ಅಫಜಲಪುರ: ತಾಲೂಕಿನ ದೇಸಾಯಿ ಕಲ್ಲೂರ ಗ್ರಾಮದ ಬಳಿಯ ಮುಖ್ಯ ರಸ್ತೆಯಲ್ಲಿನ ವಿದ್ಯುತ್ ಕಂಬವೊಂದು (Electricity pole) ಶಿಥಿಲಗೊಂಡು ಮುರಿದು ಬೀಳುವ ಹಂತದಲ್ಲಿದ್ದು, ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ತಾಲೂಕಿನ ಕಲ್ಲೂರ ಹಾಗೂ ಅಫಜಲಪುರ ಮುಖ್ಯ ರಸ್ತೆಯ ಪಕ್ಕದಲ್ಲಿರುವ ಈ ವಿದ್ಯುತ್ ಕಂಬದೊಳಗಿನ ಕಬ್ಬಿಣದ ಸಲಾಖೆಗಳು ಹೊರ ಚಾಚಿಕೊಂಡಿದ್ದು, ಅರ್ಧದಷ್ಟು ಕಂಬ ಮಧ್ಯದಲ್ಲಿ ಮುರುದಿದೆ. ಇದರಿಂದ ಯಾವಾಗ ಬೇಕಾದರೂ ಕಂಬ ಬೀಳುವ ಹಂತದಲ್ಲಿದೆ.
ಇದನ್ನೂ ಓದಿ: Asian Games: ಏಷ್ಯನ್ ಗೇಮ್ಸ್ನಲ್ಲಿ ಆಡಲು ಭಾರತ ಫುಟ್ಬಾಲ್ ತಂಡಕ್ಕೆ ಅನುಮತಿ
ಕಂಬದ ಸಮೀಪದಲ್ಲಿ ಸರ್ಕಾರಿ ಶಾಲೆ, ದೇವಸ್ಥಾನ ಮತ್ತು ಬ್ಯಾಂಕ್ ಹಾಗೂ ಅಂಗಡಿಯಿದ್ದು, ದಿನ ನಿತ್ಯ ಸಾವಿರಾರು ಜನರು ಮತ್ತು ಶಾಲಾ ವಿದ್ಯಾರ್ಥಿಗಳ ಈ ರಸ್ತೆಯ ಮೂಲಕವೇ ಓಡಾಡುತ್ತಾರೆ, ಸದ್ಯ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ವಿದ್ಯುತ್ ಕಂಬ ಯಾವುದೇ ಕ್ಷಣದಲ್ಲೂ ಬೀಳುವ ಸಾಧ್ಯತೆ ಹೆಚ್ಚಿದೆ,
ಈ ಬಗ್ಗೆ ಬೆಸ್ಕಾಂ ಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.