Site icon Vistara News

Kalaburagi News: ತಾಂಡಾಗಳನ್ನು ಕಂದಾಯ ಗ್ರಾಮಗಳೆಂದು ಮೊದಲು ಘೋಷಿಸಿದ್ದೇ ಕಾಂಗ್ರೆಸ್: ಪ್ರಿಯಾಂಕ್ ಖರ್ಗೆ

Congress declared Tandas as revenue villages first says Minister Priyank Kharge

ಕಲಬುರಗಿ: ತಾಂಡಾಗಳನ್ನು ಕಂದಾಯ ಗ್ರಾಮಗಳೆಂದು (Revenue Villages) ಮೊದಲು ಘೋಷಿಸಿದ್ದೇ ಕಾಂಗ್ರೆಸ್ ಸರ್ಕಾರ (Congress Government). ಆದರೆ, ನಮ್ಮ ಯೋಜನೆಗಳನ್ನು ಬಿಜೆಪಿಯವರು (BJP) ತಮ್ಮದೆಂದು ಬಿಂಬಿಸುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ (Kalaburagi News) ಆರೋಪಿಸಿದರು.

ಚಿಂಚೋಳಿ ತಾಲೂಕಿನ ಕೊರವಿ ದೊಡ್ಡ ತಾಂಡದಲ್ಲಿ ನಡೆಯುತ್ತಿರುವ ಕಾಳಿಕಾದೇವಿ ದೇವಾಲಯದ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇದನ್ನೂ ಓದಿ: Gold Rate Today: ಮತ್ತೆ ಚಿನ್ನದ ದರ ಏರಿಕೆ ಆರಂಭ; ಖರೀದಿಸುವ ಮುನ್ನ ದರದ ಜೊತೆಗೆ ಇದೂ ತಿಳಿದಿರಲಿ

ತಾಂಡಾ ಅಭಿವೃದ್ದಿ ನಿಗಮಕ್ಕೆ ರೂ 240 ಕೋಟಿ, ಬಂಜಾರ ಸಮುದಾಯದ ಆಚಾರ ವಿಚಾರ ಸಂಸ್ಕೃತಿಯ ರಕ್ಷಣೆಗಾಗಿ ಸಂತ ಸೇವಲಾಲರ ಹೆಸರಿನಲ್ಲಿ ಸಂತ ಸೇವಾಲಾಲ ಪ್ರಗತಿ ತಾಂಡಾಗಳನ್ನು ಘೋಷಿಸಿ, ಪ್ರತಿ ತಾಂಡಾಗಳಿಗೆ ರೂ 50 ಲಕ್ಷದಿಂದ ರೂ 2 ಕೋಟಿ,‌ ಸಂತ ಸೇವಾಲಾಲ್ ಹೆಸರಿನಲ್ಲಿ 400 ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ (ಪ್ರತಿಯೊಂದಕ್ಕೆ ರೂ 25 ಲಕ್ಷ ) ಅನುದಾನ, ಲಾಲ್ ಧರಿಯಲ್ಲಿ ಸ್ಕಿಲ್ ಸೆಂಟರ್ ಗೆ ಕಸೂತಿ ನಿರ್ಮಾಣ ಮಾಡಲು ರೂ 50 ಕೋಟಿ ಅನುದಾನ, ಸೋರಗೊಂಡನಕೊಪ್ಪ ಗ್ರಾಮವನ್ನು ಪುಣ್ಯ ಕ್ಷೇತ್ರವನ್ನಾಗಿ ಅಭಿವೃದ್ದಿ ಮಾಡುವ ಉದ್ದೇಶದಿಂದಾಗಿ ರೂ 190 ಕೋಟಿ ಅನುದಾನ ತೆಗೆದಿರಿಸಿದ್ದೆ. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಎಲ್ಲಾ ಯೋಜನೆ ನಿಂತು ಹೋದವು ಎಂದು ಅಸಮಧಾನ ವ್ಯಕ್ತಪಡಿಸಿದರು.

ಬಂಜಾರರ ಹೆಸರಲ್ಲಿ ಮತ ತೆಗೆದುಕೊಂಡವರು ನಮ್ಮ ಯೋಜನೆಗಳನ್ನು ಯಾಕೆ ಮುಂದುವರೆಸಲಿಲ್ಲ. ಬಂಜಾರ ಸಮುದಾಯವನ್ನು ಯಾಕೆ ಅಭಿವೃದ್ದಿ ಪಡಿಸಲಿಲ್ಲ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ: Shiva Rajkumar: ಶಿವಣ್ಣ ಜತೆ ಆರ್ ಚಂದ್ರು ಹೊಸ ಸಿನಿಮಾ ಘೋಷಣೆ!

ಸುಭಾಷ್ ರಾಠೋಡ್‌ ಮಾತನಾಡಿ, ಬಂಜಾರ ಸಮಾಜ ಶಿಕ್ಷಣ ಪಡೆಯಬೇಕು. ತಮ್ಮ ದಾರಿ ತಪ್ಪಿಸುವವರ ಬಗ್ಗೆ ಜಾಗೃತರಾಗಿರಬೇಕು ಎಂದರು.

Exit mobile version