮಾಶಂಕರ,ಯಲ್ಲಪ್ಪ, ಮಲ್ಲಿನಾಥ, ಅಂಬರೀಶ್,ಆನಂದ ಹಾಗೂ ರೇವೂರ(ಬಿ) ಠಾಣೆಯ ಸಿಬ್ಬಂದಿಗಳಿಂದ ಕೂಡಿದ ವಿಶೇಷ ಪತ್ತೆ ದಳ ರಚನೆ ಮಾಡಿದ್ದು, ತಂಡವು ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.