ಕಲಬುರಗಿ: ಸುವರ್ಣ ಕರ್ನಾಟಕ ಸಂಭ್ರಮದ (Karnataka Sambhrama 50) ಹಿನ್ನೆಲೆಯಲ್ಲಿ ನವೆಂಬರ್ 1 ರಿಂದ 30 ರವರೆಗೆ ಕಲಬುರಗಿಯ ಪ್ರತಿಷ್ಠಿತ ಶ್ರೀ ಸಿದ್ದಲಿಂಗೇಶ್ವರ ಬುಕ್ ಡಿಪೊ ಮತ್ತು ಪ್ರಕಾಶನ, ಸಹೋದರಿ ಸಂಸ್ಥೆಗಳಾದ ಬಸವ ಪ್ರಕಾಶನ ಮತ್ತು ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನ ಮೂರು ಸಂಸ್ಥೆಗಳು ಪ್ರಕಟ ಮಾಡಿದ ಸಾಹಿತ್ಯ ಕೃತಿಗಳು, ಪರಿಚಯ ಮಾಲಿಕೆ, ಜನಪ್ರಿಯ ಮಾಲಿಕೆ ಪುಸ್ತಕಗಳನ್ನು ಶೇ. 50 ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು ಎಂದು ಪುಸ್ತಕೋದ್ಯಮಿ, ಪ್ರಕಾಶಕರಾದ ಬಸವರಾಜ ಜಿ ಕೊನೇಕ್ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮೂರು ಪ್ರಕಾಶನ ಸಂಸ್ಥೆಗಳು ಪ್ರಕಟ ಮಾಡಿದ ಕಲಾ, ವಿಜ್ಞಾನ, ವಾಣಿಜ್ಯ (ಭಾಷಾ ಪಠ್ಯ ಹೊರತುಪಡಿಸಿ) ಪಠ್ಯಪುಸ್ತಕಗಳನ್ನು ಶೆ. 20 ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಶ್ರೀ ಸಿದ್ದಲಿಂಗೇಶ್ವರ ಬುಕ್ ಮಹಲ್ ಸರಸ್ವತಿ ಗೋದಾಮಿನಲ್ಲಿ ಪುಸ್ತಕಗಳು ಲಭ್ಯವಾಗಲಿವೆ ಎಂದು ಹೇಳಿದ್ದಾರೆ.
ಸುವರ್ಣ ಕರ್ನಾಟಕ ಸಂಭ್ರಮವನ್ನು ನಮ್ಮ ಪ್ರಕಾಶನ ಸಂಸ್ಥೆ ವಿಶಿಷ್ಟವಾಗಿ ಆಚರಿಸಲು ನಿರ್ಧರಿಸಿ ಓದುಗರು, ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಉಪನ್ಯಾಸಕರು, ಸಾಹಿತ್ಯ ಆಸಕ್ತರು ಹಾಗೂ ಪುಸ್ತಕ ಸಂಸ್ಕೃತಿಯ ಅಭಿಮಾನಿಗಳಿಗೆ ನಮ್ಮ ಪ್ರಕಾಶನದ ಕೃತಿಗಳನ್ನು ರಿಯಾಯಿತಿ ದರದಲ್ಲಿ ನೀಡುವ ಸಂಕಲ್ಪ ಮಾಡಿದ್ದೇವೆ. ಈ ತಿಂಗಳ ಅವಧಿಯಲ್ಲಿ ಕವಿಗೋಷ್ಠಿ, ವಿಚಾರ ಸಂಕಿರಣ ಆಯೋಜಿಸಲಾಗುವುದೆಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ | Kannada Rajyotsava: ನಮಗೆ ತಿಳಿದಿರಲೇಬೇಕು, ಕರ್ನಾಟಕ ಹವಾಗುಣದ ಪರಿಚಯ
ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣಗೊಂಡು 50 ವರ್ಷ ತುಂಬಿದೆ. ಸುವರ್ಣ ಕರ್ನಾಟಕ ಸಂಭ್ರಮ ಹಿನ್ನೆಲೆಯಲ್ಲಿ ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ನ. 1ರಿಂದ ಒಂದು ತಿಂಗಳ ಕಾಲ ವಿಶಿಷ್ಟವಾಗಿ ಆಚರಿಸಲು ಶ್ರೀ ಸಿದ್ದಲಿಂಗೇಶ್ವರ ಬುಕ್ ಡಿಪೊ ಮತ್ತು ಪ್ರಕಾಶನ, ಸಹೋದರಿ ಸಂಸ್ಥೆಗಳಾದ ಬಸವ ಪ್ರಕಾಶನ ಮತ್ತು ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನ ಮುಂದಾಗಿವೆ.