Site icon Vistara News

Kalaburagi News: ಶಹಾಬಾ‌ದ್‌ನಲ್ಲಿ ಮುಂದುವರಿದ ಮಳೆ; ರಸ್ತೆ, ಶಾಲಾ ಆವರಣಕ್ಕೆ ನುಗ್ಗಿದ ಮಳೆ ನೀರು

In Shahabad rain water has entered the school premises

ಶಹಾಬಾ‌ದ್‌: ತಾಲೂಕಿನಲ್ಲಿ ಮತ್ತೆ ವರುಣನ ಆರ್ಭಟ (Rain) ಶನಿವಾರವೂ ಮುಂದುವರಿದಿದೆ, ಪಟ್ಟಣದ ಹಲವಾರು ವಾರ್ಡ್‌ಗಳಲ್ಲಿ ಚರಂಡಿ ನೀರು ತುಂಬಿ ಹರಿಯುತ್ತಿದ್ದು, ರಸ್ತೆಗಳೆಲ್ಲ (Roads) ಜಲಾವೃತವಾಗಿದೆ.

ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಸತತ ಎರಡು ದಿನದಿಂದ ಮಳೆ ಮುಂದುವರಿದಿದೆ. ನಗರದ ಹನುಮಾನ ನಗರದ ಮುಖ್ಯ ರಸ್ತೆಯ ಚರಂಡಿ, ಅಶೋಕ ನಗರದ ರಸ್ತೆಯಲ್ಲಿ ಒಳಚರಂಡಿಗಳಿಂದ ಕೊಳಚೆ ನೀರು ರಸ್ತೆಗೆ ನುಗ್ಗಿ ಅವಾಂತರ ಸೃಷ್ಟಿಯಾಗಿದೆ, ಚರಂಡಿ ನೀರಿನ ದುರ್ನಾತದಿಂದ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಶಹಾಬಾದ್‌ ತಾಲೂಕಿನ ವಿವಿಧೆಡೆ ಮಳೆಯಿಂದಾಗಿ ರಸ್ತೆಗಳೆಲ್ಲ ಜಲಾವೃತವಾಗಿರುವುದು.

ಇದನ್ನೂ ಓದಿ: Gold rate today : ಬಂಗಾರದ ದರದಲ್ಲಿ 250 ರೂ. ಇಳಿಕೆ, ಬೆಳ್ಳಿ ದರ ಯಥಾಸ್ಥಿತಿ

ಗೋಳಾ ಗ್ರಾಮದಲ್ಲಿ ಮಳೆರಾಯ ಸಾಕಷ್ಟು ಅವಾಂತರ ಸೃಷ್ಟಿಸಿದ್ದಾನೆ. ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಗೆ ಮಳೆ ನೀರು ಆವರಣಕ್ಕೆ ನುಗ್ಗಿದೆ, ಇದರಿಂದ ಶಾಲಾ ಮಕ್ಕಳು, ಶಿಕ್ಷಕರು, ಸಿಬ್ಬಂದಿಗಳು ಸಾಕಷ್ಟು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯ ನಿವಾಸಿ ಮರಲಿಂಗ ತಿಳಿಸಿದ್ದಾರೆ.

ಇದನ್ನೂ ಓದಿ: Weather report : ವಾರಾಂತ್ಯದಲ್ಲಿ ಬೆಂಗಳೂರು ಗಡಗಡ; ಉತ್ತರ ಕರ್ನಾಟಕದಲ್ಲಿ ಮಳೆಯ ಅಬ್ಬರ

ಇತ್ತ ಶಾಲಾ ಆವರಣ ಮತ್ತು ಒಳಗಡೆ ನುಗ್ಗಿರುವ ಮಳೆ ನೀರನ್ನು ಹೊರ ಹಾಕಲು ಹರಸಾಹಸ ಪಡುವಂತಾಗಿದೆ. ಶಾಲೆಯ ಹಳೆಯ ಕಟ್ಟಡ ಇಗೋ ಆಗೋ ಬೀಳುವ ಹಂತದಲ್ಲಿದ್ದು, ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಶಾಲೆಯ ಕಟ್ಟಡ ನೆಲಸಮಗೊಳಿಸಲು ವರ್ಷದಿಂದ ಹಲವು ಬಾರಿ ಮನವಿ ಮಾಡಿದರೂ ಇದುವರೆಗೂ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಅವರು ದೂರಿದರು.

Exit mobile version