ಕಲಬುರಗಿ: ಸಮಾಜದಲ್ಲಿ ಶಾಂತಿ, ಸೌಹಾರ್ದತೆ, ಭಾವೈಕ್ಯತೆ ಮೂಡಿಸುವ ನಿಟ್ಟಿನಲ್ಲಿ ಜೈ ಭಾರತ ಮಾತಾ ಸೇವಾ ಸಮಿತಿ ಹಮ್ಮಿಕೊಂಡಿರುವ ಮಹಾತ್ಮ ಬಸವೇಶ್ವರರ ಜನ್ಮಭೂಮಿಯಿಂದ ಕರ್ಮಭೂಮಿಗೆ ನಡೆಯುತ್ತಿರುವ ಪಾದಯಾತ್ರೆ ಜೇವರ್ಗಿ ತಾಲೂಕಿನ ಮಂದೇವಾಲ ಮೂಲಕ ಕಲಬುರಗಿ ಜಿಲ್ಲೆ ಪ್ರವೇಶಿಸಿದೆ.
ಬಸವಾದಿ ಶರಣರ ಸಂದೇಶಗಳನ್ನು ಜನರಿಗೆ ತಲುಪಿಸುವ ಜತೆಗೆ ಎಲ್ಲರಲ್ಲಿ ಭಾವೈಕ್ಯತೆ ಮೂಡಿಸುವ ಉದ್ದೇಶದಿಂದ ಸಮಿತಿ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷ ಸದ್ಗುರು ಶ್ರೀ ಹವಾ ಮಲ್ಲಿನಾಥ ಮಹಾರಾಜ ನಿರಗುಡಿ ಮುತ್ಯಾ ನೇತೃತ್ವದಲ್ಲಿ ಹೊರಟಿರುವ ಪಾದಯಾತ್ರೆಗೆ, ಜೈ ಭಾರತ ಮಂದೇವಾಲದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು.
ಇದನ್ನೂ ಓದಿ | ಮಾರಮ್ಮನ ಜಾತ್ರೆಗೆ ಮುಸ್ಲಿಮರ ಪಾನೀಯ: ಚಂದ್ರಾ ಲೇಔಟ್‌ನಲ್ಲಿ ಚಂದದ ಸೌಹಾರ್ದತೆ
ವಿಜಯಪುರ ಮಾತಾ ಸಮಿತಿ ಜಿಲ್ಲೆಯ ಹುಲಜಯಂತಿ ಆಯೋಜನೆ ಪ್ರಸಿದ್ಧ ಮಾಳಿಂಗರಾಯ ಆಶ್ರಮದ ಪೂಜ್ಯರು ನಿರಗುಡಿ ಮುತ್ಯಾ ಅವರಿಗೆ ಕಂಬಳಿ ಫಲಪುಷ್ಪಗಳೊಂದಿಗೆ ಸಮ್ಮಾನಿಸಿ ಪಾದಯಾತ್ರೆಯಲ್ಲಿ ಭಾಗವಹಿಸಿದರು. ಪಾದಯಾತ್ರೆಯಲ್ಲಿ 30 ಕ್ಕೂ ಹೆಚ್ಚು ಅಲಂಕೃತ ವಾಹನಗಳಲ್ಲಿ ಇರಿಸಿರುವ ವಿವಿಧ ಧರ್ಮಗಳ ದೇವರು, ಮಹಾಪುರುಷರು, ಶರಣರು, ಸ್ವಾತಂತ್ರ್ಯ ಹೋರಾಟಗಾರರ ಬೃಹತ್ ಪ್ರತಿಮೆಗಳು ಗಮನ ಸೆಳೆಯುತ್ತಿವೆ.
ಬಸವನಬಾಗೇವಾಡಿಯಿಂದ ಬಸವಕಲ್ಯಾಣವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆ ಭಾನುವಾರ ಜೇವರ್ಗಿ ತಾಲೂಕಿನ ಮಂದೇವಾಲಕ್ಕೆ ಆಗಮಿಸಿದ ವೇಳೆ ಹುಲಜಯಂತಿ ಮಾಳಿಂಗರಾಯ ಆಶ್ರಮದ ಪೂಜ್ಯರು ನಿರಗುಡಿ ಮುತ್ಯಾ ಅವರಿಗೆ ಕಂಬಳಿ ಹೊದಿಸಿ ಸನ್ಮಾನಿಸಲಾಯಿತು.
ಇದನ್ನೂ ಓದಿ| ಬಸವ ಜಯಂತಿ: ಭಕ್ತಿ ಭಂಡಾರಿ ಬಸವಣ್ಣನವರ ನೆನಪು, ಸಂದೇಶ