ಕಲಬುರಗಿ: ಜಿಲ್ಲೆಯ ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ (Priyank Kharge) ಅವರು ಚುನಾವಣೆಯಲ್ಲಿ (Karnataka election 2023) ಗೆಲುವು ಸಾಧಿಸಲಿ ಎಂದು ಸುಕ್ಷೇತ್ರ ಶಕ್ತಿಪೀಠ ನಾಗಾವಿ ಯಲ್ಲಮ್ಮ ದೇವಿಗೆ ಹರಕೆ ಹೊತ್ತಿದ್ದ ಖರ್ಗೆ ಅವರ ಅಭಿಮಾನಿಯೊಬ್ಬರು ಗುರುವಾರ ಹರಕೆ ತೀರಿಸಿ, ಭಕ್ತಿ ಸಮರ್ಪಿಸಿದರು.
ಸಾರ್ವತ್ರಿಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಿಯಾಂಕ್ ಖರ್ಗೆ ಅವರು ಗೆಲುವು ಸಾಧಿಸಿದರೆ, ಖರ್ಗೆ ಅವರ ಅಭಿಮಾನಿ ಮಲ್ಲಮ್ಮ ಏರಿ ಅವರು ಸುಕ್ಷೇತ್ರ ಶಕ್ತಿಪೀಠ ರಾಷ್ಟ್ರಕೂಟರ ಕುಲದೇವತೆ ನಾಗಾವಿ ಯಲ್ಲಮ್ಮ ದೇವಿಗೆ 101 ತೆಂಗಿನ ಕಾಯಿ ಒಡೆಯುವುದು ಹಾಗೂ ತಾಯಿಯ ಪಾದಕ್ಕೆ 101 ಕೊಡ ನೀರು ಹಾಕುತ್ತೇನೆ ಎಂದು ಹರಕೆ ಹೊತ್ತಿದ್ದರು.
ಇದನ್ನೂ ಓದಿ: Mono diet: ಏನಿದು ಏಕಾಹಾರ ಪದ್ಧತಿ? ತೂಕ ಇಳಿಕೆಗೆ ಇದು ಸೂಕ್ತವೇ?
ಅದರಂತೆ ಚಿತ್ತಾಪುರ ಕ್ಷೇತ್ರದಲ್ಲಿ ಪ್ರಿಯಾಂಕ್ ಖರ್ಗೆ ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಕುಟುಂಬ ಸಮೇತ ದೇವಸ್ಥಾನಕ್ಕೆ ಆಗಮಿಸಿ ನಾಗಾವಿ ಯಲ್ಲಮ್ಮ ದೇವಿಗೆ ಹರಕೆ ತೀರಿಸಿ, ಭಕ್ತಿ ಸಮರ್ಪಿಸಿದರು.
ಚಿತ್ತಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಪ್ರಿಯಾಂಕ್ ಖರ್ಗೆ ಅವರಿಗೆ 81,323 ಮತಗಳು ಬಿದ್ದಿದ್ದರೆ ಅವರ ಸಮೀಪದ ಪ್ರತಿಸ್ಪರ್ಧಿ, ಬಿಜೆಪಿಯ ಮಣಿಕಂಠ ರಾಥೋಡ್ ಅವರಿಗೆ 67,683 ಮತಗಳು ಬಿದ್ದಿವೆ.