ಕಲಬುರಗಿ: ದಕ್ಷಿಣ ಭಾರತ ದಲಿತ ಎಜ್ಯುಕೇಷನ್ ಸೂಸೈಟಿಯ ವತಿಯಿಂದ ಜೂನ್ 1ರಿಂದ ಜಿಲ್ಲೆಯಲ್ಲಿ ವಾಕ್ ತರಬೇತಿ ಕೇಂದ್ರ (Speech training center) ಆರಂಭವಾಗಲಿದೆ ಎಂದು ಸೂಸೈಟಿಯ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1994 ರಿಂದ ಮಾಜಿ ರಾಜ್ಯಸಭಾ ಸದಸ್ಯ ದಿವಂಗತ ಗುಂಡಪ್ಪ ಕೋರವಾರ ಅವರ ಹೆಸರಿನಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶ್ರವಷ ದೋಷವುಳ್ಳ ಮಕ್ಕಳಿಗಾಗಿ ದಕ್ಷಿಣ ಭಾರತ ದಲಿತ ಎಜ್ಯುಕೇಷನ್ ಸೊಸೈಟಿ ವಾಕ್ ತರಬೇತಿ ಆರಂಭಿಸಲಾಗಿದೆ, ಅಂದಿನಿಂದ ಈ ಶಾಲೆ ನಡೆಸಿಕೊಂಡು ಬರುತ್ತಿದ್ದು, ಪ್ರಸಕ್ತ ವರ್ಷದಲ್ಲಿ ಜೂನ್ 1ರಿಂದ ಮತ್ತೆ ಆರಂಭವಾಗುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: IPL 2023: ಧೋನಿ ಆಟೋಗ್ರಾಫ್ ಪಡೆದ ಬಳಿಕ ಗವಾಸ್ಕರ್ ಹೇಳಿದ ಮಾತುಗಳೇನು?
ಶ್ರವಣದೋಷವುಳ್ಳ ಮಕ್ಕಳು ಹಾಗೂ ತಾಯಂದಿಯರಿಗೆ ಮಾತು ಬರುವಿಕೆಗಾಗಿ ಅರಿವು ಮೂಡಿಸುವ ಹಿನ್ನಲೆಯಲ್ಲಿ ವಾಕ್ ತರಬೇತಿ ಆರಂಭಿಸಲಾಗಿದೆ ಎಂದು ಹೇಳಿದರು.
ನಾಲ್ಕು ವರ್ಷದೊಳಗಿನ ಶ್ರವಣದೋಷವುಳ್ಳ ಮಕ್ಕಳು ಹಾಗೂ ತಾಯಂದಿರಿಗೆ ಉಚಿತವಾಗಿ ನುರಿತ ತಜ್ಞರಿಂದ ಸ್ಪೀಚ್ ಥೆರಪಿ ನೀಡಲಾಗುತ್ತಿದೆ ಎಂದರು.
ತರಬೇತಿಗೆ ಬರುವ ತಾಯಂದಿರಿಗೆ ಮಾಸಿಕ ಭತ್ಯೆ ಹಾಗೂ ಸಾರಿಗೆ ವೆಚ್ಚ ನೀಡಲಾಗುತ್ತಿದ್ದು, ಇನ್ನು ತಾಯಂದಿರಿಗೆ ಹಾಗೂ ಮಕ್ಕಳಿಗೆ ಊಟದ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: Karnataka Election 2023: ಸಿಎಂ ಬಳಿಕ ಸಂಪುಟ ಪ್ಲ್ಯಾನ್; ಸಚಿವರ ಆಯ್ಕೆಗೆ ಹೈಕಮಾಂಡ್ 10 ಅಂಶ ಸೂತ್ರ
ಸೊಸೈಟಿಯ ವತಿಯಿಂದ ವಾರಕ್ಕೊಮ್ಮೆ ಮಕ್ಕಳ ಕಣ್ಣು, ಕಿವಿ ಸೇರಿದಂತೆ ಆರೋಗ್ಯ ತಪಾಸಣೆಯು ನಡೆಯಲಿದೆ ಎಂದು ಹೇಳಿದರು.