ಕಲಬುರಗಿ: ವೈದ್ಯರ ನಿರ್ಲಕ್ಷ್ಯದಿಂದ ಒಂದು ದಿನದ ಹಸುಗೂಸು ಸಾವಿಗೀಡಾಗಿದೆ ಎಂದು ಆಕ್ರೋಶಗೊಂಡಿರುವ ಪೋಷಕರು ಹಾಗೂ ಕುಟುಂಬಸ್ಥರು ಅಫಜಲಪುರ ಪಟ್ಟಣದ ತಾಲೂಕು ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಅಫಜಲಪುರ ಪಟ್ಟಣದ ನಿವಾಸಿಗಳಾದ ನೌಶಹಾದ್ ಬೇಗಂ ಹಾಗೂ ಅಬ್ಲುಲ್ ಹಳ್ಯಾಳ ಅವರ ಮಗು ಸಾವಿಗೀಡಾಗಿದೆ. ತಾಯಿ 22ರಂದು ಡೆಲಿವರಿಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, 23ರಂದು ಗಂಡು ಮಗು ಜನನವಾಗಿತ್ತು. ರಾತ್ರಿ ಮಗು ಹಾಲು ಕುಡಿಯುತ್ತಿಲ್ಲ ಎಂದು ಸಿಬ್ಬಂದಿಗಳನ್ನು ಕರೆದಾಗ ವೈದ್ಯರು ಸ್ಪಂದಿಸಿಲ್ಲ. ವೈದ್ಯರಿಲ್ಲ ಅಂದರೆ ನಮ್ಮನ್ನು ಕಲಬುರಗಿಗೆ ಹೋಗಲು ಬಿಡಿ ಎಂದು ಗೋಗರೆದರೂ ಆಸ್ಪತ್ರೆ ಸಿಬ್ಬಂದಿಗಳು ಕ್ಯಾರೇ ಎಂದಿಲ್ಲ. ಇಂದು ಬೆಳಗಿನ ಜಾವ ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವಿಗೀಡಾಗಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆ ಬಾಗಿಲು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Doctor negligence: ಅನಾರೋಗ್ಯದಿಂದ ಬಾಲ ನಟಿ ಬಲಿ, ವೈದ್ಯರ ನಿರ್ಲಕ್ಷ್ಯ ಆರೋಪ