Site icon Vistara News

Kalaburagi News: ಶಹಾಬಾದ್‌ನಲ್ಲಿ ಎತ್ತಿನ ಬಂಡಿಯ ಮೆರವಣಿಗೆಯೊಂದಿಗೆ ಸಂಭ್ರಮದ ಕಾರಹುಣ್ಣಿಮೆ ಆಚರಣೆ

Bullock cart procession in Shahabad

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ರೈತರ ಹಬ್ಬ (Farmer’s festival) ಎಂದೇ ಕರೆಯಲ್ಪಡುವ ಹಬ್ಬವಾದ ಕಾರಹುಣ್ಣಿಮೆಯನ್ನು ಎತ್ತಿನ ಬಂಡಿ ಮೆರವಣಿಗೆಯೊಂದಿಗೆ (Bullock cart procession) ಶಹಾಬಾದ್ ತಾಲೂಕಿನಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

ಕಾರಹುಣ್ಣಿಮೆಗೆ ಅಂಗವಾಗಿ ರೈತರು ಎತ್ತುಗಳಿಗೆ ಹಾಗೂ ಬಂಡಿಗಳಿಗೆ ಬಗೆಬಗೆಯ ಹೂವು ಹಾಗೂ ಬಣ್ಣಗಳಿಂದ ಅಲಂಕರಿಸಿ, ಸಿಂಗರಿಸಲಾಗಿತ್ತು.

ಇದನ್ನೂ ಓದಿ: Kollam Sudhi: ಮಲಯಾಳಂ ಖ್ಯಾತ ಕಿರುತೆರೆ ನಟ ಕಾರು ಅಪಘಾತದಲ್ಲಿ ನಿಧನ; ಕಾರು ನಜ್ಜುಗುಜ್ಜು!

ರೈತರು ಮುಂಗಾರು ಬಿತ್ತನೆಗೂ ಮುನ್ನ ಎತ್ತುಗಳ ಹಬ್ಬವನ್ನು ಕಾರ ಹುಣ್ಣಿಮೆಯನ್ನು ಅದ್ಧೂರಿಯಾಗಿ ಆಚರಿಸುವುದು ವಾಡಿಕೆ. ಹೀಗಾಗಿ ಎತ್ತುಗಳನ್ನು ಅಲಂಕರಿಸಿ, ಸಂಜೆಯ ವೇಳೆ ಪಟ್ಟಣದ ಹೊರವಲಯದ ಬಯಲು ಪ್ರದೇಶದಲ್ಲಿ ಎತ್ತಿನ ಬಂಡಿಗಳನ್ನು ಓಡಿಸಿ ಸಂಭ್ರಮಿಸಿ ಖುಷಿಪಟ್ಟರು.

ಎತ್ತಿನ ಮೆರವಣಿಗೆ ಮಾಡಿದ ರೈತರು

ಹಳೇ ಶಹಾಬಾದ್ ಶರಣಗೌಡ ಮಾರುದ್ರಪ್ಪ ಪೊಲೀಸ್ ಪಾಟೀಲ್ ಅವರ ಮನೆಯಿಂದ ಆರಂಭಗೊಂಡ ಎತ್ತಿನ ಬಂಡಿ ಮೆರವಣಿಗೆಯು ಡೊಳ್ಳು ಮೇಳ ವಾದ್ಯಗಳ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಇದರಿಂದಾಗಿ ಎಲ್ಲೆಡೆ ಸಂಭ್ರಮದ ವಾತಾವರಣ ಮನೆ ಮಾಡಿತ್ತು.

ಇದನ್ನೂ ಓದಿ:200 ಯುನಿಟ್‌ ಫ್ರೀ ಕೊಡಿ ಅನ್ನುವವರಿಗೆ ವಿವೇಕ ಇದೆಯಾ? ಈಗೆಷ್ಟು ಬಳಸ್ತಿದ್ದಾರೋ ಅಷ್ಟೇ ಬಳಸಬೇಕೆಂದ ಸಿದ್ದರಾಮಯ್ಯ

ಈ ಸಂದರ್ಭದಲ್ಲಿ ಮುಖಂಡರಾದ ಗುರುರಾಜ್ ಗೌಡ ಮಾಲಿ ಪಾಟೀಲ್, ಶರಣಪ್ಪ ಕೊಡದುರ್, ಭೀಮರಾವ್ ಸೂಗೂರು, ಶಿವರಾಜ್ ಪಾರ, ಶ್ರೀಶೈಲ್ ಬೆಳಮಗಿ, ಅಣ್ಣಾರಾಯ ಹುಗ್ಗಿ, ಮಲ್ಲಿಕಾರ್ಜುನ್ ಚಂದನ್ ಕೆರಿ, ಧರ್ಮಗೌಡ ದ್ಯಾಮಗೌಡ, ಮಲ್ಲಿಕಾರ್ಜುನ್ ವಾಲಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು

Exit mobile version