ಕಲಬುರಗಿ: ಚುನಾವಣೆಯಲ್ಲಿ (Election) ನಮ್ಮ ಕುಟುಂಬಕ್ಕೆ (Family) ಗ್ರಹಣ ಹಿಡಿದಿತ್ತು ಎಂದು ಅಫಜಲಪುರ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ನಿತಿನ್ ಗುತ್ತೇದಾರ್ ಹೇಳಿದ್ದಾರೆ.
ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಪುರದಲ್ಲಿ ದಿ.ವೆಂಕಯ್ಯ ಗುತ್ತೇದಾರ್ ಅವರ 26ನೇ ಪುಣ್ಯ ಸ್ಮರಣೆಯಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ಇದನ್ನೂ ಓದಿ: Hema Malini : ಪತಿ ಧರ್ಮೇಂದ್ರರ ಮೊದಲ ಪತ್ನಿಯ ಮಗನ ಮದುವೆಗೆ ಹೋಗದ ಹೇಮಾ ಮಾಲಿನಿ!
ಕೆಲವು ತಿಂಗಳ ಹಿಂದೆ ನಾವು ಚುನಾವಣೆ ಎದುರಿಸಬೇಕಾಗಿತ್ತು. ಸೂರ್ಯ, ಚಂದ್ರನಿಗೆ ಯಾವ ರೀತಿ ಗ್ರಹಣ ಹಿಡಿಯುತ್ತದೆ ಅದೇ ರೀತಿ ಚುನಾವಣೆಯ ಸಂಧರ್ಭದಲ್ಲಿ ನಮ್ಮ ಗುತ್ತೇದಾರ್ ಕುಟುಂಬಕ್ಕೂ ಗ್ರಹಣ ಹಿಡಿದಿತ್ತು. ಆದರೆ ವೆಂಕಯ್ಯ ಗುತ್ತೇದಾರ್ ಅವರ ಮಕ್ಕಳಾದ ನಾವು ಸದಾ ಒಂದಾಗಿದ್ದೇವೆ. ನಮ್ಮಲ್ಲಿ ಯಾವುದೇ ಭೇದ-ಭಾವ ಇಲ್ಲ. ಹೀಗಾಗಿ ಗುರು ಹಿರಿಯರ ಮಾರ್ಗದರ್ಶನದಲ್ಲಿ ಗ್ರಹಣ ಬಿಡುತ್ತದೆ ಎಂದು ಅಭಿಪ್ರಾಯಪಟ್ಟರು.
ನಮ್ಮ ತಂದೆಯವರ ಮಾರ್ಗದರ್ಶನದಲ್ಲಿ ನಮ್ಮ ಕುಟುಂಬದ ಎಲ್ಲಾ ಸದಸ್ಯರು ನಡೆಯುತ್ತಾ ಬಂದಿದ್ದೇವೆ, ನಮ್ಮ ಗುರು ಹಿರಿಯರ ಮತ್ತು ತಂದೆಯವರ ಅಭಿಮಾನಿಗಳ ಸಹಕಾರದೊಂದಿಗೆ ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಬಂದಿದ್ದೇವೆ. ಇದೇ ರೀತಿ ನಮ್ಮ ಕುಟುಂಬದಿಂದ ಮುಂದೆಯೂ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬರುತ್ತೇವೆ. ಕ್ಷೇತ್ರದ ಮತದಾರರ ಆಶೀರ್ವಾದ ನಿರಂತರವಾಗಿ ನಮ್ಮ ಕುಟುಂಬದ ಮೇಲೆ ಹೀಗೆ ಇರಲಿ ಎಂದು ಮನವಿ ಮಾಡಿದರು.
ಇದನ್ನೂ ಓದಿ: ICC Champions Trophy 2013: ಭಾರತ ತಂಡದ ಚಾಂಪಿಯನ್ಸ್ ಟ್ರೋಫಿ ಗೆಲುವಿಗೆ ಇಂದು 10ನೇ ವರ್ಷದ ಸಂಭ್ರಮ
ಡಾ.ಜಗದ್ಗುರು ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಮನುಷ್ಯ ಹುಟ್ಟು ಅನಿಶ್ಚಿತ ಸಾವು ನಿಶ್ಚಿತ ಆದರೆ ಹುಟ್ಟು ಸಾವಿನ ಮಧ್ಯದಲ್ಲಿ ಪರೋಪಕಾರಿ ಕೆಲಸಗಳನ್ನು ಮಾಡಿದಾಗ ಮಾತ್ರ ಪುಣ್ಯಸ್ಮರಣೆ ಕಾರ್ಯಕ್ರಮಗಳನ್ನು ಮಾಡುತ್ತಾರೆ. ಅದೇ ರೀತಿ ಈ ಭಾಗದಲ್ಲಿ ನಿರಂತರವಾಗಿ ಸಾಮಾಜಿಕ ಸೇವೆ ಸಲ್ಲಿಸಿದ ದಿ.ವೆಂಕಯ್ಯ ಗುತ್ತೇದಾರ್ ಅವರ ಹಾದಿಯಲ್ಲಿ ಯುವ ನಾಯಕ ನಿತಿನ್ ಗುತ್ತೇದಾರ್ ನಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.