ಕಲಬುರಗಿ: ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಿ ಪಕ್ಷಕ್ಕೆ ಮತ (Vote) ಹಾಕಿಸಿದರೆ ನಾನು ಗೆಲ್ಲುವುದು ಶತಃಸಿದ್ಧ ಎಂದು ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ (Kalaburagi News) ತಿಳಿಸಿದರು.
ಕಮಲಾಪುರದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಬಳಿಕ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ನಿಮ್ಮ ಮತದ ಶಕ್ತಿಯ ಪರಿಣಾಮವಾಗಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಜತೆಗೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದು ನುಡಿದಂತೆ ನಡೆದ ಸರ್ಕಾರವಾಗಿದೆ ಎಂದರು.
ಇದನ್ನೂ ಓದಿ: Gold Rate Today: ಮತ್ತೆ ಚಿನ್ನದ ದರ ಏರಿಕೆ ಆರಂಭ; ಖರೀದಿಸುವ ಮುನ್ನ ದರದ ಜೊತೆಗೆ ಇದೂ ತಿಳಿದಿರಲಿ
ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ 52,000 ಕೋಟಿ ಬೇಕಾಗುತ್ತದೆ. ಆದರೂ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಬಿಜೆಪಿ ನಮ್ಮ ಯೋಜನೆಗಳನ್ನು ಬಿಟ್ಟಿ ಭಾಗ್ಯ ಎಂದು ಟೀಕಿಸಿದೆ. ಆದರೆ ನಮ್ಮ ಸರ್ಕಾರ ಜನರು ಕಟ್ಟಿದ ತೆರಿಗೆಯನ್ನೇ ಗ್ಯಾರಂಟಿ ಯೋಜನೆಗಳ ಮೂಲಕ ವಾಪಸ್ ಕೊಟ್ಟಿದ್ದೇವೆ. ಬಿಜೆಪಿಗರು ಇಂತಹ ಯಾವುದಾದರೂ ಒಂದು ಯೋಜನೆ ಜಾರಿಗೆ ತಂದಿದ್ದರೆ ಹೇಳಲಿ ಎಂದು ಸವಾಲು ಹಾಕಿದರು.
ಕೇಂದ್ರ ಸರ್ಕಾರ ಅನುದಾನ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದ ಸಚಿವರು, ಸಂಸದ ಉಮೇಶ ಜಾಧವ್ ಅವರು ಕೇಂದ್ರದಿಂದ ಅನುದಾನ ಬಿಡುಗಡೆ ಮಾಡಿಸುವಲ್ಲಿ ವಿಫಲರಾಗಿದ್ದಾರೆ. ಜಿಲ್ಲೆಯ ಅಭಿವೃದ್ದಿ ಮಾಡುವಲ್ಲಿ ಕೂಡಾ ವಿಫಲರಾಗಿರುವ ಜಾಧವ್, ಕೇವಲ ಐದು ಯೋಜನೆ ಮಾಡಿರುವುದನ್ನು ತೋರಿಸಲಿ. ಕೋಲಿ, ಕಬ್ಬಲಿಗ ಸಮಾಜವನ್ನು ಎಸ್‌ಟಿಗೆ ಸೇರಿಸುತ್ತೇನೆ ಎಂದು ಭರವಸೆ ನೀಡಿದ್ದರು ಈಗ ಏನು ಹೇಳುತ್ತಾರೆ? ಎಂದರು.
ಇದನ್ನೂ ಓದಿ: Shiva Rajkumar: ಶಿವಣ್ಣ ಜತೆ ಆರ್ ಚಂದ್ರು ಹೊಸ ಸಿನಿಮಾ ಘೋಷಣೆ!
ಯುವಕರ ಉಜ್ವಲ ಭವಿಷ್ಯಕ್ಕಾಗಿ, ರೈತರ, ಕೂಲಿ ಕಾರ್ಮಿಕರ ಬದುಕಿಗಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡಿ. ಮುಂದಿನ ಐದು ವರ್ಷ ನಿಮಗಾಗಿ ಇನ್ನೂ ಹಲವಾರು ಗ್ಯಾರಂಟಿಗಳನ್ನು ನಾವು ಕೊಡುತ್ತೇವೆ ಎಂದು ಭರವಸೆ ನೀಡಿದರು.
ಸಚಿವ ಶರಣಪ್ರಕಾಶ್ ಪಾಟೀಲ್ ಮಾತನಾಡಿ, ಕೇಂದ್ರ ಸರ್ಕಾರ ನಮ್ಮ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸಿತ್ತು. ಅನ್ನಭಾಗ್ಯ ಯೋಜನೆಗೆ ಬೇಕಾಗುವ ಅಕ್ಕಿಯನ್ನು ಕೊಡಲಿಲ್ಲ. ಆದರೂ ಕೂಡಾ ಸರ್ಕಾರ ಅಕ್ಕಿ ಖರೀದಿ ಮಾಡಲು ಹಣ ಕೊಡುವ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ ಎಂದರು.
ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ಅವರನ್ನು ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ: SmartPhone: ಆನ್‌ಲೈನ್‌ನಲ್ಲಿ ಮೊಬೈಲ್ ಖರೀದಿಸುವ ಯೋಚನೆ ಇತ್ತಾ? ನಿಮಗೊಂದು ಶಾಕಿಂಗ್ ನ್ಯೂಸ್!
ಈ ಸಂದರ್ಭದಲ್ಲಿ ಡಿಸಿಸಿ ಅಧ್ಯಕ್ಷ ಜಗದೇವ ಗುತ್ತೇದಾರ, ಎಂಎಲ್‌ಸಿ ತಿಪ್ಪಣ್ಣಪ್ಪ ಕಮಕನೂರು, ಮಾಜಿ ಸಚಿವ ಬಾಬುರಾವ್ ಚಿಂಚನಸೂರು, ರೇವು ನಾಯಕ ಬೆಳಮಗಿ, ಸುಭಾಷ್ ರಾಠೋಡ್, ರಾಜಗೋಪಾಲರೆಡ್ಡಿ, ಜಗನ್ನಾಥ ಗೋದಿ, ಶ್ಯಾಮ್ ನಾಟೀಕಾರ್, ಡೇವಿಡ್ ಸಿಮೆಯೋನ್, ವೈಜನಾಥ್ ಪಾಟೀಲ ತಡಕಲ್, ವಿಜಯಕುಮಾರ ಆರ್. ಸೇರಿದಂತೆ ಇತರರು ಉಪಸ್ಥಿತರಿದ್ದರು.