ಕಲಬುರಗಿ: ವಸತಿ ಶಾಲೆಯಲ್ಲಿ (Residential school) ವಾರ್ಡನ್ (Warden) ಸರಿಯಾಗಿ ಊಟ ನೀಡುತ್ತಿಲ್ಲ ಎಂದು ಆರೋಪಿಸಿ ಅಳಂದ ತಾಲೂಕಿನ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನೀಯರು ಶಾಲೆಯ ಮುಂಭಾಗ ಪ್ರತಿಭಟನೆ (Protest) ನಡೆಸಿದರು.
ಜಿಲ್ಲೆಯ ಅಳಂದ ತಾಲೂಕಿನ ಕೊರಳ್ಳಿ ಗ್ರಾಮದಲ್ಲಿರುವ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ವಾರ್ಡನ್ ನಾಗಮ್ಮ ಅವಟೆ ಅವರು ಮೆನು ಚಾರ್ಟ್ ಪ್ರಕಾರ ಸರಿಯಾಗಿ ಯಾವುದೇ ಊಟ ನೀಡುತ್ತಿಲ್ಲ ಎಂದು ಆರೋಪಿಸಿದ ವಿದ್ಯಾರ್ಥಿನಿಯರು, ವಾರ್ಡನ್‌ರನ್ನು ಬದಲಾವಣೆ ಮಾಡುವಂತೆ ಪ್ರತಿಭಟನಾನಿರತ ವಿದ್ಯಾರ್ಥಿನಿಯರು ಆಗ್ರಹಿಸಿದರು.
ಇದನ್ನೂ ಓದಿ: KARBWWB Recruitment 2023 : ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ 186 ಹುದ್ದೆ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ
ಕಳೆದ ಕೆಲ ದಿನಗಳ ಹಿಂದೆ ಈ ಕುರಿತು ವಿಸ್ತಾರ ನ್ಯೂಸ್ ನಲ್ಲಿ ಸುದ್ದಿ ಸಹ ಪ್ರಸಾರವಾಗಿತ್ರು, ಇದರ ಬೆನ್ನಲ್ಲೆ ಅಳಂದ ಶಾಸಕ ಬಿ.ಅರ್.ಪಾಟೀಲ್ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆದರೂ ವಾರ್ಡನ್ ಸರಿಯಾಗಿ ಊಟ ನೀಡುತ್ತಿಲ್ಲ ಎಂದು ಆರೋಪಿಸಿ ಶನಿವಾರ ವಿದ್ಯಾರ್ಥಿನಿಯರು ಶಾಲೆ ಆವರಣದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಇದನ್ನೂ ಓದಿ: Nikhil Siddharth: ಇದೇ 29ಕ್ಕೆ ನಿಖಿಲ್ ಸಿದ್ದಾರ್ಥ್ ಸಿನಿಮಾ ರಿಲೀಸ್; ಸ್ಪೆಷಲ್ ರೋಲ್‌ನಲ್ಲಿ ರಾಣಾ ದಗ್ಗುಭಾಟಿ!
ಸ್ಥಳಕ್ಕೆ ಜಿಲ್ಲಾಧಿಕಾರಿ ಅಥವಾ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಆಗಮಿಸುವಂತೆ ವಿದ್ಯಾರ್ಥಿನಿಯರು ಒತ್ತಾಯಿಸಿದರು.