ಕಲಬುರಗಿ: ಜಿಂಕೆಯೊಂದನ್ನು ಬೇಟೆಯಾಡಿ (Deer hunting), ಅದರ ಮಾಂಸವನ್ನು ಪಾಲು ಹಾಕುವ ವೇಳೆ ಅರಣ್ಯಾಧಿಕಾರಿಗಳು ದಾಳಿ (Attack) ನಡೆಸಿ, ಓರ್ವ ಆರೋಪಿಯನ್ನು ಬಂಧಿಸಿರುವ ಘಟನೆ ಜಿಲ್ಲೆಯ ಚಿಂಚೋಳಿ ತಾಲೂಕಿನ ಲಕ್ಷ್ಮಸಾಗರ ಅರಣ್ಯ ಪ್ರದೇಶದಲ್ಲಿ ಜರುಗಿದೆ.
ಘಟನಾ ಸ್ಥಳದಲ್ಲಿದ್ದ ರಾಜು ಯಲ್ಲಪ್ಪ ಎಂಬ ಆರೋಪಿಯನ್ನು ಬಂಧಿಸಲಾಗಿದ್ದು, ಉಳಿದ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.
ಇದನ್ನೂ ಓದಿ: ಜೋಕಾಲಿ ಆಡುತ್ತಿದ್ದಾಗ ಉರುಳಿಗೆ ಸಿಲುಕಿ ಬಾಲಕಿ ಸಾವು; ಕುಡಿದು ಈಜಲು ಹೋದವ ನೀರು ಪಾಲು
ಘಟನೆ ಹಿನ್ನೆಲೆ
ಚಿಂಚೋಳಿ ತಾಲೂಕಿನ ಕುಂಚಾವರಂ ಶಾಖೆಯ ಉಪವಲಯ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಇಲ್ಲಿನ ಲಕ್ಷ್ಮಸಾಗರ ಅರಣ್ಯ ಪ್ರದೇಶದಲ್ಲಿ ಗಸ್ತು ತಿರುಗುವ ವೇಳೆ ಅರಣ್ಯ ಪ್ರದೇಶದಲ್ಲಿ ಚುಕ್ಕೆ ಜಿಂಕೆಯ ಹಸಿ ಚರ್ಮ ಹಾಗೂ ಮಾಂಸವನ್ನು ಪಾಲು ಹಾಕಿ ಪ್ಲಾಸ್ಟಿಕ್ ಪಾಕೆಟ್‌ಗಳಲ್ಲಿ ಹಾಕುತ್ತಿರುವಾಗ ಓರ್ವ ಆರೋಪಿ ರಾಜು ಯಲ್ಲಪ್ಪ ಎಂಬುವವನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ, ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಪರಾರಿಯಾದವರನ್ನು ಬಂಧಿಸಲು ಪೊಲೀಸರು ಮುಂದಾಗಿದ್ದಾರೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಲ್. ಬಾವಿಕಟ್ಟಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುನೀಲ್ ಕುಮಾರ್ ಚವ್ಹಾಣ್ ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಸಂಜೀವ್ ಕುಮಾರ್ ಚವ್ಹಾಣ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಜಿಂಕೆ ಬೇಟೆಯಾಡಲು ಬಳಸಿದ ಚೂರಿ, ಕಟ್ಟಿಗೆ ತುಂಡು, ಬೈಂಡಿಂಗ್ ವಯರ್ 100 ಪೀಟ್, ಕಪ್ಪು ಟೋಪಿಗೆ, ಒಂದು ಬೊಗುಣಿ, ಕುದಿಸಿದ ಅರ್ಧ ಕೆಜಿಯಷ್ಟು ಮಾಂಸ, ಜಿಂಕೆಯ ಹಸಿ ಚರ್ಮವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವನ್ಯಜೀವಿ ವಲಯ ಅರಣ್ಯಾಧಿಕಾರಿ ಸಂಜೀವ್‌ಕುಮಾರ್ ಚವ್ಹಾಣ್ ತಿಳಿಸಿದ್ದಾರೆ.
ಇದನ್ನೂ ಒದಿ: ಪಟ್ಟಾಭಿಷೇಕವೆಂದು ಭಾವಿಸಿದ್ದಾರೆ ಪ್ರಧಾನಿ ಮೋದಿ: ಸಂಸತ್ ಭವನ ಲೋಕಾರ್ಪಣೆಗೆ ರಾಹುಲ್ ಗಾಂಧಿ ಟೀಕೆ
ಈ ಸಂದರ್ಭದಲ್ಲಿ ಉಪ ವಲಯ ಅರಣ್ಯ ಅಧಿಕಾರಿ ಭಾನುಪ್ರತಾಪಸಿಂಗ್, ಉಪ ವಲಯ ಅರಣ್ಯ ಅಧಿಕಾರಿ ಗಜಾನಂದ, ಉಪ ವಲಯ ಅರಣ್ಯ ಅಧಿಕಾರಿ ಸಿದ್ದಾರೂಡ ಹೊಕ್ಕುಂಡಿ, ಉಪ ವಲಯ ಅರಣ್ಯ ಅಧಿಕಾರಿ ನಟರಾಜ್, ಪ್ರಭು ಜಾಧವ್, ಚೇತನ, ಸೈಯದ್ ಪಟೇಲ್, ಶೇಖ್ ಅಮೀರ್, ಹಾಲೇಶ್, ಮೈಬೂಬಲಿ, ಲಿಂಬಾಜಿ, ಮನ್ನು, ಶಂಕರ, ಕಿಶ್ಹನ್ ಕಾರ್ಯಾಚರಣೆಯಲ್ಲಿದ್ದರು.