Site icon Vistara News

Kalaburagi News: ಕಲಬುರಗಿಯಲ್ಲಿ ಗಾಂಧಿ ಜಯಂತಿ; ಕಾರಿಡಾರ್‌ ಸುತ್ತಾಡಿ ಕಸಗೂಡಿಸಿದ ಡಿಸಿ ಫೌಜಿಯಾ ತರನ್ನುಮ್

Kalaburagi DC Fauzia tarannum clened dc office

ಕಲಬುರಗಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 154ನೇ ಜಯಂತಿ (Gandhi Jayanti) ಅಂಗವಾಗಿ ಭಾನುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶ್ರಮದಾನ ನಡೆಯಿತು.

ನಗರದ ಡಿಸಿ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಪೊರಕೆ ಹಿಡಿದು ಕಾರಿಡಾರ್ ಸುತ್ತಾಡಿ ಕಸಗೂಡಿಸಿದರು.

ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಯೋಗದೊಂದಿಗೆ ನಡೆದ‌ ಸ್ವಚ್ಚತಾ ಕಾರ್ಯಕ್ರಮಕ್ಕೆ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಸೇರಿದಂತೆ ಅನೇಕ‌ ಜಿಲ್ಲಾ ಮಟ್ಟದ ಅಧಿಕಾರಿಗಳು ಡಿ.ಸಿ.ಗೆ ಸಾತ್ ನೀಡಿದರು. ಸುಮಾರು ಎರಡು ಗಂಟೆಗಳ ಕಾಲ ಶ್ರಮದಾನ ನಡೆಯಿತು.

ಕಚೇರಿ ಹೊರಾಂಗಣ, ಒಳಾಂಗಣ, ನೆಲ ಮಹಡಿ, ಮೊದಲನೇ ಮಹಡಿ, ತಮ್ಮ‌ ಕೊಠಡಿ ಸಭಾಂಗಣ ಹೀಗೆ ಎಲ್ಲಡೆ ಡಿ.ಸಿ.ಅವರು ಅಧಿಕಾರಿ, ಸಿಬ್ಬಂದಿ ಜತೆಗೂಡಿ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದರು. ಆಯಾ ಇಲಾಖೆಯವರು ತಮ್ಮ‌ ಕಚೇರಿ ಆವರಣ ಸ್ವಚ್ಚತೆ ಕಾಪಾಡಿಕೊಳ್ಳಬೇಕು ಮೇಲಿನ ಮಹಡಿಯವರು ಕೆಳಗಡೆ ಕಸ ಬಿಸಾಕಿದಲ್ಲಿ ಅಂತವರಿಗೆ ದಂಡ ವಿಧಿಸಿ, ಸಾಧ್ಯವಾದರೆ ಸಿ.ಸಿ.ಟಿ.ವಿ ಅಳವಡಿಸಿ ಎಂದು ಸೂಚಿಸಿದರು.

ಇದನ್ನೂ ಓದಿ: Asian Games 2023: ಟಿಟಿಯಲ್ಲಿ ಕಂಚು ಗೆದ್ದ ಐಹಿಕಾ-ಸುತೀರ್ಥ ಜೋಡಿ

ಮಿನಿ ವಿಧಾನಸೌಧ ಆವರಣದಲ್ಲಿರುವ ಆಹಾರ ಇಲಾಖೆಯ ಅಧಿಕಾರಿ-ಸಿಬ್ಬಂದಿ ವರ್ಗದವರು ಸಹ ತಮ್ಮ ಕಚೇರಿ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದರು. ಕಚೇರಿಯ ಮ್ಯಾನೇಜರ್ ಅಲ್ಲಾಭಕ್ಷ, ಗೋಪಾಲ ಅವರು ನೀರು ಹಾಕಿ‌ ನೆಲ ಹಾಸು ತೊಳೆದರು. ಗುಟಕಾ, ಪಾನ್ ತಿಂದು ಉಗುಳಿದ ಕಲೆಗಳನ್ನು ನೀರು ಹಾಕಿ ಸ್ವಚ್ಛಗೊಳಿಸಲಾಯಿತು.

ವಿಶೇಷ‌ ಭೂಸ್ವಾಧೀನಾಧಿಕಾರಿ ಡಿ.ಎಂ‌.ಪಾಣಿ, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ಹಕ್ಕುಗಳ ಇಲಾಖೆಯ ಉಪನಿರ್ದೇಶಕ ಶಾಂತಗೌಡ ವಿ. ಗುಣಕಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿವಶರಣಪ್ಪ ಮೂಳೆಗಾಂವ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಹೆಚ್.ಎಂ.ಹರನಾಳ, ಡಿ.ಸಿ. ಕಚೇರಿಯ ಸಾಮಾಜಿಕ‌ ಭದ್ರತಾ ವಿಭಾಗದ ಸಹಾಯಕ ನಿರ್ದೇಶಕ ಶಿವಶರಣಪ್ಪ ಧನ್ನಿ, ಚುನಾವಣಾ ತಹಶೀಲ್ದಾರ ಪಂಪಯ್ಯ, ಡಿ.ಯು.ಡಿ.ಸಿ ಎ.ಇ.ಇ. ಸೋಮು ರಾಠೋಡ, ಸೇರಿದಂತೆ ಜಿಲ್ಲಾಡಳಿತ‌ ಭವನದಲ್ಲಿರುವ ವಿವಿಧ ಇಲಾಖೆಯ ಸಿಬ್ಬಂದಿಗಳು, ಡಿ.ಸಿ.ಕಚೇರಿ ಸಿಬ್ಬಂದಿಗಳು ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದ್ದರು.

ಇದನ್ನೂ ಓದಿ: Car Sales: ಆಟೊಮೊಬೈಲ್‌ ವಲಯ ಚೇತರಿಕೆ, ಸೆಪ್ಟೆಂಬರ್‌ನಲ್ಲಿ ಕಾರುಗಳ ಸಾರ್ವಕಾಲಿಕ ದಾಖಲೆ ಮಾರಾಟ

ಕಲಬುರಗಿ ಮಹಾನಗರ ಪಾಲಿಕೆಯ ಆರೋಗ್ಯ ನಿರೀಕ್ಷಕ ಬಸವರಾಜ ಕಲಾಲ್, ಅರುಣ ಕುಮಾರ, ರಾಜಕುಮಾರ, ಮೇಲ್ವಿಚಾರಕ ಪ್ರಶಾಂತ ಮತ್ತು ಪಾಲಿಕೆ ಪೌರಕಾರ್ಮಿಕರು ಇದ್ದರು.

Exit mobile version