ಶಹಾಬಾದ್: ಪ್ರತಿ ಮನೆಯಿಂದಲೂ ನಿತ್ಯ ಉತ್ಪಾದನೆಯಾಗುವ ಕಸವನ್ನು (Garbage) ಆರಂಭದಲ್ಲಿಯೇ ಒಣ, ಹಸಿ ಕಸ, ಪ್ಲಾಸ್ಟಿಕ್, ಗಾಜಿನ (Glass) ವಸ್ತುಗಳನ್ನು ವಿಂಗಡಿಸಿದರೆ ಶೇ.75ರಷ್ಟು ಕಸವನ್ನು ಸುಲಭವಾಗಿ ನಿರ್ವಹಿಸಬಹುದು ಎಂದು ಗ್ರಾ.ಪಂ. ಅಧ್ಯಕ್ಷ ಮೆಹೆಬೂಬ್ ಪಟೇಲ್ ತಿಳಿಸಿದರು.
ತಾಲೂಕಿನ ಹೋನಗುಂಟಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ 15ನೇ ಹಣಕಾಸು ಯೋಜನೆಯಡಿಯಲ್ಲಿ ಮನೆ ಕಸ ನಿರ್ವಹಣೆ ಸಲುವಾಗಿ ಕಸದ ಬುಟ್ಟಿಗಳನ್ನು ವಿತರಿಸಿ ಮಾತನಾಡಿದರು.
ಇದನ್ನೂ ಓದಿ: ಅಮಿತಾಬ್ ಬಳಿಕ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ಗೆ ಗೋಲ್ಡನ್ ಟಿಕೆಟ್ ನೀಡಿದ ಬಿಸಿಸಿಐ
ಪ್ರತಿ ಮನೆಯಿಂದಲೂ ಕಸ ವಿಂಗಡಣೆ ನಿರೀಕ್ಷೆ ಮಾಡಲಾಗಿದ್ದು, ಇಂತಹ ಪ್ರಯತ್ನಗಳು ನಡೆದಲ್ಲಿ ಶೂನ್ಯ ಕಸ ನಿರ್ವಹಣೆಗೆ ಹೆಚ್ಚಿನ ಆದ್ಯತೆ ಸಿಗಲಿದೆ ಎಂದು ಹೇಳಿದರು.
ಪ್ರತಿಯೊಬ್ಬರೂ ಸ್ವಯಂ ಪ್ರೇರಿತರಾಗಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿ ಮನೆ ಜತೆಗೆ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವ ಕಾರ್ಯದಲ್ಲಿ ತೊಡಗಬೇಕು. ಪರಿಸರ ನಮ್ಮ ಮನೆಯೆಂದೇ ಭಾವಿಸಿ ಸ್ವಚ್ಛಗೊಳಿಸಿದರೆ ಮಾದರಿ ಗ್ರಾಮ ಎನಿಸಿಕೊಳ್ಳಲಿದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ: Viral Video: ಮೂರು ಹೆಬ್ಬಾವುಗಳನ್ನು ಹಿಡಿದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಜಗನ್ನಾಥ, ಸದಸ್ಯರಾದ ರಾಜು ಆಡಿನ, ಸಂಗಣ್ಣ ಇಜೇರಿ, ರಾಯಪ್ಪ ಮಿನಜಿಗಿ, ಇಸ್ಮಾಯಿಲ್ ಶಹಾ, ಮಲ್ಲೇಶಿ ಬಜಂತ್ರಿ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗ ಮತ್ತು ಇತರರು ಉಪಸ್ಥಿತರಿದ್ದರು.