ಕಲಬುರಗಿ: ಭಾರೀ ಮಳೆಯ ನಂತರ ಶನಿವಾರ ಸಂಜೆ (ಜು.30) ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದ ಮಹಿಳೆಯ ಶವ ಆಳಂದ ತಾಲೂಕಿನ ಜಿರೋಳಿ (Kalaburagi) ಬಳಿ ಪತ್ತೆಯಾಗಿದೆ.
ಶ್ರೀದೇವಿ ಪೂಜಾರಿ (42) ಮೃತಪಟ್ಟ ದುರ್ದೈವಿಯಾಗಿದ್ದಾರೆ. ತೀರ್ಥ ಗ್ರಾಮದ ನಿವಾಸಿಯಾಗಿರುವ ಶ್ರೀದೇವಿ ಪೂಜಾರಿ ಅವರು ಶನಿವಾರ ಸಂಜೆ ತನ್ನ ಕೃಷಿ ಜಮೀನಿನಿಂದ ಮನೆಗೆ ಬರುವಾಗ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದರು.
ಮಹಿಳೆಗಾಗಿ ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ಗ್ರಾಮಸ್ಥರಿಂದ ಹುಡುಕಾಟ ನಡೆದಿತ್ತು. ಈ ಕುರಿತು ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | ಕೊಪ್ಪಳದ ಗವಿಮಠದ ಕೆರೆಯಲ್ಲಿ ಅಪರಿಚಿತ ಶವ ಪತ್ತೆ!