ಕಲಬುರಗಿ: ಜಿಲ್ಲೆಯ ಅಫಜಲಪುರ ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ವಿಸ್ತಾರ ನ್ಯೂಸ್ ಸಹಯೋಗದಲ್ಲಿ 9ನೇ ಅಂತಾರಾಷ್ಟ್ರೀಯ ಯೋಗ ದಿನ (International Yoga Day) ಆಚರಿಸಲಾಯಿತು.
ವಿಸ್ತಾರ ನ್ಯೂಸ್, ಆಯುಷ್ ಆರೋಗ್ಯ ಕ್ಷೇಮ ಕೇಂದ್ರ ಮತ್ತು ಆಯುರ್ವೇದ ಚಿಕಿತ್ಸಾಲಯ ಬಳೂರ್ಗಿ ಅವರ ಸಹಯೋಗದಲ್ಲಿ ನಡೆದ ಕಾರ್ಯಕ್ರಮಕ್ಕೆ ಯೋಗ ಶಿಕ್ಷಕಿ ಪ್ರಭಾವತಿ ಮೇತ್ರಿ ಚಾಲನೆ ನೀಡಿದರು.
ಇದನ್ನೂ ಓದಿ: Yoga Day 2023: ಸುತ್ತೂರು ಮಠದಲ್ಲಿ ಯೋಗ ದಿನಾಚರಣೆ; 2 ಸಾವಿರಕ್ಕೂ ಹೆಚ್ಚು ಮಂದಿ ಭಾಗಿ
ಬಳಿಕ ಮಾತನಾಡಿದ ಪ್ರಭಾವತಿ ಮೇತ್ರಿ, ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳಿಗೆ ಯೋಗ ಶಿಕ್ಷಕಿ ಪ್ರಭಾವತಿ ಅವರು ಯೋಗಾಭ್ಯಾಸ ಮಾಡಿಸಿದರು. ಈ ವೇಳೆ ಶಾಲಾ ಸಿಬ್ಬಂದಿ, ನೂರಾರು ಮಕ್ಕಳು ಪಾಲ್ಗೊಂಡಿದ್ದರು.
ಚಿತ್ತಾಪುರದಲ್ಲಿ ಯೋಗ ದಿನಾಚರಣೆ
ಜಿಲ್ಲೆಯ ಚಿತ್ತಾಪುರ ಪಟ್ಟಣದ ಕನ್ಯಾ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಸ್ತಾರ ನ್ಯೂಸ್ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.
ಇದನ್ನೂ ಓದಿ: Yoga Day 2023: ಶಾಲೆಗಳಲ್ಲಿ ಯೋಗಾಭ್ಯಾಸಕ್ಕೆ ಸರ್ಕಾರದ ಸಂಪೂರ್ಣ ಸಹಕಾರ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಗುರು ಕಾಶಿರಾಯ ಕಲಾಲ, ಶರಣು ಮಲಕೂಡ್ , ವಿಸ್ತಾರ ನ್ಯೂಸ್ ತಾಲೂಕು ವರದಿಗಾರ ಅನಂತನಾಗ ದೇಶಪಾಂಡೆ, ಶಿಕ್ಷಕರಾದ ಅಶ್ವಿನಿ, ಶ್ರೀದೇವಿ ಮಾಟೂರ , ಶಬನಾಜ್ ಬೇಗಂ, ಉಮಾದೇವಿ ಗುತ್ತೆದಾರ, ಮಂಜುನಾಥ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.